ಲಾಕ್ ಡೌನ್ ಎಫೆಕ್ಟ್: ಸಂಕಷ್ಟದಲ್ಲಿ ಉಡುಪಿ, ದಕ್ಷಿಣ ಕನ್ನಡದ 2 ಲಕ್ಷ ಕುಟುಂಬಗಳು!

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಸುಮಾರು 2 ಲಕ್ಷ ಬೀಡಿ ಕಾರ್ಮಿಕರು  ಲಾಕ್ ಡೌನ್ ಎಫೆಕ್ಟ್ ನಿಂದಾಗಿ ಸಂಕಷ್ಟಕ್ಕೀಡಾಗಿದ್ದಾರೆ. ಒಂಟಿ ಮಹಿಳೆಯರು, ವಿಧವೆಯರು, ಸಂಸಾರದ ನಿರ್ವಹಣೆ ಜವಾಬ್ದಾರಿ ಹೊತ್ತ ಹೆಚ್ಚಿನ ಮಹಿಳೆಯರು ಬೀಡಿ ಕಟ್ಟುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದು, ಪ್ರಸ್ತುತ ಅವರ ಸಂಸಾರದ ನಿರ್ವಹಣೆ ಕಠಿಣವಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಸುಮಾರು 2 ಲಕ್ಷ ಬೀಡಿ ಕಾರ್ಮಿಕರು ಲಾಕ್ ಡೌನ್ ಎಫೆಕ್ಟ್ ನಿಂದಾಗಿ ಸಂಕಷ್ಟಕ್ಕೀಡಾಗಿದ್ದಾರೆ. ಒಂಟಿ ಮಹಿಳೆಯರು, ವಿಧವೆಯರು, ಸಂಸಾರದ ನಿರ್ವಹಣೆ ಜವಾಬ್ದಾರಿ ಹೊತ್ತ ಹೆಚ್ಚಿನ ಮಹಿಳೆಯರು ಬೀಡಿ ಕಟ್ಟುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದು, ಪ್ರಸ್ತುತ ಅವರ ಸಂಸಾರದ ನಿರ್ವಹಣೆ ಕಠಿಣವಾಗಿದೆ.

ಬೀಡಿ ಗುತ್ತಿಗೆದಾರರು, ಏಜೆಂಟರಿಂದ ಬೀಡಿ ಎಲೆ ಮತ್ತು ತಂಬಾಕು ಪಡೆದು ತಮ್ಮ ತಮ್ಮ ಮನೆಗಳಲ್ಲಿ ಬೀಡಿ ಸುತ್ತಿ ಮತ್ತೆ ಗುತ್ತಿಗೆದಾರ ಅಥವಾ ಏಜೆಂಟರಿಗೆ ನೀಡಿ ಕೂಲಿ ಪಡೆಯುವ ವ್ಯವಸ್ಥೆ ಜಾರಿಯಲ್ಲಿದ್ದು, ಲಾಕ್‌ಡೌನ್‌ ಹಿನ್ನೆಲೆಯಲ್ಲಿಈ ಪ್ರಕ್ರಿಯೆಗೆ ಈ ಕೊಕ್ಕೆ ಬಿದ್ದಿದೆ. ಕಳೆದ ಎರಡು ವಾರಗಳಿಂದ ಕೂಲಿಯೂ ಸಿಗದೆ, ಕಟ್ಟಿದ ಬೀಡಿಯನ್ನು ಏಜೆಂಟರು ಪಡೆಯದ ಕಾರಣದಿಂದ ಕಾರ್ಮಿಕರು ಸಂಕಷ್ಟದ ಸುಳಿಗೆ ಸಿಲುಕಿದ್ದಾರೆ.

ರಾಜ್ಯದಲ್ಲಿ ಅಸಂಘಟಿತ ಕಾರ್ಮಿಕರ ಅಡಿಯಲ್ಲಿ ಬರುವ ಬೀಡಿ ಕೈಗಾರಿಕೆಯಲ್ಲಿ 9 ಲಕ್ಷಕ್ಕೂ ಹೆಚ್ಚು ಬೀಡಿ ಕಾರ್ಮಿಕರಿದ್ದಾರೆ. ಮಾರ್ಚ್ 22 ರಿಂದ ಬೀಡಿ ಕಟ್ಟುವ ಕಾರ್ಮಿಕರಿಗೆ ಯಾವುದೇ ಕಚ್ಚಾ ಸಾಮಾಗ್ರಿಗಳು ಪೂರೈಕೆಯಾಗಿಲ್ಲ.  ಹೀಗಾಗಿ ಬೀಡಿ ಕಟ್ಟುವ  ಕಾಯಕವಿಲ್ಲದೇ ಕಾರ್ಮಿಕರು ಕಂಗಾಲಾಗಿದ್ದಾರೆ.

