ಮಂಡ್ಯ: ಲಾಕ್ ಡೌನ್ ಪರಿಣಾಮದಿಂದ ತಾನು ಬೆಳೆದ ತರಕಾರಿಯನ್ನು ಮಾರಲು ಸಾಧ್ಯವಾಗದೆ ,ಸಾಲದ ಬಾಧೆಯಿಂದ ರೈತನೋರ್ವ ಆತ್ಮಹತ್ಯೆಮಾಡಿಕೊಂಡಿರವ ಘಟನೆ ಪಾಂಡವಪುರ ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ರಾಮೇಗೌಡ (೬೫) ಎಂಬ ರೈತನೇ ಆತ್ಮಹತ್ಯೆಗೆ ಶರಣಾಗಿದ್ದು. ಈತ ಸುಮಾರು ಎರಡು ಎಕರೆ ಜಮೀನಿನಲ್ಲಿ ಟೊಮ್ಯಾಟೊ ಹಾಗೂ ಬೀನ್ಸ್ ಬೆಳೆದಿದ್ದ. ಎರಡೂ ಬೆಳೆಗಳ ಉತ್ತಮ ಫಸಲು ಬಂದಿತ್ತು, ಲಾಕ್‌ಡೌನ್ ಹಿನ್ನೆಲೆಯಲ್ಲಿ ಫಸಲನ್ನು ಮಾರಲಾಗದೇ ತಾನೇ ಇಡೀ ಫಸಲನ್ನು ನಾಶ ಮಾಡಿದ್ದ.
ರಾಮೇಗೌಡ ಈ ಫಸಲು ಬೆಳೆಯಲು ಸುಮಾರು ಐದು ಲಕ್ಷಕ್ಕೂ ಹೆಚ್ಚು ಖರ್ಚು ಮಾಡಿದ್ದು ಇದಕ್ಕಾಗಿ ಆತ ಲಕ್ಷಾಂತರ ರೂ ಸಾಲ ಮಾಡಿಕೊಂಡಿದ್ದ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಬೆಳೆ ನಾಶದ ಜೊತೆಗೆ ಬೆಳೆ ಸಾಲ ತೀರಿಸಲು ಸಾಧ್ಯವಾಗಿದೆ ಮಾನಸಿಕವಾಗಿ ಜರ್ಜರಿತನಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಈ ಕುರಿತು ಮೇಲುಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮೃತ ರೈತನ ಕುಟುಂಬಸ್ಥರು ಸೂಕ್ತ ಪರಿಹಾರಕ್ಕೆ ಒತ್ತಾಯ ಮಾಡಿದ್ದಾರೆ.
-ನಾಗಯ್ಯ
Advertisement