ಕರಾವಳಿ ಭಾಗದಲ್ಲಿ ಪ್ರಥಮ! ಪ್ಲಾಸ್ಮಾ ಥೆರಪಿ ಗೆ ಡಿಸಿಜಿಐ ಅನುಮೋದನೆ ಪಡೆದ ಕೆಎಸ್ ಹೆಗ್ಡೆ ಆಸ್ಪತ್ರೆ

ನ್ಯಾಯಮೂರ್ತಿ ಕೆ ಎಸ್ ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ ಕರಾವಳಿ ಪ್ರದೇಶದ  ಕೋವಿಡ್ -19 ರೋಗಿಗಳಿಗೆ ಅನುಕೂಲವಾಗುವಂತೆ ಪ್ಲಾಸ್ಮಾ ಚಿಕಿತ್ಸೆ ನೀಡಲು ಡಿಸಿಜಿಐ ಅನುಮತಿ ಪಡೆದ ಮೊದಲ ಆಸ್ಪತ್ರೆಯಾಗಿದೆ.
ಕೆ.ಎಸ್. ಹೆಗ್ಡೆ ಚಾರಿಟಬಲ್ ಆಸ್ಪತ್ರೆ
ಕೆ.ಎಸ್. ಹೆಗ್ಡೆ ಚಾರಿಟಬಲ್ ಆಸ್ಪತ್ರೆ
Updated on

ಮಂಗಳೂರು: ನ್ಯಾಯಮೂರ್ತಿ ಕೆ ಎಸ್ ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ ಕರಾವಳಿ ಪ್ರದೇಶದ  ಕೋವಿಡ್ -19 ರೋಗಿಗಳಿಗೆ ಅನುಕೂಲವಾಗುವಂತೆ ಪ್ಲಾಸ್ಮಾ ಚಿಕಿತ್ಸೆ ನೀಡಲು ಡಿಸಿಜಿಐ ಅನುಮತಿ ಪಡೆದ ಮೊದಲ ಆಸ್ಪತ್ರೆಯಾಗಿದೆ.

ಡಿಸಿಜಿಐ (ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ) ಕಾಂಪೊನೆಂಟ್ ಮತ್ತು ಸಿಂಗಲ್ ಡೋನರ್ ಪ್ಲೇಟ್‌ಲೆಟ್ ಸೌಲಭ್ಯವನ್ನು ಹೊಂದಿರುವ ಸುಸಜ್ಜಿತ ರಕ್ತ ಬ್ಯಾಂಕ್‌ನಂತಹ ಸೌಲಭ್ಯಗಳನ್ನು ಒಳಗೊಂಡಿರುವುದೆಂದು ಖತ್ರಿಯಾದ ನಂತರ ಆಸ್ಪತ್ರೆಯಲ್ಲಿ ಪ್ಲಾಸ್ಮಾ  ಥೆರಪಿ ನಡೆಸಲು ಅನುಮತಿ ನೀಡಿದೆ.

ಪ್ಲಾಸ್ಮಾಫೆರೆಸಿಸ್ ಕಾರ್ಯವಿಧಾನವನ್ನು ಕೈಗೊಳ್ಳಲು ರಕ್ತ ಬ್ಯಾಂಕ್‌ನಲ್ಲಿ ‘ಅಪೆರೆಸಿಸ್’ ಉಪಕರಣಗಳು, ಪರೀಕ್ಷಾ ಸೌಲಭ್ಯಗಳು ಮತ್ತು ತರಬೇತಿ ಪಡೆದ ಸಿಬ್ಬಂದಿ ಇದ್ದಾರೆ. ಇದರೊಂದಿಗೆ, ಆಸ್ಪತ್ರೆಯು ಕೋವಿಡ್ -19 ರೋಗಿಗಳಿಗೆ ಅನುಕೂಲಕರ ಕೋವಿಡ್ -19 ಪ್ಲಾಸ್ಮಾ ಥೆರಪಿ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಹೊಂದಿದೆ. "ಮೊದಲ ದಿನವೇ, ನಾವು ಮೂರು ದಾನಿಗಳಿಂದ ಪ್ಲಾಸ್ಮಾ ಪಡೆದಿದ್ದು ಅದನ್ನು ಕೋವಿಡ್ ರೋಗಿಗಳಿಗೆ ವರ್ಗಾಯಿಸಿದ್ದೇವೆ" ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಹೇಳಿದ್ದಾರೆ.

ಕರಾವಳಿ ಕರ್ನಾಟಕದಲ್ಲಿ ಪ್ಲಾಸ್ಮಾಫೆರೆಪಿಸಿಸ್ ನಡೆಸಲು ಪರವಾನಗಿ ಹೊಂದಿರುವ ಏಕೈಕ ರಕ್ತ ಬ್ಯಾಂಕ್ ನಿಟ್ಟೆ ಯೂನಿವರ್ಸಿಟಿ ಬ್ಲಡ್ ಬ್ಯಾಂಕ್ ಆಗಿದೆ. ಕೋವಿಡ್ -19ನಿಂದ ಚೇತರಿಸಿಕೊಂಡ 18 ವರ್ಷಕ್ಕಿಂತ ಮೇಲ್ಪಟ್ಟವರು, ಎಲ್ಲಾ ಪುರುಷ ಹಾಗೂ ಮಹಿಳೆಯರು ಪ್ಲಾಸ್ಮಾವನ್ನು ದಾನ ಮಾಡಬಹುದು ಚೇತರಿಸಿಕೊಂಡ 28 ದಿನಗಳ ಡಿಸ್ಚಾರ್ಜ್ ನಂತರ ರ ಪ್ಲಾಸ್ಮಾವನ್ನು ದಾನ ಮಾಡಬಹುದು. ಕೋವಿಡ್ ಗೆ ಪ್ಲಾಸ್ಮಾ ಥೆರಪಿ ಒಂದು ಹೊಸ ಚಿಕಿತ್ಸೆಯಾಗಿದೆ. ವೈರಸ್‌ನಿಂದ ತೀವ್ರವಾಗಿ ಸೋಂಕಿಗೆ ಒಳಗಾದ ರೋಗಿಗಳಿಗೆ ಚಿಕಿತ್ಸೆ ನೀಡಲು ಪ್ಲಾಸ್ಮಾ ಥೆರಪಿ ಉತ್ತಮ ಪರಿಹಾರವೆಂದು ಕಂಡುಬಂದಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com