ಬ್ಯಾರಿಕೇಡ್ ಎಲ್ಲಿ? ಲಾಕ್ ಡೌನ್ ಉಲ್ಲಂಘಿಸಿದವರನ್ನು ಎಲ್ಲಿ ಪರಿಶೀಲಿಸಲಾಗುತ್ತಿದೆ: ಆಯುಕ್ತರಿಗೆ ಪ್ರವೀಣ್ ಸೂದ್ ಪ್ರಶ್ನೆ
ಬೆಂಗಳೂರು: ಬ್ಯಾರಿಕೇಡ್ ಗಳು ಎಲ್ಲಿ, ಕೊರೋನಾದಿಂದಾಗಿ ಲಾಕ್ ಡೌನ್ ಉಲ್ಲಂಘಿಸುತ್ತಿರುವವರ ವಿರುದ್ಧ ಎಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರನ್ನು ಪ್ರಶ್ನಿಸಿದ್ದಾರೆ.
ವಾಹನಗಳ ಚಲನೆಗೆ ಸಂಬಂಧಿಸಿದಂತೆ ಯಥಾಸ್ಥಿತಿ ಕಾಯ್ದುಕೊಳ್ಳಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಆದರೆ ರಸ್ತೆಯಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗಿದೆ. ನಿನ್ನೆಯವರೆಗೂ ರಸ್ತೆಯಲ್ಲಿ ಬ್ಯಾರಿಕೇಡ್ ಗಳಿದ್ದಲು ಆದರೆ ಇದ್ದಕ್ಕಿದ್ದಂತೆ ಮಾಯವಾಗಿವೆ. ಜೊತೆಗೆ ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳವ ಪೊಲೀಸರು ಎಲ್ಲಿದ್ದಾರೆ , ವಾಹನಗಳ ಪಾಸ್ ಎಲ್ಲಿ ಪರಿಶೀಲಿಸಲಾಗುತ್ತಿದೆ ಎಂದು ಆಯಕ್ತರಿಗೆ ಬರೆದ ಪತ್ರದಲ್ಲಿ ಡಿಜಿ ಪ್ರಶ್ನಿಸಿದ್ದಾರೆ.
ಪೊಲೀಸ್ ಠಾಣೆ ಮಟ್ಟದಲ್ಲಿ ನಿಜವಾದ ವಿನಂತಿಯನ್ನು ಹೊಂದಿರುವ ಜನರಿಗೆ ತುರ್ತು ಪಾಸ್ (ರಿಟರ್ನ್ ಮಾಡಬಹುದಾದ) ನೀಡಬೇಕು, ಕಚೇರಿ ಸಮಯದಲ್ಲಿ ಬೆಳಿಗ್ಗೆ ಮತ್ತು ಸಂಜೆ ಹೊರತುಪಡಿಸಿ, ಉಳಿದ ಸಮಯದಲ್ಲಿ ಜೀರೋ ಟ್ರಾಫಿಕ್ ನಿರ್ವಹಿಸಬೇಕು, ಅನಗತ್ಯವಾಗಿ ಸಂಚಾರ ನಡೆಸುವ ವಾಹನಗಳನ್ನು ಸೀಜ್ ಮಾಡಬೇಕೆಂದು ಸೂಚಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