
ಕಲಬುರಗಿ: ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಜಿ, .ರಾಮಕೃಷ್ಣ(84) ನಿಧನರಾಗಿದ್ದಾರೆ. ವಯೋಸಹಜ ಕಾಯಿಕೆಯಿಂದ ಬಳಲುತ್ತಿದ್ದ ರಾಮಕೃಷ್ಣ ಅವರು ಭಾನುವಾರ ಕಲಬುರಗಿಯ ಪ್ರಶಾಂತ ನಗರದಲ್ಲಿನ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು.
ವೀರಪ್ಪ ಮೊಯ್ಲಿ ನೇತೃತ್ವರ ಸರ್ಕಾರದಲ್ಲಿ ರಾಮಕೃಷ್ಣ ಅವರು ವೈದ್ಯಕೀಯ ಶಿಕ್ಷಣ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಕಮಲಾಪುರ ಹಾಗೂ ಕಲಬುರಗಿ ಗ್ರಾಮೀಣ ಕ್ಷೇತ್ರಗಳನ್ನು ಪ್ರತಿನಿಧಿಸಿದ್ದ ರಾಮಕೃಷ್ಣ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು.
ತಿಂಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದ ಹಿರಿಯ ನಾಯಕನ ನಿಧನದಿಂದ ಅವರ ಮನೆಯಲ್ಲಿ ಶೋಕ ಮಡುಗಟ್ಟಿದೆ.
ಜಿ. ರಾಮಕೃಷ್ಣ ಅವರ ನಿಧನ ವಾರ್ತೆ ತಿಳಿದ ಗಣ್ಯರು ಅವರ ಮನೆಗೆ ತೆರಳಿ ಅಂತಿಮ ದರ್ಶನ ಪಡೆಯುತ್ತಿದ್ದಾರೆ.
Advertisement