ಬಿಜಾಪುರ: ಸತ್ತ ವಲಸೆ ಹಕ್ಕಿಯ ದೇಹದಲ್ಲಿ ಎಲೆಕ್ಟ್ರಾನಿಕ್ ಸಾಧನ ಪತ್ತೆ

ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಯಂಬತ್ನಾಳ್ ಗ್ರಾಮದ ನಿವಾಸಿಗಳಿಗೆ ಅಚ್ಚರಿ ಕಾದಿತ್ತು. ಅದಕ್ಕೆ ಕಾರಣ ಗ್ರಾಮದ ಹೊರವಲಯದಲ್ಲಿ ಕಾಣಸಿಕ್ಕಿದ ವಲಸೆಹಕ್ಕಿಯ ಶವ.
ಲಗ್ಗರ್ ಫಾಲ್ಕನ್ ಹಕ್ಕಿಯ ದೇಹದಲ್ಲಿ ಸಿಕ್ಕಿದ ಎಲೆಕ್ಟ್ರಾನಿಕ್ ಸಾಧನ
ಲಗ್ಗರ್ ಫಾಲ್ಕನ್ ಹಕ್ಕಿಯ ದೇಹದಲ್ಲಿ ಸಿಕ್ಕಿದ ಎಲೆಕ್ಟ್ರಾನಿಕ್ ಸಾಧನ
Updated on

ವಿಜಯಪುರ:ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಯಂಬತ್ನಾಳ್ ಗ್ರಾಮದ ನಿವಾಸಿಗಳಿಗೆ ಅಚ್ಚರಿ ಕಾದಿತ್ತು. ಅದಕ್ಕೆ ಕಾರಣ ಗ್ರಾಮದ ಹೊರವಲಯದಲ್ಲಿ ಕಾಣಸಿಕ್ಕಿದ ವಲಸೆಹಕ್ಕಿಯ ಮೃತದೇಹ.

ಹಕ್ಕಿಯ ದೇಹದಲ್ಲಿ ಎಲೆಕ್ಟ್ರಾನಿಕ್ ಸಾಧನವೊಂದು ಸಿಕ್ಕಿದ್ದು ಕೊರೋನಾ ವೈರಸ್ ನಡುವೆ ಗ್ರಾಮಸ್ಥರಿಗೆ ಭೀತಿ ಹುಟ್ಟಿಸಿದ್ದು ಸುಳ್ಳಲ್ಲ. ಹಕ್ಕಿಯಿಂದ ಕೊರೋನಾ ವೈರಸ್ ಸೋಂಕು ಹರಡುವುದಿಲ್ಲ ಎಂದು ಅಧಿಕಾರಿಗಳು ಹೇಳಿದ ನಂತರ ಗ್ರಾಮಸ್ಥರ ಭಯ, ಆತಂಕ ದೂರವಾಯಿತು.

ಗ್ರಾಮಸ್ಥರು ಸತ್ತುಹೋದ ಹಕ್ಕಿ ಕಂಡ ತಕ್ಷಣ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದರು. ನಂತರ ಪೊಲೀಸರು ಅರಣ್ಯ ಇಲಾಖೆ ಸಿಬ್ಬಂದಿಗೆ ವಿಷಯ ತಲುಪಿಸಿದರು. ಅವರು ಸ್ಥಳಕ್ಕೆ ಆಗಮಿಸಿ ಹಕ್ಕಿಯ ಮೃತದೇಹ ಪಡೆದು ತನಿಖೆ ನಡೆಸುತ್ತಿದ್ದಾರೆ. ಹಕ್ಕಿಯ ಕಾಲಿಗೆ ಕಟ್ಟಲಾಗಿದ್ದ ರೇಡಿಯೊ ಟೆಲಿಮೆಟ್ರಿ ಟ್ರಾನ್ಸ್ ಮಿಟರ್ ನ್ನು ಪಡೆದು ಅದರಲ್ಲೇನಿದೆ, ಏಕೆ ಕಟ್ಟಲಾಗಿದೆ ಎಂದು ಪರಿಶೀಲಿಸುತ್ತಿದ್ದಾರೆ.

ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಮಾಹಿತಿ ನೀಡಿದ ವಿಜಯಪುರ ಅರಣ್ಯ ಇಲಾಖೆ ಉಪ ಸಂರಕ್ಷಣಾಧಿಕಾರಿ ಅಶೋಕ್ ಪಾಟೀಲ್, ಹಕ್ಕಿ ಸಹಜವಾಗಿ ಮೃತಪಟ್ಟಿದೆ. ಅದರ ಕಾಲಲ್ಲಿ ಕಟ್ಟಲಾಗಿದ್ದ ಎಲೆಕ್ಟ್ರಾನಿಕ್ ಸಾಧನ ಭಾಗಶಃ ಹಾಳಾಗಿತ್ತು. ನಾವು ಟ್ರಾನ್ಸ್ ಮಿಟರ್ ನ್ನು ಪರಿಶೀಲಿಸಿದಾಗ ಅದು ಅಮೆರಿಕದಲ್ಲಿ ಉತ್ಪಾದನೆಯಾಗಿದ್ದು ಎಂದು ತಿಳಿದುಬಂತು. ಅದರ ಬ್ಯಾಟರಿ ಜಪಾನ್ ನದ್ದು. ಆದರೆ ಟ್ರಾನ್ಸ್ ಮಿಟರ್ ನಲ್ಲಿ ಕ್ಯಾಮರಾವಿರಲಿಲ್ಲ. ಆದರೆ ಸಂಖ್ಯೆಗಳನ್ನು ಹೊಂದಿದ ಮೆಟ್ಯಾಲಿಕ್ ಟ್ಯಾಗ್ ಕಂಡುಬಂತು. ಸಾಧನವನ್ನು ವಶಪಡಿಸಿಕೊಂಡು ಅರಣ್ಯ ಕಾಯ್ದೆಯಡಿ ಕೇಸು ದಾಖಲಿಸಿದ್ದೇವೆ ಎಂದರು.

ಚೆನ್ನೈಯ ವನ್ಯಜೀವಿ ಅಪರಾಧ ನಿಯಂತ್ರಣ ಕೇಂದ್ರದ ಗಮನಕ್ಕೆ ಇದನ್ನು ತರಲಾಗಿದ್ದು ಸದ್ಯದಲ್ಲಿಯೇ ತನಿಖೆ ನಡೆಸಲಿದ್ದಾರೆ. ಮುಂಬೈಯ ನ್ಯಾಚುರಲ್ ಹಿಸ್ಟರಿ ಸೊಸೈಟಿಯ ಸಹಾಯವನ್ನು ಕೇಳಿದ್ದು, ಈ ಮೂಲಕ ಟ್ರಾನ್ಸ್ ಮಿಟರ್ ಯಾವ ದೇಶದಲ್ಲಿ ದಾಖಲಾಗಿದೆ, ಯಾವ ಉದ್ದೇಶಕ್ಕೆ ಬಳಸಲಾಗುತ್ತದೆ ಎಂದು ಕಂಡುಹಿಡಿಯುತ್ತೇವೆ. ವನ್ಯಜೀವಿ ಕಳ್ಳಸಾಗಣೆ ಕೇಂದ್ರದ ಮೂಲಕ ಸಹ ತನಿಖೆ ಆರಂಭಿಸಲಿದ್ದೇವೆ ಎಂದು ಪಾಟೀಲ್ ತಿಳಿಸಿದರು.

ಅಮೆರಿಕಗಳಲ್ಲಿ ಅಧ್ಯಯನಕ್ಕೆ ಮತ್ತು ಗಲ್ಫ್ ರಾಷ್ಟ್ರಗಳಲ್ಲಿ ಕ್ರೀಡಾ ಚಟುವಟಿಕೆಗೆ ಇಂತಹ ಹಕ್ಕಿಗಳನ್ನು ಮತ್ತು ಟ್ರಾನ್ಸ್ ಮಿಟರ್ ಗಳನ್ನು ಬಳಸಲಾಗುತ್ತದೆ. ಆದರೆ ನಮ್ಮ ದೇಶಗಳಲ್ಲಿ ವನ್ಯಜೀವಿ ಕಾಯ್ದೆಯಡಿ ಇಂತಹ ಸಂಪ್ರದಾಯಗಳನ್ನು ನಿಷೇಧಿಸಲಾಗಿದೆ ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com