
ಕಲಬುರಗಿ: ಪ್ರಸ್ತುತ ಕಲಬುರಗಿ ಜಿಲ್ಲೆಯೂ ಬಿಸಿಲಿನ ತಾಪಕ್ಕಿಂತ ಹೆಚ್ಚು ಕೊರೊನಾ ಸೋಂಕಿತರ ಸಂಖ್ಯೆಗೆ ನಲುಗುತ್ತಿದೆ. ಸದ್ಯ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 38ಕ್ಕೆ ಏರಿಕೆ ಆಗಿದೆ. ಈ ನಡುವೆ ಸೋಮವಾರ ಕೊರೊನಾ ಜಾಗೃತಿಗೆ ಮೂಡಿಸಲು ಹಾಗೂ ಮಾಹಿತಿ ಕಲೆ ಹಾಕಲು ಮನೆಗೆ ಬಂದ ಆಶಾ ಕಾರ್ಯಕರ್ತೆಗೆ ಯುವಕನೋರ್ವ ಪಾದ ಪೂಜೆ ಮಾಡುವ ಮೂಲಕ ಗೌರವ ಸಲ್ಲಿಸಿದ್ದಾನೆ.
ಜಿಲ್ಲೆಯ ಆಳಂದ ತಾಲೂಕಿನ ನಿಂಬರ್ಗಾದ ಆಶಾ ಕಾರ್ಯಕರ್ತೆ ಚಂದ್ರಭಾಗ ಅವರಿಗೆ ವಿಜಯ ಕುಮಾರ್ ಎಂಬ ಯುವಕ ಪಾದಪೂಜೆ ಮಾಡಿ ನಮಸ್ಕರಿಸಿದ್ದಾನೆ.
ಮೊದಲು ಸ್ಯಾನಿಟೈಸರ್ ನಿಂದ ತನ್ನ ಕೈ ತೊಳೆದುಕೊಂಡು ನಂತರ ಯುವಕ ಪಾದ ಪೂಜೆ ಮಾಡಿದ್ದು, ಜನ ಮೆಚ್ಚುಗೆಗೆ ಪಾತ್ರವಾಗಿದೆ.
ಈಗಾಗಲೇ ಜಿಲ್ಲಾಡಳಿತ, ಪೊಲೀಸ್ ಇಲಾಖೆ, ವೈದ್ಯಕೀಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಅವಿರತವಾಗಿ ಕೊರೊನಾ ರಕ್ಷಕರಾಗಿ ಹೋರಾಡುತ್ತಿದ್ದಾರೆ.
ಕಲಬುರಗಿ ಜಿಲ್ಲೆ ಸೇರಿದಂತೆ ಶಹಾಬಾದ್ ಪಟ್ಟಣ, ಚಿತ್ತಾಪುರ ತಾಲೂಕಿನ ವಾಡಿ ಹಾಗೂ ಆಳಂದ ತಾಲೂಕಿನಲ್ಲಿಯೂ ಕೊರೊನಾ ಹೊಕ್ಕಿದೆ.
Advertisement