ಬೀಡಿ ಕಾರ್ಮಿಕರ ಮನೆ ಬಾಗಿಲಿಗೆ  ಸಾಮಾಗ್ರಿ ಪೂರೈಸುತ್ತಿದ್ದರು. ಮೊದಲು ಪೂರೈಸಿದ ಸಾಮಾಗ್ರಿ ಖಾಲಿಯಾದ ಮೇಲೆ ಮತ್ತೆ ಹೊಸ ಸಾಮಾಗ್ರಿ ತಂದು ಕೊಡುತ್ತಿದ್ದರು.  ಬೀಡಿ ಕಾರ್ಮಿಕನೊಬ್ಬ ಪ್ರತಿದಿನ 100ರಿಂದ300 ರೂ ಸಂಪಾದಿಸುತ್ತಿದ್ದ. ಆದರೆ ಈಗ ಸಾಮಾಗ್ರಿ ಪೂರೈಕೆಯಾಗದ ಕಾರಣ ಬೀಡಿ ಸುತ್ತಲೂ ಸಾಧ್ಯವಾಗುತ್ತಿಲ್ಲ, ಆದರೆ ಈಗಾಗಲೇ ತಯಾರಿಸಿರುವ ಬೀಡಿ ಹೆಚ್ಚಿನ ಪ್ರಮಾಣದಲ್ಲಿರು ಕಾರಣ ಬೀಡಿ ಪೂರೈಕೆಯಾಗುತ್ತಿದೆ. ಜೊತೆಗೆ ಅಂಗಡಿ ಮುಂಗಟ್ಟುಗಳು ಕ್ಲೋಸ್ ಆಗಿರುವ ಕಾರಣ ಬೀಡಿಗೆ ಹೆಚ್ಚಿನ ಬೇಡಿಕೆಯು ಬರುತ್ತಿಲ್ಲ.

ಉಡುಪಿ ಜಿಲ್ಲೆಯಲ್ಲಿ  ಅಧಿಕ ಬೀಡಿ ಕಾರ್ಮಿಕ ಕುಟುಂಬಗಳಿದ್ದು, ಬೀಡಿ ಉದ್ಯಮ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಲಾಕ್‌ ಆಗಿರುವುದರಿಂದ ಕಾರ್ಮಿಕರು ಹಸಿವಿನ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಜೀವನೋಪಾಯವೇ ಬದಿಗೆ ಸರಿದಿರುವುದು ಬಹು ದೊಡ್ಡ ಹೊಡೆತ ನೀಡಿದೆ.

ಬೀಡಿ ಕಾರ್ಮಿಕರ ಕುಟುಂಬ ನಿರ್ವಹಣೆಗೆ ಬೇಕಾಗಿ ಮಾಲೀಕರು ಮತ್ತು ಸರಕಾರ ಜಂಟಿಯಾಗಿ ದಿನವೊಂದಕ್ಕೆ 200 ರೂ.ನಂತೆ ಒಂದು ತಿಂಗಳ ಭತ್ಯೆ 6 ಸಾವಿರ ರೂ. ಎಲ್ಲಬೀಡಿ ಕಾರ್ಮಿಕರಿಗೆ ನೀಡಬೇಕು. ಇತರೆ ಕಾರ್ಮಿಕರಂತೆ ಬೀಡಿ ಕಾರ್ಮಿಕರಿಗೂ ಲಾಕ್‌ಡೌನ್‌ ಅವಧಿಯ ವೇತನವನ್ನು ಬೀಡಿ ಮಾಲೀಕರು ನೀಡಲು ಆದೇಶಿಸಬೇಕು ಎಂದು ಕರ್ನಾಟಕ
ರಾಜ್ಯ ಬೀಡಿ ಕಾರ್ಮಿಕರ ಫೆಡರೇಶನ್‌ ಅಧ್ಯಕ್ಷ ಸಯ್ಯೀದ್ ಮುಜೀಬ್ ಹೇಳಿದ್ದಾರೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com