
ಉಡುಪಿ: ಸಾರ್ವಜನಿಕರಿಗೆ ಅಗತ್ಯ ವಸ್ತುಗಳನ್ನು ಪೂರೈಸಲು ಸರಕು ರೈಲುಗಳನ್ನು ಓಡಿಸುತ್ತಿರುವ ಕೊಂಕಣ ರೈಲ್ವೆ ಓಖೋ ಮತ್ತು ತಿರುವನಂತಪುರಕ್ಕೆ ವಿಶೇಷ ರೈಲು ಸಂಚರಿಸಲು ನಿರ್ಧರಿಸಿದೆ,
ಪಶ್ಚಿಮ ರೈಲ್ವೆಯ ಸಹಯೋಗದೊಂದಿಗೆ ಔಷಧಗಳು, ವೈದ್ಯಕೀಯ ಉಪಕರಣ, ಮಾವು ಮತ್ತು ಬಹುಬೇಗ ಹಾಳಾಗುವ ಇತರ ವಸ್ತುಗಳ ಸಾಗಣೆಗೆ ನಿರ್ಧರಿಸಲಾಗಿದೆ.
ತಿರುವನಂತಪುರಂ ಸೆಂಟ್ರಲ್ ಪಾರ್ಸೆಲ್ ವಿಶೇಷ ರೈಲು ಓಖಾದಿಂದ 1.10ನಿಮಿಷಕ್ಕೆ ಹೊರಡಲಿದ್ದು ಮೂರನೇ ದಿನ ಮಧ್ಯಾಹ್ನ 12 ಗಂಟೆಗೆ ತಲುಪಲಿದೆ.
00934 ಸಂಖ್ಯೆಯ ರೈಲು ಏಪ್ರಿಲ್ 22 ರಂದು ರಾತ್ರಿ 11 ಗಂಟೆಗೆ ಹೊರಟು ಮೂರನೇ ದಿನ ರಾತ್ರಿ 9,4ಕ್ಕೆ ಓಖಾ ತಲುಪಲಿದೆ. ಆಸಕ್ತ ಗ್ರಾಹಕರು ರತ್ನಗಿರಿ, ಮಡಗಾವ್, ಮತ್ತು ಉಡುಪಿ ರೈಲ್ವೆ ನಿಲ್ದಾಣಗಳಲ್ಲಿ ತಮ್ಮ ಪಾರ್ಸೆಲ್ ಬುಕ್ ಮಾಡಲು ಅಲ್ಲಿನ ಸಿಬ್ಬಂದಿಯನ್ನು ಸಂಪರ್ಕಿಸಬೇಕೆಂದು ತಿಳಿಸಲಾಗಿದೆ,
Advertisement