ಪರಸ್ಪರ ಅವಲಂಬನೆಯ ವಾಸ್ತವವನ್ನು ತೆರೆದಿಟ್ಟ ಕೇರಳ-ಕರ್ನಾಟಕ ಗಡಿಭಾಗ ತಲಪಾಡಿ

ಕರ್ನಾಟಕ-ಕೇರಳ ಗಡಿಭಾಗದ ತಲಪಾಡಿಯ ಗಡಿಯ ಬಗ್ಗೆ ಇರುವ ಸ್ಪಷ್ಟತೆ ಕೊರತೆಯಿಂದ ಗಡಿಭಾಗವನ್ನು ಮತ್ತೆ ಖಚಿತಪಡಿಸಿಕೊಳ್ಳುವ ಅನಿವಾರ್ಯತೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಎದುರಾಗಿದೆ. ಈ ಭಾಗದಲ್ಲಿರುವ ಎರಡೂ ಭಾಗಗಳ ಜನರ ಜೀವನ ಪರಸ್ಪರ ಬೆಸೆದುಕೊಂಡಿದ್ದು ಆಸ್ತಿಪಾಸ್ತಿಗಳು ಪರಸ್ಪರ ಹೆಣೆದುಕೊಂಡಿವೆ.
ಕರ್ನಾಟಕ-ಕೇರಳ ಗಡಿಭಾಗದಲ್ಲಿ ಸಮೀಕ್ಷೆ ಅಧಿಕಾರಿಗಳು ಸರ್ವೆ ನಡೆಸುತ್ತಿರುವುದು
ಕರ್ನಾಟಕ-ಕೇರಳ ಗಡಿಭಾಗದಲ್ಲಿ ಸಮೀಕ್ಷೆ ಅಧಿಕಾರಿಗಳು ಸರ್ವೆ ನಡೆಸುತ್ತಿರುವುದು

ಕಾಸರಗೋಡು: ಕರ್ನಾಟಕ-ಕೇರಳ ಗಡಿಭಾಗದ ತಲಪಾಡಿಯ ಗಡಿಯ ಬಗ್ಗೆ ಇರುವ ಸ್ಪಷ್ಟತೆ ಕೊರತೆಯಿಂದ ಗಡಿಭಾಗವನ್ನು ಮತ್ತೆ ಖಚಿತಪಡಿಸಿಕೊಳ್ಳುವ ಅನಿವಾರ್ಯತೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಎದುರಾಗಿದೆ. ಈ ಭಾಗದಲ್ಲಿರುವ ಎರಡೂ ಭಾಗಗಳ ಜನರ ಜೀವನ ಪರಸ್ಪರ ಬೆಸೆದುಕೊಂಡಿದ್ದು ಆಸ್ತಿಪಾಸ್ತಿಗಳು ಪರಸ್ಪರ ಹೆಣೆದುಕೊಂಡಿವೆ.

ನಿನ್ನೆ ಎರಡೂ ರಾಜ್ಯಗಳ ಕಂದಾಯ ಇಲಾಖೆ ಅಧಿಕಾರಿಗಳು 1925ರ ಸರ್ವೆ ದಾಖಲೆಗಳನ್ನು ತೆಗೆದು ಕುಂಜತ್ತೂರು-ತಲಪಾಡಿ ಗಡಿಭಾಗಕ್ಕೆ ತೆಗೆದುಕೊಂಡು ಬಂದಿದ್ದರು. ಇಲ್ಲಿ ಗಡಿ ಮೊದಲು ಇತ್ತೇ, ಇಲ್ಲವೇ ಎಂದು ಕರ್ನಾಟಕ ಪೊಲೀಸರು ಸಂಶಯ ವ್ಯಕ್ತಪಡಿಸಿದ್ದರಿಂದ ನಾವು ದಾಖಲೆಗಳನ್ನು ತಂದೆವು ಎಂದು ಕಾಸರಗೋಡು ಜಿಲ್ಲಾಧಿಕಾರಿ ಡಿ ಸಜಿತ್ ಬಾಬು ಹೇಳುತ್ತಾರೆ.

ಲಾಕ್ ಡೌನ್ ಕಾರಣದಿಂದಾಗಿ ಕೇರಳ ಪೊಲೀಸರು ಮತ್ತು ಆರೋಗ್ಯಾಧಿಕಾರಿಗಳು ಗಡಿಯ 300 ಮೀಟರ್ ಒಳಗೆ ಟೆಂಟ್ ಗಳನ್ನು ಸ್ಥಾಪಿಸಿದ್ದು ಕರ್ನಾಟಕ ಪೊಲೀಸರು ಕೂಡ ತಮ್ಮ ಭಾಗದ ಗಡಿಯಲ್ಲಿ ನಿರಾಶ್ರಿತ ಶಿಬಿರಗಳನ್ನು ಸ್ಥಾಪಿಸಿದ್ದಾರೆ.

ಕಳೆದ ನಾಲ್ಕು ದಿನಗಳಲ್ಲಿ ಕರ್ನಾಟಕ ಪೊಲೀಸರು ಕೇರಳ ಕಡೆಗೆ ಜನರ ಸಂಚಾರಕ್ಕೆ ಅವಕಾಶ ನೀಡುತ್ತಿದ್ದಾರೆ ಎಂದು ಕಾಸರಗೋಡು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಆದರೆ 300 ಮೀಟರ್ ದೂರ ಹೋದ ಮೇಲೆ ಕೇರಳ ಪೊಲೀಸರು ಮತ್ತೆ ವಾಪಸ್ ಕಳುಹಿಸುತ್ತಾರೆ. ಹಿಂತಿರುಗಿದಾಗ ಕರ್ನಾಟಕ ಪೊಲೀಸರು ಒಳಪ್ರವೇಶಿಸಲು ಬಿಡುವುದಿಲ್ಲ. ಇದರಿಂದ ಜನರಿಗೆ ತುಂಬಾ ಸಮಸ್ಯೆಯಾಗುತ್ತಿದೆ ಎಂದರು.

ಕೇರಳ ಪೊಲೀಸರ ನಿರಾಶ್ರಿತ ತಾಣ ತಿರುವಿನ ಹಿಂಬದಿ ಇರುವುದರಿಂದ ರಾಜ್ಯದೊಳಗೆ ಜನರು ಯಾವಾಗ ಬರುತ್ತಾರೆ ಎಂದು ಅಧಿಕಾರಿಗಳಿಗೆ ನೋಡಲು ಸಾಧ್ಯವಾಗುವುದಿಲ್ಲ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com