
ದಾವಣಗೆರೆ: ಲಾಕ್ ಡೌನ್ ಸಮಯದಲ್ಲಿ ಜನರ ಮನಸ್ಸು ಸಕ್ರಿಯವಾಗಿರಲು ನೈರುತ್ಯ ರೈಲ್ವೆ ರಸಪ್ರಶ್ನೆ ಸ್ಪರ್ಧೆಯನ್ನು ಆಯೋಜಿಸಿದೆ. ರೈಲ್ವೆ ಇಲಾಖೆಗೆ ಸಂಬಂಧಿಸಿದ ದೇಶದ ಪ್ರಮುಖ ಕಟ್ಟಡಗಳು,ವಿನ್ಯಾಸಗಳ ಫೋಟೋಗಳನ್ನು ಹಾಕಲಾಗಿದ್ದು ಅದನ್ನು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಇ ವಿಜಯ, ಲಾಕ್ ಡೌನ್ ಸಮಯದಲ್ಲಿ ಜನರು ಮನೆಯೊಳಗೆ ಉದಾಸೀನದಿಂದ ಇರುವುದನ್ನು ತಪ್ಪಿಸವು ರೈಲ್ವೆ ಬಗ್ಗೆ ಇರುವ ಜನರ ಜ್ಞಾನವನ್ನು ಹೆಚ್ಚಿಸಲು ಸ್ಪರ್ಧೆ ಆಯೋಜಿಸಲಾಗಿದೆ. ಪ್ರತಿದಿನ ಒಂದು ಚಿತ್ರ ಆಧಾರಿತ ಪ್ರಶ್ನೆಯನ್ನು ಕೇಳುತ್ತಿದ್ದು ಅವುಗಳಿಗೆ ಒಂದು ಗಂಟೆಯೊಳಗೆ ಉತ್ತರಿಸಬೇಕು.
ವಿಜೇತರಿಗೆ ಬಹುಮಾನವಿರುತ್ತದೆ. ಲಾಕ್ ಡೌನ್ ಮುಗಿದ ನಂತರ ಪ್ರಶಸ್ತಿ ವಿತರಣೆ ಮಾಡಲಾಗುವುದು. ಪ್ರತಿದಿನ ಭಾಗವಹಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದರು.
ಪ್ರತಿದಿನ ಪ್ರಶ್ನೆಯನ್ನು ನೈರುತ್ಯ ರೈಲ್ವೆ ಟ್ವೀಟ್ ಪೇಜ್ @SWRRLYಯಲ್ಲಿ ಕೇಳಲಾಗುತ್ತದೆ.ಪ್ರತಿದಿನ ರಾತ್ರಿ 8 ಗಂಟೆಯೊಳಗೆ ಪ್ರಶ್ನೆಗೆ ಉತ್ತರಿಸಬೇಕು. ಫೋಟೋಗಳು, ದೇಶದ ಪ್ರಮುಖರು, ಕಟ್ಟಡಗಳು, ಸ್ಥಳಗಳ ಫೋಟೋಗಳನ್ನು ಹಾಕಿ ಅವುಗಳಿಗೆ ಆಧಾರವಾಗಿ ಸಾಯಂಕಾಲ 7 ಗಂಟೆಗೆ ಪ್ರಶ್ನೆ ಕೇಳಲಾಗುತ್ತದೆ.ಭಾಗವಹಿಸುವವರು ರಾತ್ರಿ 8 ಗಂಟೆಯೊಳಗೆ ಉತ್ತರಿಸಬೇಕು. ಲಾಟರಿ ಎತ್ತಿ ನೈರುತ್ವ ರೈಲ್ವೆ ಅಧಿಕಾರಿಗಳು ವಿಜೇತರನ್ನು ಘೋಷಿಸುತ್ತಾರೆ.
Advertisement