ಮೈಸೂರಿನಲ್ಲಿ ಭಾರತೀಯ ಪರಂಪರೆ ಮತ್ತು ಸಂರಕ್ಷಣಾ ಸಂಸ್ಥೆ ಸ್ಥಾಪನೆಗೆ ಸಿಟಿ ರವಿ ಒತ್ತಾಯ

ಮೈಸೂರಿನಲ್ಲಿ ಭಾರತೀಯ ಪರಂಪರೆ ಮತ್ತು ಸಂರಕ್ಷಣಾ ಸಂಸ್ಥೆ ಸ್ಥಾಪಿಸಲು ಕರ್ನಾಟಕದ ಸಚಿವರು ಒತ್ತಾಯಿಸಿದ್ದಾರೆ. 
ಸಿಟಿ ರವಿ
ಸಿಟಿ ರವಿ

ಬೆಂಗಳೂರು: ಮೈಸೂರಿನಲ್ಲಿ ಭಾರತೀಯ ಪರಂಪರೆ ಮತ್ತು ಸಂರಕ್ಷಣಾ ಸಂಸ್ಥೆ ಸ್ಥಾಪಿಸಲು ಕರ್ನಾಟಕದ ಸಚಿವರು ಒತ್ತಾಯಿಸಿದ್ದಾರೆ. 

ಪಾರಂಪರಿಕ ನಗರವು ಓರಿಯಂಟಲ್ ರಿಸರ್ಚ್ ಇನ್ಸ್ಟಿಟ್ಯೂಟ್ ಗೆ ದಶಕಗಳಿಂದ ನೆಲೆಯಾಗಿದೆ.ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಸಿಟಿ ರವಿ ಮತ್ತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಅವರನ್ನು ಭೇಟಿ ಮಾಡಿ ಮೈಸೂರಿನಲ್ಲಿ ಪಾರಂಪರಿಕ ಸಂಸ್ಥೆಯನ್ನು ಸ್ಥಾಪಿಸಲು ಪ್ರಸ್ತಾವನೆ ಸಲ್ಲಿಸಿದ್ದಾರೆ.

ಒಮ್ಮೆ ಸಂಸ್ಥೆ ಆರಂಭವಾದರೇ ಹಸ್ತಪ್ರತಿಗಳು ಮತ್ತು ಸ್ಮಾರಕಗಳನ್ನು ಸಂರಕ್ಷಿಸಲು ಸಹಾಯವಾಗುತ್ತದೆ, ಮೈಸೂರಿನ ಓರಿಯೆಂಟಲ್ ಸಂಸ್ಥೆಯಲ್ಲಿ ಈಗಾಗಲೇ 70ಸಾವಿರ ಹಸ್ತಪ್ರತಿಗಳನ್ನು  ಹೊಂದಿದೆ, ಇದರಲ್ಲಿ 40 ಸಾವಿರ  ತಾಳೆಗರಿಗಳ ಹಸ್ತಪ್ರತಿಗಳಿದ್ದು ಅದರಿಂದ ಪಾರಂಪರಿಕ ಮೌಲ್ಯ ಹೆಚ್ಚಿದೆ ಎಂದು ಸಂಸದ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

ಹಸ್ತಪ್ರತಿಗಳ ಡಿಜಿಟಲೀಕರಣವನ್ನು ಈಗಾಗಲೇ ಕೈಗೆತ್ತಿಕೊಳ್ಳಲಾಗಿದೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.  ನಮಗೆ ಸಚಿವರು ಯಾವುದೇ ಮಾಹಿತಿ ನೀಡಿಲ್ಲ, ಹಾಗೂ ದೆಹಲಿ ಭೇಟಿ ಬಗ್ಗ ನಮಗೆ ಏನೂ ತಿಳಿದಿಲ್ಲ ಎಂದು ಪ್ರತಾಪ್ ಸಿಂಹ ತಿಳಿಸಿದ್ದಾರೆ.

