ಬೆಳಗಾವಿಯಲ್ಲಿ ಐಸಿಎಂಆರ್ ಲ್ಯಾಬ್ ಪ್ರಾಯೋಗಿಕ ಪರೀಕ್ಷೆ ಆರಂಭ

ಕೊರೊನಾ ಸೋಂಕು ತಪಾಸಣೆ ಮಾಡುವ (ಗಂಟಲು ದ್ರವ ಮಾದರಿ ಪರೀಕ್ಷೆ) ಕೇಂದ್ರ ಬುಧವಾರ ಕಾರ್ಯಾರಂಭ ಮಾಡಿದೆ. ಹಲವು ದಿನಗಳಿಂದ ಜಿಲ್ಲೆಯ ಹೆಡ್ ಕ್ವಾರ್ಟರ್ಸ್ ಗಳಲ್ಲಿ ಕೊರೋನಾ ಪರೀಕ್ಷೆ ಲ್ಯಾಬ್ ಆರಂಭಿಸಬೇಕೆಂದು ಸರ್ಕಾರದ ಮೇಲೆ ಒತ್ತಡವಿತ್ತು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಳಗಾವಿ: ಕೊರೊನಾ ಸೋಂಕು ತಪಾಸಣೆ ಮಾಡುವ (ಗಂಟಲು ದ್ರವ ಮಾದರಿ ಪರೀಕ್ಷೆ) ಕೇಂದ್ರ ಬುಧವಾರ ಕಾರ್ಯಾರಂಭ ಮಾಡಿದೆ. ಹಲವು ದಿನಗಳಿಂದ ಜಿಲ್ಲೆಯ ಹೆಡ್ ಕ್ವಾರ್ಟರ್ಸ್ ಗಳಲ್ಲಿ ಕೊರೋನಾ ಪರೀಕ್ಷೆ ಲ್ಯಾಬ್ ಆರಂಭಿಸಬೇಕೆಂದು ಸರ್ಕಾರದ ಮೇಲೆ ಒತ್ತಡವಿತ್ತು.

ನೆಹರು ನಗರದಲ್ಲಿರುವ ಐಸಿಎಂಆರ್‌- ಪಾರಂಪರಿಕ ಚಿಕಿತ್ಸಾ ವಿಜ್ಞಾನ ಸಂಸ್ಥೆಯಲ್ಲಿ ಕೋವಿಡ್‌-19 ಪರೀಕ್ಷಾ ಪ್ರಯೋಗಾಲಯ ಕಾರ್ಯಾರಂಭ ಮಾಡಿದೆ.

ಎನ್ ಐ ಟಿಎಮ್ ಲ್ಯಾಬ್ ನ ವಿಜ್ಞಾನಿಗಳು 11 ಮಾದರಿಯನ್ನು ಸಂಗ್ರಹಿಸಲು ಯಶಸ್ವಿಯಾಗಿದ್ದಾರೆ.ಆರ್ ಟಿ ಮತ್ತು ಪಿಸಿಆರ್ ಪರೀಕ್ಷೆ ಮಾಡಲು ಲ್ಯಾಬ್ ಸರ್ವ ಸನ್ನದ್ದವಾಗಿದೆ.

‘ಈವರೆಗೆ ಬೆಂಗಳೂರು ಮತ್ತು ಶಿವಮೊಗ್ಗ ಪ್ರಯೋಗಾಲಯಗಳಿಗೆ ರಕ್ತ, ಗಂಟಲು ಮಾದರಿ ದ್ರವವನ್ನು ಕಳುಹಿಸಿ ಪರೀಕ್ಷಾ ವರದಿ ಪಡೆಯಲಾಗುತ್ತಿತ್ತು. ಇದನ್ನು ತಪ್ಪಿಸಲು ಇಲ್ಲಿಯೇ ಪ್ರಯೋಗಾಲಯ ಆರಂಭಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಅನುಮತಿಗಾಗಿ ಮನವಿ ಸಲ್ಲಿಸಿದ್ದರು. ಏಪ್ರಿಲ್ 16 ರಂದು ಕೇಂದ್ರ ಸರ್ಕಾರ ಅನುಮತಿ ನೀಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com