ಮಂಡ್ಯ: ಕೊರೋನಾ ನಿಯಂತ್ರಣಕ್ಕೆ ಔಷಧಿ ಸಿಂಪಡಿಸುತ್ತಿದ್ದ ಪೌರಕಾರ್ಮಿಕ ಸಾವು

ಕೊರೋನಾ ನಿಯಂತ್ರಣಕ್ಕಾಗಿ ಔಷಧಿ ಸಿಂಪಡಣೆ ವೇಳೆ ಪೌರಕಾರ್ಮಿಕ ಸಾವಿಗೀಡಾದ ಘಟನೆ ಮಳವಳ್ಳಿ ತಾಲೂಕಿನ ಕಲ್ಕುಣಿ ಗ್ರಾಮದಲ್ಲಿ ನಡೆದಿದೆ.
ಪೌರ ಕಾರ್ಮಿಕ
ಪೌರ ಕಾರ್ಮಿಕ
Updated on

ಮಂಡ್ಯ: ಕೊರೋನಾ ನಿಯಂತ್ರಣಕ್ಕಾಗಿ ಔಷಧಿ ಸಿಂಪಡಣೆ ವೇಳೆ ಪೌರಕಾರ್ಮಿಕ ಸಾವಿಗೀಡಾದ ಘಟನೆ ಮಳವಳ್ಳಿ ತಾಲೂಕಿನ ಕಲ್ಕುಣಿ ಗ್ರಾಮದಲ್ಲಿ ನಡೆದಿದೆ.

ಕಲ್ಕುಣಿ ಗ್ರಾಮ ಪಂಚಾಯತಿಯ ಡಿ ಗ್ರೂಪ್ ನೌಕರ ಬಸವರಾಜು(೪೬) ಎಂಬಾತನೇ ಮೃತವ್ಯಕ್ತಿಯಾಗಿದ್ದಾನೆ. 

ಘಟನೆ ವಿವರ: ಕಳೆದ ಕೆಲವು ದಿನಗಳಿಂದ ಕಲ್ಕುಣಿ ಪಂಚಾಯ್ತಿ ವ್ಯಾಪ್ತಿಯ ಹಲವು ಗ್ರಾಮಗಳಿಗೆ ಕರೋನಾ ಸೋಂಕು ಹರಡದಂತೆ ಔಷಧಿ ಸಿಂಪಡಿಸುವ ಸಿಬ್ಬಂದಿಗಳ ಜೊತೆ ಕೆಲಸ ಮಾಡುತ್ತಾ ಅವರಿಗೆ ಮಾರ್ಗದರ್ಶಕರಾಗಿ  ಕಾರ್ಯನಿರ್ವಹಿಸುತ್ತಿದ್ದರು.

ಔಷಧಿ ಸಿಂಪಡಿಸುವ ವೇಳೆ ಬಸವರಾಜು ಅವರಿಗೆ ದೇಹದಲ್ಲಿ ಔಷಧದ ಅಡ್ಡಪರಿಣಾಮ ಉಂಟಾಗಿದ್ದು. ಅಸ್ವಸ್ಥರಾಗಿದ್ದ ಅವರನ್ನು ನಿನ್ನೆ ಮಂಡ್ಯಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ, ಅಷ್ಟರಲ್ಲಾಗಲೀ ರಕ್ತಕ್ಕೆ ಪ್ರಬಲ ರಾಸಾಯನಿಕಗಳು ಸೇರಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಮಧ್ಯರಾತ್ರಿ ೧ ಗಂಟೆ ಸಮಯದಲ್ಲಿ ಸಾವನ್ನಪ್ಪಿದ್ದಾರೆ. 

ಈ ಸಂಬಂಧ ಕಿರುಗಾವಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ, ಮೃತ ನೌಕರನ ಕುಟುಂಬಕ್ಕೆ ಸೂಕ್ತ ಪರಿಹಾರ ನಿಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ವರದಿ: ನಾಗಯ್ಯ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com