ಕೋವಿಡ್-19 ಮಧ್ಯೆ ಮಂಗನ ಜ್ವರದ ಭೀತಿ: ಅರಣ್ಯ ಪ್ರದೇಶದಲ್ಲಿ ಅಧಿಕವಾಗಿರುವ ಜನರ ಚಲನವಲನ ಕಾರಣ!

ಕೋವಿಡ್-19 ಮಧ್ಯೆ ಮಂಗನ ಜ್ವರ ರಾಜ್ಯದ 12 ಜಿಲ್ಲೆಗಳಿಗೆ ವ್ಯಾಪಿಸಿದ್ದು, ಸುಮಾರು 200 ಪ್ರಕರಣಗಳು ರಾಜ್ಯಾದ್ಯಂತ ಪತ್ತೆಯಾಗಿದೆ.
ಕೋವಿಡ್-19 ಮಧ್ಯೆ ಮಂಗನ ಜ್ವರದ ಭೀತಿ: ಅರಣ್ಯ ಪ್ರದೇಶದಲ್ಲಿ ಅಧಿಕವಾಗಿರುವ ಜನರ ಚಲನವಲನ ಕಾರಣ!

ಬೆಂಗಳೂರು: ಕೋವಿಡ್-19 ಮಧ್ಯೆ ಮಂಗನ ಜ್ವರ ರಾಜ್ಯದ 12 ಜಿಲ್ಲೆಗಳಿಗೆ ವ್ಯಾಪಿಸಿದ್ದು, ಸುಮಾರು 200 ಪ್ರಕರಣಗಳು ರಾಜ್ಯಾದ್ಯಂತ ಪತ್ತೆಯಾಗಿದೆ.

ಈ ವರ್ಷ 14 ವರ್ಷಕ್ಕಿಂತ ಕೆಳಗಿರುವ ಸುಮಾರು 16 ಮಕ್ಕಳು ಮಂಗನ ಜ್ವರಕ್ಕೆ ತುತ್ತಾಗಿದ್ದಾರೆ. ಕಳೆದ ವರ್ಷ ಈ ಸಂಖ್ಯೆ ಕೇವಲ 2 ಆಗಿತ್ತು. ಕಳೆದ ಭಾನುವಾರ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ಕೊಲರ್ಕ ಗ್ರಾಮದಲ್ಲಿ 41 ಪ್ರಕರಣಗಳು ವರದಿಯಾಗಿದೆ. ಚಿಕ್ಕಮಗಳೂರಿನಲ್ಲಿ 10 ಪ್ರಕರಣಗಳು, ಶಿವಮೊಗ್ಗ ಜಿಲ್ಲೆಯಲ್ಲಿ 146 ಪ್ರಕರಣಗಳು ವರದಿಯಾಗಿದೆ. ಕಳೆದ ವರ್ಷ ಕರ್ನಾಟಕದಲ್ಲಿ 400 ಮಂದಿಗೆ ಮಂಗನ ಜ್ವರ ಕಾಣಿಸಿಕೊಂಡಿತ್ತು.

ಲಾಕ್ ಡೌನ್ ನಿಂದ ಶಿವಮೊಗ್ಗ ಮತ್ತು ಇತರ ಮಲೆನಾಡು ಜಿಲ್ಲೆಗಳಿಗೆ ಹೋಗಿ ಕಾಡಿನತ್ತ ಪಯಣ ಬೆಳೆಸುವವರು ಹೆಚ್ಚಾಗಿರುವುದರಿಂದ ಮಂಗನಜ್ವರ ಪ್ರಕರಣಗಳು ಕೂಡ ಹೆಚ್ಚಾಗುತ್ತಿದೆ. ಶಿವಮೊಗ್ಗದಲ್ಲಿ ಇದುವರೆಗೆ ಯಾವುದೇ ಕೋವಿಡ್-19 ಪ್ರಕರಣಗಳು ವರದಿಯಾಗದಿರುವುದರಿಂದ ಖಾಸಗಿ ವಾಹನಗಳಲ್ಲಿ ಇಲ್ಲಿಗೆ ಬೆಂಗಳೂರು ಮತ್ತು ಮೈಸೂರುಗಳಿಂದ ಕಾಡು ಪ್ರದೇಶಗಳಲ್ಲಿ ಕಳೆಯೋಣವೆಂದು ಬರುತ್ತಾರೆ, ಸಕ್ರೆಬೈಲುವಿನಿಂದ ಆಗುಂಬೆಯವರೆಗೆ ಓಡಾಡುತ್ತಾರೆ, ಇದರಿಂದ ಮಂಗನ ಜ್ವರ ಪ್ರಕರಣಗಳು ಹೆಚ್ಚಾಗುತ್ತಿವೆ ಎನ್ನುತ್ತಾರೆ ಸ್ಥಳೀಯರು ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು.

ಲಾಕ್ ಡೌನ್ ಅರಣ್ಯ ಇಲಾಖೆ ಸಿಬ್ಬಂದಿಗೆ ಕಷ್ಟವಾಗಿದೆ. ಅವರು ಅರಣ್ಯಕ್ಕೆ ಬೆಂಕಿ ಬೀಳುವುದನ್ನು ಕಡಿಮೆ ಮಾಡಬೇಕಾಗಿರುವುದು ಮಾತ್ರವಲ್ಲದೆ, ಅರಣ್ಯ ಒತ್ತುವರಿ ಮತ್ತು ವನ್ಯಜೀವಿಗಳ ಬೇಟೆ ಪ್ರಕರಣಗಳು ಕೂಡ ಲಾಕ್ ಡೌನ್ ನಿಂದ ಹೆಚ್ಚಾಗಿವೆಯಂತೆ. ಅರಣ್ಯ ಸಿಬ್ಬಂದಿಯ ಮರೆಮಾಚಿ ಅರಣ್ಯದೊಳಗೆ ಸೇರುವುದು ಸುಲಭವಾಗಿದೆ ಜನರಿಗೆ ಎನ್ನುತ್ತಾರೆ  ಇಲಾಖೆ ಅಧಿಕಾರಿಗಳು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com