ಭಾರತೀಯ ವಿಜ್ಞಾನ ಸಂಸ್ಥೆ ಕ್ಯಾಂಪಸ್ ನಲ್ಲಿ ಕೋವಿಡ್-19: ವಿದ್ಯಾರ್ಥಿಗಳು ಆತಂಕ

ಭಾರತೀಯ ವಿಜ್ಞಾನ ಸಂಸ್ಥೆ ಆವರಣದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ಕಾಣಿಸಿಕೊಂಡಿದ್ದು, ವಿದ್ಯಾರ್ಥಿಗಳು ಆತಂಕಗೊಂಡಿದ್ದಾರೆ. ಕ್ಯಾಂಪಸ್ ನಲ್ಲಿ 44 ಪಾಸಿಟಿವ್ ಪ್ರಕರಣಗಳು ಕಂಡುಬಂದಿದ್ದು, ಅನೇಕ ವಿಭಾಗಗಳು, ಹಾಸ್ಟೆಲ್ ವೊಂದನ್ನು ಸೀಲ್ ಡೌನ್ ಮಾಡಲಾಗಿದೆ.
ಭಾರತೀಯ ವಿಜ್ಞಾನ ಸಂಸ್ಥೆ
ಭಾರತೀಯ ವಿಜ್ಞಾನ ಸಂಸ್ಥೆ

ಬೆಂಗಳೂರು: ಭಾರತೀಯ ವಿಜ್ಞಾನ ಸಂಸ್ಥೆ ಆವರಣದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ಕಾಣಿಸಿಕೊಂಡಿದ್ದು, ವಿದ್ಯಾರ್ಥಿಗಳು ಆತಂಕಗೊಂಡಿದ್ದಾರೆ. ಕ್ಯಾಂಪಸ್ ನಲ್ಲಿ 44 ಪಾಸಿಟಿವ್ ಪ್ರಕರಣಗಳು ಕಂಡುಬಂದಿದ್ದು, ಅನೇಕ ವಿಭಾಗಗಳು, ಹಾಸ್ಟೆಲ್ ವೊಂದನ್ನು ಸೀಲ್ ಡೌನ್ ಮಾಡಲಾಗಿದೆ.

ರಿಜಿಸ್ಟ್ರರ್ ಕೆವಿಎಸ್ ಹರಿ ಇದನ್ನು ಖಚಿತಪಡಿಸುತ್ತಿಲ್ಲ ಅಥವಾ ನಿರಾಕರಿಸುತ್ತಿಲ್ಲ. ಆದಾಗ್ಯೂ, 500 ವಿದ್ಯಾರ್ಥಿಗಳು ಕ್ಯಾಂಪಸ್ ಗೆ ಮರಳಿದ್ದು, ಕ್ವಾರಂಟೈನ್ ನಿಯಮ ಪಾಲಿಸಿ ಮರು ಬರುತ್ತಿರುವ ವಿದ್ಯಾರ್ಥಿಗಳಿಗೆ ಮರು ಪ್ರವೇಶವನ್ನು ಸಂಸ್ಥೆ ನಿಲ್ಲಿಸಿಲ್ಲ. ಅಂತಿಮ ವರ್ಷದ ಸಂಶೋಧನಾ ವಿದ್ಯಾರ್ಥಿಗಳಿಗೆ ವಾಪಸ್ಸಾಗುವ ಆಯ್ಕಯ್ಕ ಪತ್ರವನ್ನು ಕಳುಹಿಸಲಾಗಿದೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಅವರು ತಿಳಿಸಿದ್ದಾರೆ.

ಆಡಳಿತ ಮಂಡಳಿಯಿಂದ ಪಾರದರ್ಶಕತೆಯ ಕೊರತೆಯಾಗಿದೆ. ರಿಜಿಸ್ಟ್ರಾರ್ ಕಳುಹಿಸಿದ ಇಮೇಲ್‌ಗಳ ನಡುವೆ ಯಾವುದೇ ಸ್ಥಿರತೆ ಇಲ್ಲ, ವಾರ್ಡನ್ ಗಳು ಮತ್ತು ಮಾಧ್ಯಮಗಳಿಂದ ಕೋವಿಡ್ ಸಂಖ್ಯೆಯ ವರದಿಯಾಗಿದೆ ಎಂದು ಕ್ಯಾಂಪಸ್ ನಿವಾಸಿಯೊಬ್ಬರು ಹೇಳಿದ್ದಾರೆ. ಸಮುದಾಯದೊಂದಿಗೆ ಪಾರದರ್ಶಕತೆ ನಮ್ಮ ಪ್ರಮುಖ ಜವಾಬ್ದಾರಿಯಾಗಿದೆ. ಆನ್ ಲೈನ್ ಮೂಲಕ ಮೊದಲ ಸೆಮಿಸ್ಟರ್ ಪರೀಕ್ಷೆ ನಡೆಸಲು ಎದುರು ನೋಡಲಾಗುತ್ತಿದೆ. ಹೊಸ ಅಕಾಡೆಮಿಕ್ ವರ್ಷ ಆರಂಭಕ್ಕೆ ಯುಜಿಸಿ ಮಾರ್ಗಸೂಚಿಯನ್ನು ಕಾಯಲಾಗುತ್ತಿದೆ ಎಂದು ಹರಿ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com