ದ್ರಾಕ್ಷಿ ಬೆಳೆಗಾರರಿಗೆ ತಂದಿದೆ ಲಾಕ್ ಡೌನ್ ಸಂಕಷ್ಟ: ಸಾರಿಗೆ ವ್ಯವಸ್ಥೆಯಿಲ್ಲದೆ ಟನ್ ಗಟ್ಟಲೆ ಹಣ್ಣು ಮಣ್ಣುಪಾಲು

ದ್ರಾಕ್ಷಿ ಬೆಳೆಗಾರರಿಗೆ ತಂದಿದೆ ಲಾಕ್ ಡೌನ್ ಸಂಕಷ್ಟ: ಸಾರಿಗೆ ವ್ಯವಸ್ಥೆಯಿಲ್ಲದೆ ಟನ್ ಗಟ್ಟಲೆ ಹಣ್ಣು ಮಣ್ಣುಪಾಲು

ಲಾಕ್ ಡೌನ್ ವಿಸ್ತರಣೆಯಿಂದ ಬೆಂಗಳೂರು ಗ್ರಾಮಾಂತರ, ನಗರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ದ್ರಾಕ್ಷಿ ಬೆಳೆಗಾರರಲ್ಲಿ ಆತಂಕ ಮೂಡಿದೆ. ವಿವಿಧ ಬಗೆಯ ದ್ರಾಕ್ಷಿಗಳನ್ನು ಬೆಳೆದು ಇಷ್ಟು ವರ್ಷ ಬೇರೆ ಬೇರೆ ರಾಜ್ಯಗಳಿಗೆ ಮಾರುತ್ತಿದ್ದವರು ಈಗ ಸಂಚಾರ ಸಾಗಣೆ ವ್ಯವಸ್ಥೆ ಇಲ್ಲದೆ ಸಮಸ್ಯೆಯುಂಟಾಗಿದೆ.

ಬೆಂಗಳೂರು:ಲಾಕ್ ಡೌನ್ ವಿಸ್ತರಣೆಯಿಂದ ಬೆಂಗಳೂರು ಗ್ರಾಮಾಂತರ, ನಗರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ದ್ರಾಕ್ಷಿ ಬೆಳೆಗಾರರಲ್ಲಿ ಆತಂಕ ಮೂಡಿದೆ. ವಿವಿಧ ಬಗೆಯ ದ್ರಾಕ್ಷಿಗಳನ್ನು ಬೆಳೆದು ಇಷ್ಟು ವರ್ಷ ಬೇರೆ ಬೇರೆ ರಾಜ್ಯಗಳಿಗೆ ಮಾರುತ್ತಿದ್ದವರು ಈಗ ಸಂಚಾರ ಸಾಗಣೆ ವ್ಯವಸ್ಥೆ ಇಲ್ಲದೆ ಸಮಸ್ಯೆಯುಂಟಾಗಿದೆ. ಕೇಂದ್ರ ಸರ್ಕಾರ ಮಧ್ಯೆ ಪ್ರವೇಶಿಸಿ 1 ಲಕ್ಷ ಮೆಟ್ರಿಕ್ ಟನ್ ದ್ರಾಕ್ಷಿ ಹಾಳಾಗದಂತೆ ನೋಡಿಕೊಳ್ಳುವಂತೆ ತೋಟಗಾರಿಕೆ ಇಲಾಖೆ ಕೋರಿದೆ.

ಅಗತ್ಯ ವಸ್ತುಗಳ ಸಾಗಣೆಯನ್ನು ಸುಗಮಗೊಳಿಸಿದರೂ ಕೂಡ ಅದು ಸರ್ಕಾರದ ಪುಟದಲ್ಲಿ ಮಾತ್ರವಿದೆ. ವಾಸ್ತವ ಪರಿಸ್ಥಿತಿ ಬೇರೆ ರೀತಿಯಿದೆ. ದ್ರಾಕ್ಷಿ ತೆಗೆದುಕೊಳ್ಳುವವರು ಇಲ್ಲದಿರುವುದರಿಂದ ರೈತರು ತಾವು ಬೆಳೆದ ಬೆಳೆಗಳನ್ನು ಗುಂಡಿಗೆ ಎಸೆಯಬೇಕಾದ ಪರಿಸ್ಥಿತಿ ಬಂದಿದೆ. ಈ ಬಗ್ಗೆ ಸರ್ಕಾರ ಗಮನಹರಿಸಿ ಸಮಸ್ಯೆ ಬಗೆಹರಿಸಬೇಕು ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಕೇವಲ ದ್ರಾಕ್ಷಿ ಮಾತ್ರವಲ್ಲದೆ 6 ಸಾವಿರದ 48 ಸಾವಿರ ಮೆಟ್ರಿಕ್ ಟನ್ ಇತರ ಹಣ್ಣುಗಳು ಸಹ ಬೆಳೆದು ಸಾಗಣೆ ಮಾಡಲು ಸಾಧ್ಯವಾಗದೆ ಹಾಳಾಗುತ್ತಿವೆ.

ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಮಾಹಿತಿ ನೀಡಿದ ಇಲಾಖೆ ನಿರ್ದೇಶಕ ಬಿ ವೆಂಕಟೇಶ್, ಕರ್ನಾಟಕ ರಾಜ್ಯ ಹಣ್ಣುಗಳನ್ನು ಬೆಳೆಯುವ ಪ್ರದೇಶವಾಗಿದ್ದು ಇಲ್ಲಿ ಸಾಕಷ್ಟು ಬೆಳೆಯಾಗಿದೆ, ಆದರೆ ಖರೀದಿಸುವವರು ಇಲ್ಲ. ಸದ್ಯದಲ್ಲಿಯೇ ಮಾವಿನಹಣ್ಣು ಹಣ್ಣು-ತರಕಾರಿಗಳ ಪಟ್ಟಿಗೆ ಸೇರುತ್ತದೆ. ಹೀಗಾಗಿ ಮೂರು ದಿನಗಳ ಹಿಂದೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದೇವೆ. ಇನ್ನು ನಾಲ್ಕೈದು ದಿನಗಳಲ್ಲಿ ಅಲ್ಲಿಂದ ಉತ್ತರ ಬರದಿದ್ದರೆ ರಾಜ್ಯ ಸರ್ಕಾರವನ್ನು ಕೇಳುತ್ತೇವೆ ಎಂದರು.

ಸಾಮಾನ್ಯ ದಿನಳಲ್ಲಾದರೆ ಬೆಂಗಳೂರು ನಗರವೊಂದರಲ್ಲಿಯೇ 200ರಿಂದ 300 ಮೆಟ್ರಿಕ್ ಟನ್ ಕಲ್ಲಂಗಡಿ ಹಣ್ಣು ಖರ್ಚಾಗುತ್ತದೆ. ರಸ್ತೆ ಬದಿಯ ವ್ಯಾಪಾರಿಗಳು, ಹಣ್ಣು ಜ್ಯೂಸ್ ಮಾರಾಟಗಾರರು, ಹೊಟೇಲ್ ಗಳು, ರೆಸ್ಟೋರೆಂಟ್ ಗಳಲ್ಲಿ ಬಳಕೆಯಾಗುತ್ತದೆ.ಆದರೆ ಲಾಕ್ ಡೌನ್ ನಿಂದಾಗಿ ಅದು ಶೂನ್ಯಕ್ಕೆ ಇಳಿದಿದೆ ಎಂದರು.

ಸಾಮಾನ್ಯವಾಗಿ ಉತ್ತರ ಭಾರತಕ್ಕೆ ಕರ್ನಾಟಕದಿಂದ ಶೇಕಡಾ 40ರಷ್ಟು ಹಣ್ಣು-ತರಕಾರಿಗಳು ಹೋಗುತ್ತವೆ. ಆದರೆ ಇಂದು ಸಾರಿಗೆ ಸಮಸ್ಯೆಯಿಂದಾಗಿ ಮಾರುಕಟ್ಟೆಗೆ ತಲುಪಿಸುವುದು ದೊಡ್ಡ ಸಮಸ್ಯೆಯಾಗಿದೆ. ಬೇಗನೆ ಹಾಳಾಗಿ ಹೋಗುವ ವಸ್ತುಗಳನ್ನು ಪೂರೈಕೆ ಮಾಡುವಲ್ಲಿ ಕರ್ನಾಟಕ ಬಹಳ ದೊಡ್ಡ ಸವಾಲನ್ನು ಎದುರಿಸುತ್ತಿದೆ.

Related Stories

No stories found.

Advertisement

X
Kannada Prabha
www.kannadaprabha.com