ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದೀರಾ, ಕುಳಿತಲ್ಲಿಂದಲೇ ಇ-ಸೇವಾ ಕೇಂದ್ರ ಮೂಲಕ ದಂಡ ಪಾವತಿಸಿ

ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಮತ್ತು ದಂಡ ಪಾವತಿ ಪ್ರಕ್ರಿಯೆ ಸುಲಭವಾಗಿ ನಡೆಯಲು ಹೈಕೋರ್ಟ್ ನಲ್ಲಿ ವರ್ಚುವಲ್ ಕೋರ್ಟ್ ಸ್ಥಾಪಿಸಲಾಗಿದೆ. 

ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಮತ್ತು ದಂಡ ಪಾವತಿ ಪ್ರಕ್ರಿಯೆ ಸುಲಭವಾಗಿ ನಡೆಯಲು ಹೈಕೋರ್ಟ್ ನಲ್ಲಿ ವರ್ಚುವಲ್ ಕೋರ್ಟ್ ಸ್ಥಾಪಿಸಲಾಗಿದೆ. 

ವರ್ಚುವಲ್ ಕೋರ್ಟ್ ಸೇರಿದಂತೆ 6 ಇ-ಕೇಂದ್ರಗಳನ್ನು ನಿನ್ನೆ ಉದ್ಘಾಟಿಸಿದ ಸುಪ್ರೀಂ ಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ಇ-ಕೋರ್ಟ್ ಮೂಲಕ ಸಂಚಾರ ನಿಯಮ ಉಲ್ಲಂಘನೆ ಕೇಸುಗಳನ್ನು ನೋಡಿಕೊಳ್ಳಲು ಇನ್ನು ಮುಂದೆ ಕೇವಲ ಒಬ್ಬರು ನ್ಯಾಯಾಂಗ ಅಧಿಕಾರಿ ಸಾಕು, ಇದುವರೆಗೆ 6 ಜನರು ಬೇಕಾಗುತ್ತಿತ್ತು, ವರ್ಚುವಲ್ ಕೋರ್ಟ್ ಸ್ಥಾಪನೆ ಮೂಲಕ ಕಡಿಮೆ ಮಾನವ ಸಂಪನ್ಮೂಲ ಸಾಕಾಗುತ್ತದೆ ಎಂದರು.

ಇಂಟರ್-ಆಪರೇಬಲ್ ಕ್ರಿಮಿನಲ್ ಜಸ್ಟೀಸ್ ಸಿಸ್ಟಮ್, ಹೈಕೋರ್ಟ್‌ನಲ್ಲಿ ಇ-ಫೈಲಿಂಗ್, ಜಿಲ್ಲಾ ನ್ಯಾಯಾಲಯಗಳಲ್ಲಿ ಇ-ಫೈಲಿಂಗ್, ವಾಣಿಜ್ಯ ನ್ಯಾಯಾಲಯಗಳಿಗೆ ವೆಬ್‌ಸೈಟ್, ಪ್ರಮಾಣೀಕೃತ ಪ್ರತಿಗಳಿಗಾಗಿ ಆನ್‌ಲೈನ್ ಅರ್ಜಿ ಮತ್ತು ನ್ಯಾಯಾಲಯ ಶುಲ್ಕದ ಆನ್‌ಲೈನ್ ಪಾವತಿ, ಪ್ರಕ್ರಿಯೆ ಶುಲ್ಕಗಳು ಮತ್ತು ನಕಲು ಶುಲ್ಕ ಇತ್ಯಾದಿ ಸೇವೆಗಳು ಕೂಡ ಇನ್ನು ಮುಂದೆ ವರ್ಚುವಲ್ ಕೋರ್ಟ್ ಮೂಲಕ ಲಭ್ಯವಾಗಲಿದೆ.

ದೆಹಲಿ, ಫರೀದಾಬಾದ್, ಚೆನ್ನೈ, ಪುಣೆ ಮತ್ತು ಕೊಚ್ಚಿನ್ ಬಳಿಕ ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಪಟ್ಟಂತೆ ವರ್ಚುವಲ್ ಕೋರ್ಟ್ ಹೊಂದಿರುವ ಆರನೇ ನಗರ ಬೆಂಗಳೂರು ಆಗಿದೆ. ಇದರಿಂದ ಸಾರ್ವಜನಿಕರಿಗೆ ಸಹಾಯವಾಗಲಿದ್ದು ಸಂಚಾರ ನಿಯಮ ಉಲ್ಲಂಘನೆ ಮಾಡಿ ದಂಡ ಕಟ್ಟಬೇಕಾದವರು ಇನ್ನು ಮುಂದೆ ಸ್ಟೇಷನ್ ಗೆ ಹೋಗಬೇಕಾಗಿಲ್ಲ, ಇ-ಸೇವಾ ಕೇಂದ್ರಗಳ ಮೂಲಕ ಪಾವತಿಸಬಹುದು. 

Related Stories

No stories found.

Advertisement

X
Kannada Prabha
www.kannadaprabha.com