ಹೊಸ ಪಾರಂಪರಿಕ ಕೇಂದ್ರವು ರಾಜ್ಯಕ್ಕೆ ರಾಷ್ಟ್ರೀಯ ಸ್ಥಾನಮಾನ ನೀಡುತ್ತದೆ. ಭಾರತೀಯ ಪರಂಪರೆ ಮತ್ತು ಸಂರಕ್ಷಣಾ ಸಂಸ್ಥೆಯನ್ನು ಕೇಂದ್ರ ಬಜೆಟ್‌ನಲ್ಲಿ ಎಫ್‌ಎಂ ಸೀತಾರಾಮನ್ ಘೋಷಿಸಿದ್ದರು,.ಈ ಸಂಸ್ಥೆಯನ್ನು ಪಡೆದು ಕೊಳ್ಳಲು ಹಲವು ರಾಜ್ಯಗಳು ಪ್ರಯತ್ನಿಸಿದ್ದವು, ಇದು ಪ್ರವಾಸೋದ್ಯಮ ಇಲಾಖೆ ಅಡಿಯಲ್ಲಿ ಬರಲಿದೆ.  ಇದರಿಂದ ಸ್ಥಳೀಯರಿಗೆ ಉದ್ಯೋಗವಕಾಶ ಸಿಗಲಿದೆ ಎಂದು ಸಿಟಿ ರವಿ ತಿಳಿಸಿದ್ದಾರೆ. 

ಕೇಂದ್ರ ಪ್ರವಾಸೋದ್ಯಮ ಸಚಿವ ಪ್ರಹ್ಲಾದ್ ಸಿಂಗಿ ಪಟೇಲ್ ಅವರನ್ನು ಭೇಟಿ ಮಾಡಿ ಮೈಸೂರಿನಲ್ಲಿ ಪಾರಂಪರಿಕಾ ಸಂಸ್ಥೆಯನ್ನು ಸ್ಥಾಪಿಸುವಂತೆ ಒತ್ತಾಯಿಸಿದ್ದಾರೆ. ಕನ್ನಡ ಶಾಸ್ತ್ರೀಯ ಭಾಷಾ ಅಧ್ಯಯನ ಕೇಂದ್ರಕ್ಕಾಗಿ ಇತ್ತೀಚೆಗೆ ಭೂಮಿಯನ್ನು ಮೀಸಲಿರಿಸಲಾಗಿದೆ, ಎಂದು ಅವರು ತಿಳಿಸಿದ್ದಾರೆ.

ಕೇಂದ್ರ ಕ್ರೀಡಾ ಸಚಿವ ಕಿರಣ್‌ ರಿಜಿಜು ಅವರನ್ನೂ ಭೇಟಿ ಮಾಡಿದ ಸಚಿವ ಸಿ.ಟಿ ರವಿ, ಖೇಲೋ ಇಂಡಿಯಾ ಯೋಜನೆಯಡಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಳಾಂಗಣ ಕ್ರೀಡಾಂಗಣ ಮತ್ತು ಸಿಂಥೆಟಿಕ್‌ ಟ್ರ್ಯಾಕ್‌ ನಿರ್ಮಾಣ ಮಾಡಲು 18.50 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡುವಂತೆ ಮನವಿ ಮಾಡಿದರು.

ಮಾನವ ಸಂಪನ್ಮೂಲ ಸಚಿವ ರಮೇಶ್‌ ಪೋಖ್ರಿಯಾಲ್‌ ನಿಶಾಂಕ್‌ ಅವರನ್ನೂ ರವಿ ಭೇಟಿ ಮಾಡಿದರು. ''ಸಾಂಸ್ಕೃತಿಕ ವಿವಿ ಸ್ಥಾಪನೆಗೆ ಕೇಂದ್ರ ಸರಕಾರ ಕಳೆದ ಬಜೆಟ್‌ನಲ್ಲಿ ಮಾಡಿದ ಘೋಷಣೆಯಂತೆ ವಿವಿಯನ್ನು ಮೈಸೂರಿನಲ್ಲಿ ಆರಂಭಿಸಲು ಮನವಿ ಮಾಡಲಾಗಿದೆ. ಮೈಸೂರಿನಲ್ಲಿ ಎಲ್ಲ ಸೌಕರ್ಯಗಳಿರುವ ಕಾರಣ ವಿವಿ ಆರಂಭಿಸಲು ಮನವಿ ಮಾಡಲಾಗಿದೆ,'' ಎಂದು ಭೇಟಿ ಬಳಿಕ ಸಿ.ಟಿ. ರವಿ ತಿಳಿಸಿದರು.

ಇನ್ನೂ ಮೀನುಗಾರಿಕ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ದೆಹಲಿಯಲ್ಲಿ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರನ್ನು ಭೇಟಿ ಮಾಡಿ ಉಡುಪಿ. ಮಂಗಳೂರು ಮತ್ತು ಕಾರವಾರದಲ್ಲಿ  ಫುಡ್ ಪಾರ್ಕ್ ಸ್ಥಾಪಿಸುವ ಸಂಬಂಧ ಪ್ರಸ್ತಾವನೆ ಸಲ್ಲಿಸಿ ಚರ್ಚಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com