ಬೆಂಗಳೂರು ಗಲಭೆ ಆರೋಪಿ ಸಮಿಯುದ್ದೀನ್ ನಾಪತ್ತೆ? ಪತ್ನಿಂದ ಹೇಬಿಯಸ್ ಕಾರ್ಪಸ್ ಸಲ್ಲಿಕೆಗೆ ತೀರ್ಮಾನ

ಡಿಜೆ ಹಳ್ಳಿ ಗಲಭೆ  ಆರೋಪಿಯ ಪತ್ನಿ ಫಾತಿಮಾ ತಬಸ್ಸುಮ್, ಭಯೋತ್ಪಾದಕ ಸಂಘಟನೆ ಅಲ್ ಹಿಂದ್ ಜೊತೆ ಸಂಬಂಧ ಹೊಂದಿದ್ದಾನೆಂದು  ಶಂಕಿಸಲಾಗಿರುವ ಸಮಿಯುದ್ದೀನ್ ಕಾಣೆಯಾಗಿರುವುದಾಗಿ ನಗರ ಪೊಲೀಸ್ ಆಯುಕ್ತರ ಕಚೇರಿಗೆ ಸಲ್ಲಿಸಿದ್ದಾರೆ. ಅಲ್ಲದೆ ಆತನ ಉಪಸ್ಥಿತಿಯನ್ನು ಖಾತ್ರಿಪಡಿಸಲು ಶೀಘ್ರವೇ ಹೇಬಿಯಸ್ ಕಾರ್ಪಸ್  ಅರ್ಜಿ ಸಲ್ಲಿಕೆಗೆ ತೀರ್ಮಾನಿಸಿದ್ದಾಗಿ ಹೇಳೀದ್ದಾರೆ.
ಬೆಂಗಳೂರು ಗಲಭೆ ಆರೋಪಿ ಸಮಿಯುದ್ದೀನ್ ನಾಪತ್ತೆ? ಪತ್ನಿಂದ ಹೇಬಿಯಸ್ ಕಾರ್ಪಸ್ ಸಲ್ಲಿಕೆಗೆ ತೀರ್ಮಾನ
Updated on

ಬೆಂಗಳೂರು: ಡಿಜೆ ಹಳ್ಳಿ ಗಲಭೆ  ಆರೋಪಿಯ ಪತ್ನಿ ಫಾತಿಮಾ ತಬಸ್ಸುಮ್, ಭಯೋತ್ಪಾದಕ ಸಂಘಟನೆ ಅಲ್ ಹಿಂದ್ ಜೊತೆ ಸಂಬಂಧ ಹೊಂದಿದ್ದಾನೆಂದು  ಶಂಕಿಸಲಾಗಿರುವ ಸಮಿಯುದ್ದೀನ್ ಕಾಣೆಯಾಗಿರುವುದಾಗಿ ನಗರ ಪೊಲೀಸ್ ಆಯುಕ್ತರ ಕಚೇರಿಗೆ ಸಲ್ಲಿಸಿದ್ದಾರೆ. ಅಲ್ಲದೆ ಆತನ ಉಪಸ್ಥಿತಿಯನ್ನು ಖಾತ್ರಿಪಡಿಸಲು ಶೀಘ್ರವೇ ಹೇಬಿಯಸ್ ಕಾರ್ಪಸ್  ಅರ್ಜಿ ಸಲ್ಲಿಕೆಗೆ ತೀರ್ಮಾನಿಸಿದ್ದಾಗಿ ಹೇಳೀದ್ದಾರೆ.

ಸಮಿಯುದ್ದೀನ್ ನನ್ನು ಆಗಸ್ಟ್ 15 ರಂದು ಕೇಂದ್ರ ಅಪರಾಧ ಶಾಖೆ (ಸಿಸಿಬಿ) ವಶಕ್ಕೆ ತೆಗೆದುಕೊಂಡಿತು ಮತ್ತು ಅಲ್ ಹಿಂದ್ ಸದಸ್ಯರೊಂದಿಗಿನ ಶಂಕಿತ ಸಂಪರ್ಕಕ್ಕಾಗಿ ತನಿಖೆ ನಡೆಸಲಾಗುತ್ತಿದೆ. ಈ ಸಂಘಟನೆಯನ್ನು ಕಳೆದ ವರ್ಷ ಬೆಂಗಳೂರು ಮತ್ತು ತಮಿಳುನಾಡು ಪೊಲೀಸರು ಪತ್ತೆಹಚ್ಚಿದ್ದರು. ಗಲಭೆಯಲ್ಲಿ ಭಾಗಿಯಾಗಿರುವ ಕಾರಣಕ್ಕಾಗಿ ಆಗಸ್ಟ್ 15 ರ ರಾತ್ರಿ ಸಿಸಿಬಿ ಅಧಿಕಾರಿಗಳಿಂದ  ಕರೆ ಬಂದ ಕೂಡಲೇ ಸಮಿಯುದ್ದೀನ್ ನಾಪತ್ತೆಯಾಗಿದ್ದಾನೆ ಎಂದು ಫಾತಿಮಾ ಹೇಳಿದ್ದಾರೆ,  

ಡಿಜೆ ಹಳ್ಳಿ ಪೊಲೀಸ್ ಮಿತಿಯಲ್ಲಿ ಕಾವಲ್ ಬೈರಸಂದ್ರದಲ್ಲಿರುವ ಪುಲಕೇಶಿನಗರ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ಪೂರ್ವಜರ ಮನೆಗೆ ಉದ್ರಿಕ್ತರ ಗುಂಪು ಮಂಗಳವಾರ ( ಆಗಸ್ಟ್ 11) ರಾತ್ರಿ ಬೆಂಕಿ ಹಚ್ಚಿತ್ತು.

