ಮತ್ತೊಂದು ಕೊರೋನಾ ಹಾಟ್ ಸ್ಪಾಟ್ ಆಯ್ತು ಜಮಖಂಡಿ

ಜಮಖಂಡಿ ನಗರ ಪ್ರದೇಶದಲ್ಲಿ ಕೊರೊನಾ ಕಾಟ ನಿಧಾನಗತಿಯಲ್ಲಿ ಹೆಚ್ಚಾಗುತ್ತಿದ್ದು, ಮತ್ತೊಂದು ಹಾಟ್ ಸ್ಪಾಟ್ ಆಗಿ ಪರಿವರ್ತನೆಯಾಗುತ್ತಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬಾಗಲಕೋಟೆ:  ಜಮಖಂಡಿ ನಗರ ಪ್ರದೇಶದಲ್ಲಿ ಕೊರೊನಾ ಕಾಟ ನಿಧಾನಗತಿಯಲ್ಲಿ ಹೆಚ್ಚಾಗುತ್ತಿದ್ದು, ಮತ್ತೊಂದು ಹಾಟ್ ಸ್ಪಾಟ್ ಆಗಿ ಪರಿವರ್ತನೆಯಾಗುತ್ತಿದೆ.

ಈವರೆಗೆ ಜಮಖಂಡಿಯ 9 ಜನರು ಸೋಂಕಿತರಾಗಿದ್ದಾರೆ. 20 ವರ್ಷದ ಯುವತಿ, 11 ವರ್ಷದ ಬಾಲಕ ಹಾಗೂ 22 ವರ್ಷದ ಯುವಕನ ವರದಿ ಪಾಸಿಟಿವ್‌ ಆಗಿದೆ.

ರಾಜ್ಯ ಸರಕಾರ ಮಂಗಳವಾರ ಬಿಡುಗಡೆಗೊಳಿಸಿದ ಹೆಲ್ತ್‌ ಬುಲೆಟಿನ್‌ನಲ್ಲಿಮಾಹಿತಿ ದೃಢಪಡಿಸಲಾಗಿದೆ.ಯುವಕನ ಟ್ರಾವೆಲ್‌ ಹಿಸ್ಟರಿಯನ್ನು ಅಧಿಕಾರಿಗಳು ಸಂಗ್ರಹಿಸುತ್ತಿದ್ದಾರೆ. 11 ವರ್ಷದ ಬಾಲಕ ಪಿ 456ನೇ ರೋಗಿಯ ನೆರೆ ಹೊರೆಯವನಾಗಿದ್ದು, ಮೂವರನ್ನೂ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. 

ಸೋಂಕಿತರು ಕಂಟೈನ್‌ಮೆಂಟ್‌ ಪ್ರದೇಶದ  ನಿವಾಸಿಗಳಾಗಿರುವುದರಿಂದ ಆ ಪ್ರದೇಶದಲ್ಲಿಮತ್ತಷ್ಟು ಜನರ ಆರೋಗ್ಯ ತಪಾಸಣೆ ಕೈಗೊಳ್ಳಲಾಗುತ್ತದೆ. ಈವರೆಗೆ ಬಾಗಲಕೋಟೆಯಲ್ಲಿ 13, ಜಮಖಂಡಿಯಲ್ಲಿ 9 ಹಾಗೂ  ಮುಧೋಳದಲ್ಲಿ 7 ಸೋಂಕಿತರು ಪತ್ತೆಯಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com