ಗೋವಿಂದ ಕಾರಜೋಳ
ಗೋವಿಂದ ಕಾರಜೋಳ

ಯುಕೆಪಿ ಸಂತ್ರಸ್ತರಿಗೆ ಹಕ್ಕು ಪತ್ರ ವಿತರಿಸಿದ ಸಚಿವ ಗೋವಿಂದ ಕಾರಜೋಳ

ಯುಕೆಪಿ ಯೋಜನೆಯ ಯುನಿಟ್ 2 ವ್ಯಾಪ್ತಿಯ ಬಾಡಿಗೆದಾರರು ಹಾಗೂ ಇತರೆ ಸಂತ್ರಸ್ತರಿಗೆ ಹಕ್ಕು ಪತ್ರಗಳನ್ನು ಬಾಗಲಕೋಟೆಯಲ್ಲಿಂದು ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ವಿತರಿಸಿದರು.

ಬಾಗಲಕೋಟೆ: ಯುಕೆಪಿ ಯೋಜನೆಯ ಯುನಿಟ್ 2 ವ್ಯಾಪ್ತಿಯ ಬಾಡಿಗೆದಾರರು ಹಾಗೂ ಇತರೆ ಸಂತ್ರಸ್ತರಿಗೆ ಹಕ್ಕು ಪತ್ರಗಳನ್ನು ಬಾಗಲಕೋಟೆಯಲ್ಲಿಂದು ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ವಿತರಿಸಿದರು.

ನಂತರ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿಗಳಾದ ದಿ. ರಾಮಕೃಷ್ಣ ಹೆಗ್ಗಡೆ ಬಾಗಲಕೋಟೆ ನವನಗರವನ್ನು ಚಂಡಿಗಡದ  ಮಾದರಿಯಲ್ಲಿ ನಿರ್ಮಿಸುವ ಕನಸನ್ನು ಹೊಂದಿದ್ದರು. ಬಿಡಿಟಿಎ ಅಧ್ಯಕ್ಷರಾಗಿರುವ ಶಾಸಕ ಡಾ. ವೀರಣ್ಣ ಚರಂತಿಮಠ ಅವರು ರಾಮಕೃಷ್ಣ ಹೆಗಡೆ ಅವರ ಕನಸನ್ನು ಸಾಕಾರಗೊಳಿಸಲಿದ್ದಾರೆ ಎಂದರು.

ಚರಂತಿಮಠ ಅವರು ಯುಕೆಪಿ, ಪುನರ್ವಸತಿ, ಪುನರ್ ನಿರ್ಮಾಣ ಕುರಿತ ಸಮಸ್ಯೆಗಳನ್ನು ಸಮಗ್ರವಾಗಿ ಮಾಹಿತಿ ಹೊಂದಿದ್ದು, ಸುಸಲಿತವಾಗಿ ತ್ವರಿತವಾಗಿ ಸಮಸ್ಯೆಗಳನ್ನು ಪರಿಹರಿಸಲಿದ್ದಾರೆ. ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 

ನಿವೇಶನ ಪಡೆದ ಸಂತ್ರಸ್ತರು ನಿವೇಶನಗಳನ್ನು ಮಾರಾಟ ಮಾಡಬಾರದು. ಯೋಜನಾ ಬದ್ಧವಾಗಿ ನೀಡಿದ ಈ ನಿವೇಶನಗಳು ತಮ್ಮ ಮನೆತನಕ್ಕೆ, ಮುಂದಿನ ಜನಾಂಗಕ್ಕೆ ಆಸ್ತಿಯಾಗಿ ರೂಪುಗೊಳ್ಳುತ್ತವೆ. ಈ ನಿವೇಶನಗಳನ್ನು‌ ಮಾರಾಟ ಮಾಡಬಾರದು. ಬಾಗಲಕೋಟೆ ನಗರವು ಮಾದರಿ ನಗರವಾಗಿ ರೂಪಿಸಲು ಎಲ್ಲರೂ ಶ್ರಮಿಸಬೇಕು. ಕೊವಿಡ್ ಹಿನ್ನೆಲೆಯಲ್ಲಿ ಯುಕೆಪಿ ಅನುಷ್ಠಾನಕ್ಕೆ ಹಿನ್ನಡೆಯಾಗಿದೆ, ಕೊವಿಡ್ ವೈರಸ್ ಸಮಸ್ಯೆ ಇಲ್ಲದಿದ್ದರೆ ಯುಕೆಪಿ ಯೋಜನೆ ಯಶಸ್ವಿಯಾಗಿ ಅನುಷ್ಠಾನಗೊಂಡು ಈ ಭಾಗದ ಸ್ವರೂಪವೇ ಬದಲಾಗುತ್ತಿತ್ತು ಎಂದು ಅವರು ತಿಳಿಸಿದರು

Related Stories

No stories found.

Advertisement

X
Kannada Prabha
www.kannadaprabha.com