ನಾರಿ ಎಂಬ ಎನ್‌ಜಿಒ ನಡೆಸುತ್ತಿರುವ ಎಚ್‌ಬಿಆರ್ ಲೇಔಟ್ ನಿವಾಸಿಯಾದ ಫಾತಿಮಾ, ಅಂದಿನಿಂದಲೂ ಪತಿಯನ್ನು ಸಂಪರ್ಕಿಸಲು ತೀವ್ರವಾಗಿ ಪ್ರಯತ್ನಿಸುತ್ತಿದ್ದಾರೆ. ಅವರನ್ನು ಭೇಟಿಯಾಗಲು ಪ್ರಯತ್ನಿಸಿದ್ದೆ ಆದರೆ ನನಗೆ ಯಾವುದೇ ಮಾಹಿತಿ ಸಿಗಲಿಲ್ಲ ಎಂದು  ಫಾತಿಮಾ ಹೇಳಿದ್ದಾರೆ. ಎರಡು ವರ್ಷಗಳ ಹಿಂದೆ ಫಾತಿಮಾ-ಸಮಿಯುದ್ದೀನ್ ವಿವಾಹವಾಗಿತ್ತು.

ಗಲಭೆ ಪ್ರಕರಣದಲ್ಲಿ ಸಮಿಯುದ್ದೀನ್ ನನ್ನು ಬಂಧಿಸಲಾಗಿದೆ ಮತ್ತು ನಗರದಲ್ಲಿ ಬಾಂಬ್ ಸ್ಫೋಟ ಪ್ರಕರಣಗಳಲ್ಲಿ ಆರೋಪಿಗಳಾದ ಅಲ್ ಹಿಂದ್ ಸದಸ್ಯರೊಂದಿಗೆ ಅವರ ಸಂಪರ್ಕ  ತನಿಖೆಯಿಂದ ತಿಳಿದುಬಂದಿದೆ ಎಂದು ಸಿಸಿಬಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹೆಚ್ಚಿನ ವಿಚಾರಣೆಗಾಗಿ ಸಮಿಯುದ್ದೀನ್ ಪೊಲೀಸ್ ಕಸ್ಟಡಿಯಲ್ಲಿದ್ದು, ನಿಗೂಢ  ಸ್ಥಳದಲ್ಲಿ ಬಂಧಿಸಿಡಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಸಮಿಯುದ್ದೀನ್ ಕೇವಲ ಸ್ವಯಂಸೇವಕ ಮತ್ತು ನಾರಿ ಸಂಘಟನೆಯ ಪದಾಧಿಕಾರಿ ಅಲ್ಲ, ಮತ್ತು ವಿದೇಶೀ ಕೊಡುಗೆನಿಯಂತ್ರಣ ಕಾಯ್ದೆ(Foreign Contribution Regulation Act.)ಯಡಿ ನೋಂದಾಯಿಸದ ಕಾರಣ ಎನ್‌ಜಿಒಗೆ ಯಾವುದೇ ವಿದೇಶಿ ಧನಸಹಾಯ ದೊರೆತಿಲ್ಲ ಎಂದು ಫಾತಿಮಾ ಹೇಳಿದ್ದಾರೆ.

ಸತ್ಯ-ಶೋಧನಾ ಕಾರ್ಯಾಚರಣೆಯಲ್ಲಿ ಸಿವಿಲ್ ಸೊಸೈಟಿ

 ಡಿಜೆ ಹಳ್ಳಿಯಲ್ಲಿ ನಡೆದ ಹಿಂಸಾಚಾರದ ಬಗ್ಗೆ ಸತ್ಯ ಶೋಧನೆ ನಡೆಸಲು ನಗರದ ವಿವಿಧ ನಾಗರಿಕ ವೇದಿಕೆ, ಸಿವಿಲ್ ಸೊಸೈಟಿಗಳು,  ಸಂಸ್ಥೆಗಳು ಒಗ್ಗೂಡಿವೆ. ಸಿವಿಲ್ ಸೊಸೈಟಿ ಸದಸ್ಯರು ಮಾಹಿತಿಯೊಂದಿಗೆ ಮುಂದೆ ಬರಬೇಕೆಂದು ಆಗ್ರಹಿಸಿದರು. 24 ಸದಸ್ಯರ ಸತ್ಯ-ಶೋಧನಾ ತಂಡವು ಆಗಸ್ಟ್ 11 ರಂದು ಡಿಜೆ ಹಳ್ಳಿ  ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಿಂಸಾತ್ಮಕ ಘಟನೆಗೆ ಕಾರಣವಾದ ಪ್ರಕರಣಕ್ಕೆ  ಟೈಮ್‌ಲೈನ್ ಅನ್ನು ತಯಾರಿಸಿದ್ದು 10 ದಿನಗಳಲ್ಲಿ ವರದಿಯನ್ನು ಪ್ರಕಟಿಸುವ ನಿರೀಕ್ಷೆಯಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com