ಮೈಸೂರಿನಲ್ಲಿ ಏರುತ್ತಿರುವ ಸೋಂಕಿತರ ಸಂಖ್ಯೆ: ಫೀವರ್ ಕ್ಲಿನಿಕ್ ಗಳಲ್ಲಿ ವೈದ್ಯರೇ ಇಲ್ಲ!

ಕೊರೋನಾ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿರುವ ಪೀವರ್ ಕ್ಲಿನಿಕ್ ಗಳಲ್ಲಿ ಮಧ್ಯಾಹ್ನದ ನಂತರ ವೈದ್ಯರುಗಳೇ ಇರುವುದಿಲ್ಲ.
ಮೈಸೂರು ನಗರ
ಮೈಸೂರು ನಗರ
Updated on

ಮೈಸೂರು: ಕೊರೋನಾ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿರುವ ಪೀವರ್ ಕ್ಲಿನಿಕ್ ಗಳಲ್ಲಿ ಮಧ್ಯಾಹ್ನದ ನಂತರ ವೈದ್ಯರುಗಳೇ ಇರುವುದಿಲ್ಲ.

ಮದ್ಯಾಹ್ನ 2 ಗಂಟೆ ನಂತರ ರೋಗಿಗಳಿಗೆ ಗೈಡ್ ಮಾಡಲು, ಚಿಕಿತ್ಸೆ ನೀಡಲು ವೈದ್ಯರೇ ಇಲ್ಲ.  ರಾಮಾನುಜ ರಸ್ತೆ,  ಕುವೆಂಪು ನಗರ ನಾಚನಳ್ಳಿ ಪಾಳ್ಯದಲ್ಲಿರುವ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಫೀವರ್ ಕ್ಲಿನಿಕ್ ಗಳನ್ನು ಸ್ಥಾಪಿಸಲಾಗಿದೆ,

ಪ್ರತಿ ಚಿಕಿತ್ಸಾಲಯವು ಒಬ್ಬ ವೈದ್ಯರು, ಇಬ್ಬರು ದಾದಿಯರು ಮತ್ತು ಆರೋಗ್ಯ ಕಾರ್ಯಕರ್ತರೊಂದಿಗೆ ಶೀಘ್ರ ಪ್ರತಿಕ್ರಿಯೆ ನೀಡುವ ತಂಡವನ್ನು ಹೊಂದಿರಬೇಕು ಮತ್ತು ಬೆಳಿಗ್ಗೆ 9 ರಿಂದ ಸಂಜೆ 4 ರವರೆಗೆ ಕಾರ್ಯನಿರ್ವಹಿಸಬೇಕು.

ಶಿಷ್ಟಾಚಾರದ ಪ್ರಕಾರ ಫೀವರ್ ಕ್ಲಿನಿಕ್ ಗಳಿಗೆ ಭೇಟಿ ನೀಡುವ ವ್ಯಕ್ತಿಯನ್ನು ಅವನ ದೇಹದ ಉಷ್ಣತೆ ಮತ್ತು ಇತರ ರೋಗಲಕ್ಷಣಗಳ ಆಧಾರದ ಮೇಲೆ ‘ಶಂಕಿತ’ ಅಥವಾ ‘ಸುರಕ್ಷಿತ’ ಎಂದು ವರ್ಗೀಕರಿಸಬೇಕು.

ಆದರೆ ಸೋಮವಾರ ಮಧ್ಯಾಹ್ನ 1 ಗಂಟೆ ವೇಳೆಗೆ ಫೀವರ್ ಕ್ಲಿನಿಕ್ ಗಳಲ್ಲಿ ಯಾವುದೇ ವೈದ್ಯರಿರಲಿಲ್ಲ. ಕುವೆಂಪು ನಗರದಲ್ಲಿನ ಫೀವರ್ ಕ್ಲಿನಿಕ್ ಗೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್   ವರದಿಗಾರ ಸಂಪರ್ಕಿಸಿದಾಗ ವೈದ್ಯರು ಇರಲಿಲ್ಲ, ನಾಳೆ ಬೆಳಗ್ಗೆಯೇ ವೈದ್ಯರನ್ನು ಸಂಪರ್ಕಿಸಲು ಸಾಧ್ಯ ಎಂದು ಅಲ್ಲಿನ ನರ್ಸ್ ಹೇಳಿದ್ದಾರೆ.

ಆದರೆ ತಾವು ವರದಿಗಾರರೊಂದಿಗೆ ಮಾತನಾಡುತ್ತಿದ್ದೇನೆ ಎಂಬುದನ್ನು ಅರಿತ ನ ರ್ಸ್ ಕೂಡಲೇ ರಾ ಬದಲಿಸಿ ವೈದ್ಯರು ಊಟಕ್ಕಾಗಿ ಹೋಗಿದ್ದಾರೆ ಬರುತ್ತಾರೆ ಎಂದು ಹೇಳಿದ್ದಾರೆ.

ಆದರೆ ಹಲವು ನಾಗರಿಕರು ವೈದ್ಯರು ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಆರೋಪಿಸಿದ್ದಾರೆ. ಈ ವಿಷಯವನ್ನು ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ಅವರ ಗಮನಕ್ಕೆ ತಂದಾಗ ಈ ಬಗ್ಗೆ ಮಾಹಿತಿ ಪಡೆಯುವುದಾಗಿ ತಿಳಿಸಿದ್ದಾರೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com