ನೀರಿನ ಬಿಲ್ ಪಾವತಿಗೆ ಬೆಂಗಳೂರು ಜಲಮಂಡಳಿಯಿಂದ ಕ್ರಮ

ನೀರಿನ ಬಿಲ್ ಪಾವತಿಯ ಕುರಿತ ಮಾಹಿತಿ ಹಾಗೂ ಕಾಲರಾ ತಡೆಗಟ್ಟುವ ನಿಟ್ಟಿನಲ್ಲಿ ಬೆಂಗಳೂರು ಜಲಮಂಡಳಿಯ ಹಲವು ಜನಸ್ನೇಹಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. 
ಬೆಂಗಳೂರು ನೀರು ಸರಬರಾಜು ಮಂಡಳಿ
ಬೆಂಗಳೂರು ನೀರು ಸರಬರಾಜು ಮಂಡಳಿ
Updated on

ಬೆಂಗಳೂರು: ನೀರಿನ ಬಿಲ್ ಪಾವತಿಯ ಕುರಿತ ಮಾಹಿತಿ ಹಾಗೂ ಕಾಲರಾ ತಡೆಗಟ್ಟುವ ನಿಟ್ಟಿನಲ್ಲಿ ಬೆಂಗಳೂರು ಜಲಮಂಡಳಿಯ ಹಲವು ಜನಸ್ನೇಹಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ನಗರದಲ್ಲಿ ಕೊವಿಡ್ -19 ಹರಡುತ್ತಿರುವ ಹಿನ್ನೆಲೆಯಲ್ಲಿ ಅಂತರ ಕಾಯ್ದುಕೊಳ್ಳಬೇಕಾಗಿರುವ ಕಾರಣ ಜಲಮಂಡಳಿಯ ಮಾಪನ ಓದುಗರು ಮನೆಮನೆಗೆ ತೆರಳಿ ನೀರಿನ ಬಿಲ್‍ ಅನ್ನು ವಿತರಿಸಲು ಸಾಧ್ಯವಾಗದಿರುವುದರಿಂದ ನೀರಿನ ಬಿಲ್‍ನ ಮಾಹಿತಿಯನ್ನು ಜಲಮಂಡಳಿಯಲ್ಲಿ ಲಭ್ಯವಿರುವ ಗ್ರಾಹಕರ ಮೊಬೈಲ್ ನಂಬರ್ ಗಳಿಗೆ ಎಸ್.ಎಂ.ಎಸ್.ಮುಖಾಂತರ ಕಳುಹಿಸಲಾಗುತ್ತಿದ್ದು, ಎಸ್.ಎಂ.ಎಸ್.ನಲ್ಲಿರುವ ಲಿಂಕ್ ಮುಖಾಂತರ ನೀರಿನ ಬಿಲ್‍ಅನ್ನು ಪಾವತಿಸಬಹುದಾಗಿದೆ.

ಇದಲ್ಲದೆ ಜಲಮಂಡಳಿಯ ಅಧಿಕೃತ ವೆಬ್‍ಸೈಟ್ : www.bwssb.gov.in ನಲ್ಲಿ ಎಲ್ಲಾ ಗ್ರಾಹಕರ ಬಿಲ್‍ಗಳನ್ನು ವಾಚನ ದಿನವಹಿ ಪ್ರಕಟಿಸಲಾಗುತ್ತಿದ್ದು, ನೀರಿನ ಬಿಲ್ ಪಾವತಿಯನ್ನು ಮಂಡಳಿಯ ವೆಬ್‍ಸೈಟ್ ಹಾಗೂ ಆನ್‍ಲೈನ್ ಪೇಮೆಂಟ್ ಸೇವೆಗಳಾದ BBPS(Bharat Bill Payment System) ನಿಂದ ಲಭ್ಯವಿರುವ ಪೇಟಿಯಂ, ಫೋನ್ ಪೇ, ಗೂಗಲ್ ಪೇ ಮುಖಾಂತರವಾಗಿಯೂ ಮಾಡಬಹುದಾಗಿರುತ್ತದೆ. ಗ್ರಾಹಕರು ಇದರ ಸದುಪಯೋಗಪಡಿಸಿಕೊಳ್ಳಲು ಕೋರಲಾಗಿದೆ. ಬೆಂಗಳೂರು ಜಲಮಂಡಳಿಯು ನೀರು ಸರಬರಾಜು ಕೊಳವೆಯಲ್ಲಿ ಸೋರುವಿಕೆಯನ್ನು ಸಾರ್ವಜನಿಕರಿಂದ ಅಥವಾ ಮಂಡಳಿಯ ಸಿಬ್ಬಂದಿಯವರು ಗುರುತಿಸಿದ ತಕ್ಷಣ ಸೋರುವಿಕೆ ತಡೆಗಟ್ಟಲು ಕ್ರಮವಹಿಸಲಾಗುತ್ತದೆ. ಇದಲ್ಲದೆ ಕಲುಷಿತ ನೀರು ಸರಬರಾಜಾಗುತ್ತಿದ್ದಲ್ಲಿ ತಕ್ಷಣ ಕ್ರಮವಹಿಸಿ ಕಲುಷಿತ ನೀರು ಸರಬರಾಜು ಕೊಳವೆಗೆ ಸೇರದಂತೆ ಕೂಡಲೇ ಕಾರ್ಯ ಪ್ರವೃತ್ತರಾಗಿ ಕ್ರಮವಹಿಸಲಾಗುತ್ತದೆ. 

ಕಾಲರಾ ಮತ್ತು ಜಿ.ಇ. ಗೆ ಸಂಬಂಧಿಸಿದ ಮಾಹಿತಿಯನ್ನು ಸಾಂಕ್ರಾಮಿಕ ರೋಗಗಳ ಆಸ್ಪತ್ರೆಯಿಂದ ಏಪ್ರಿಲ್ 4 ರಿಂದ 15 ರ ವರೆಗೆ ನೋಂದಣಿಯಾದ ಪ್ರಕರಣಗಳ ವಿಳಾಸವನ್ನು ಪಡೆದು ಅಂತಹ ಸ್ಥಳಗಳಿಂದ ನೀರಿನ ಮಾದರಿಯನ್ನು ಸಂಗ್ರಹಿಸಿ ಮಾಹಿತಿ ಕ್ರೋಢೀಕರಿಸಲಾಗಿದೆ ಎಂದಿದ್ದಾರೆ.

ಕುಂದು ಕೊರತೆಗಳಿಗೆ ಸಂಬಂಧಿಸಿದಂತೆ ಮಂಡಲಿಯ 24/7 ದೂರು ನಿರ್ವಹಣಾ ಕೇಂದ್ರದ ದೂರವಾಣಿ ಸಂಖ್ಯೆ:22238888, ಸಹಾಯವಾಣಿ 1916 ಹಾಗೂ ವಾಟ್ಸ್‍ಆಪ್ ಸಂಖ್ಯೆ:8762228888 ಗೆ ಸಂಪರ್ಕಿಸಬಹುದಾಗಿದೆ. ತಮ್ಮ ಸಮೀಪದ ಸೇವಾಠಾಣೆಯ ದೂರವಾಣಿ ಸಂಖ್ಯೆಯನ್ನು ಮಂಡಳಿಯ ಅಧಿಕೃತ ವೆಬ್‍ಸೈಟ್: www.bwssb.gov.in ನಲ್ಲಿ ಪಡೆಯಬಹುದಾಗಿರುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com