ವೈದ್ಯಾಧಿಕಾರಿ ಆತ್ಮಹತ್ಯೆ ಕೇಸ್: ಸಿಇಓ ವಿರುದ್ಧ ಎಫ್ ಐ ಆರ್ ಗೆ ಐಎಎಸ್ ಆಫೀಸರ್ಸ್ ಸಂಘ ಅಸಮಾಧಾನ

ನಂಜನಗೂಡು ವೈದ್ಯಾಧಿಕಾರಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯತ್ ಸಿಇಓ ಅಮಾನತುಗೊಳಿಸಿ ಎಫ್ ಐ ಆರ್ ದಾಖಲಿಸಿರುವುದಕ್ಕೆ ರಾಜ್ಯ ಐಎಎಸ್ ಅಧಿಕಾರಿಗಳ ಸಂಘ ತೀವ್ರ ಆಕ್ಷೇಪ ವ್ಯಕ್ತ ಪಡಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ನಂಜನಗೂಡು ವೈದ್ಯಾಧಿಕಾರಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯತ್ ಸಿಇಓ ಅಮಾನತುಗೊಳಿಸಿ ಎಫ್ ಐ ಆರ್ ದಾಖಲಿಸಿರುವುದಕ್ಕೆ ರಾಜ್ಯ ಐಎಎಸ್ ಅಧಿಕಾರಿಗಳ ಸಂಘ ತೀವ್ರ ಆಕ್ಷೇಪ ವ್ಯಕ್ತ ಪಡಿಸಿದೆ.

ಈ ಸಂಬಂಧ ಅಧಿಕಾರಿಗಳ ಸಂಘವು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದೆ, ವೈದ್ಯಾಧಿಕಾರಿ ನಾಗೇಂದ್ರ ಆತ್ಮಹತ್ಯೆ ಪ್ರಕರಣವನ್ನು ಸಿಎಂ ಯಡಿಯೂರಪ್ಪ ತನಿಖೆಗೆ ಆದೇಶಿಸಿದ್ದಾರೆ. 

ಮೈಸೂರು ಜಿಲ್ಲಾಧಿಕಾರಿ ಜಿಸಿ ಪ್ರಕಾಶ್ ತನಿಖೆ ನೇತೃತ್ವದಲ್ಲಿ ತನಿಖೆ ನಡೆಸಲಿದ್ದಾರೆ. ಆರೋಗ್ಯ ಅಧಿಕಾರಿಯ ಆತ್ಮಹತ್ಯೆಗೆ ಹಿರಿಯ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡುವುದು ಸಮರ್ಥನೀಯವಲ್ಲ ಎಂದು ಸಂಘ ಬೇಸರ ವ್ಯಕ್ತ ಪಡಿಸಿದೆ.

ಕೊರೋನಾ ನಿಯಂತ್ರಿಸಲು  ಅಧಿಕಾರಿಗಳು ಹಗಲು ರಾತ್ರಿ ಎನ್ನದೇ ಶ್ರಮಿಸುತ್ತಿದ್ದಾರೆ, ಸರ್ಕಾರದ ಮಾರ್ಗಸೂಚಿಗಳನ್ನು ಮತ್ತು ನಿಯಮಗಳನ್ನು ಸರಿಯಾದ ರೀತಿಯಲ್ಲಿ ಜಾರಿಗೆ ತರಲು ಮೇಲಾಧಿಕಾರಿಗಳಿಗೆ ಹೆಚ್ಚಿನ ಜವಾಬ್ದಾರಿ ಇರುತ್ತದೆ. 

ಕೆಲವೊಂದು ತುರ್ತು ಸಂದರ್ಭದಲ್ಲಿ ಒಬ್ಬ ಸಿಇಓ ಗೆ ಮಾಡಿಸಲೇಬೇಕಾದ ಒತ್ತಡವಿರುತ್ತದೆ, ಹೀಗಿರುವಾಗ ಸಿಇಓ ಮಾಡಿದ್ದು ತಪ್ಪು ಎಂದು ಎಲ್ಲರೂ ಬಿಂಬಿಸುತ್ತಿದ್ದಾರೆ. ಹೀಗೆ ಮಾಡುವುದರಿಂದ ಅಧಿಕಾರಿಗಳ ನೈತಿಕ ಸ್ಥೈರ್ಯ ಕುಗ್ಗುತ್ತದೆ ಎಂದು ಸಂಘ ಕಿಡಿ ಕಾರಿದೆ
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com