ಸಾಂದರ್ಭಿಕ ಚಿತ್ರ
ರಾಜ್ಯ
ತುಮಕೂರು: ಆಟವಾಡುವಾಗ ನೀರಿನ ಸಂಪಿಗೆ ಬಿದ್ದು ಬಾಲಕ ಸಾವು
ಮನೆಯಂಗಳದಲ್ಲಿ ಆಟವಾಡುತ್ತಿದ್ದ ನಾಲ್ಕು ವರ್ಷದ ಬಾಲಕನೊಬ್ಬ ನೀರಿನ ಸಂಪಿಗೆ ಬಿದ್ದು ದಾರುಣವಾಗಿ ಮೃತಪಟ್ಟ ಘಟನೆ ಇಂದು ಬೆಳಗ್ಗೆ ತಿಪಟೂರು ತಾಲೂಕಿನ ಅಯ್ಯನಬಾವಿ ಎಂಬಲ್ಲಿ ನಡೆದಿದೆ.
ತುಮಕೂರು: ಮನೆಯಂಗಳದಲ್ಲಿ ಆಟವಾಡುತ್ತಿದ್ದ ನಾಲ್ಕು ವರ್ಷದ ಬಾಲಕನೊಬ್ಬ ನೀರಿನ ಸಂಪಿಗೆ ಬಿದ್ದು ದಾರುಣವಾಗಿ ಮೃತಪಟ್ಟ ಘಟನೆ ಇಂದು ಬೆಳಗ್ಗೆ ತಿಪಟೂರು ತಾಲೂಕಿನ ಅಯ್ಯನಬಾವಿ ಎಂಬಲ್ಲಿ ನಡೆದಿದೆ.
ಕಸಬಾ ಹೋಬಳಿ ಅಯ್ಯನಬಾವಿ ಗ್ರಾಮದ ನಾಗಮಣಿ ಮತ್ತು ಸ್ವಾಮಿ ದಂಪತಿಯ ಪುತ್ರ ಪ್ರಸಾದ್ ಗೌಡ (4) ಮೃತಪಟ್ಟ ಬಾಲಕ. ಇಂದು ಬೆಳಗ್ಗೆ ತಾಯಿ ನಾಗಮಣಿ ಅವರು ಅಡುಗೆ ಕೆಲಸ ಮಾಡುತ್ತಿದ್ದಾಗ ಮಗ ಹೊರಗಡೆ ಆಟವಾಡುತ್ತಿದ್ದ. ಈ ವೇಳೆ ಬಾಲಕ ಸಂಪಿಗೆ ಬಿದ್ದಿದ್ದಾನೆ. ಇದನ್ನು ಯಾರೂ ಗಮನಿಸಿರಲಿಲ್ಲ.
ಸ್ವಲ್ಪ ಹೊತ್ತಿನ ಬಳಿಕ ಮಗನ ಶಬ್ಧ ಕೇಳದಾದಾಗ ತಾಯಿ ಎಲ್ಲಾ ಕಡೆ ಹುಡುಕಾಡಿದ್ದಾರೆ. ಕೊನೆಗೆ ಸಂಪಿನಲ್ಲಿ ಬಾಲಕನ ಮೃತದೇಹ ಪತ್ತೆಯಾಗಿದೆ. ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲುಮುಟ್ಟಿತ್ತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