ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ದೇವಾಲಯದಲ್ಲಿ ವಿಶೇಷ ಪೂಜೆಗಳು ಅಬಾಧಿತ: ಅನ್ನ ದಾಸೋಹಕ್ಕಿಲ್ಲ ಸಮ್ಮತಿ

ಕೊರೋನಾ ಹಿನ್ನೆಲೆಯಲ್ಲಿ ಲಾಕ್ ಡೌನ್ ಕಾರಣ ಬಂದ್ ಆಗಿದ್ದ ದೇವಾಲಯಗಳಲ್ಲಿ ಹೆಚ್ಚಿನ ವಿಶೇಷ ಪೂಜೆಗಳಿಗೆ ಸಮ್ಮತಿ ನೀಡಿರುವ ರಾಜ್ಯ ಸರ್ಕಾರ ಅನ್ನ ದಾಸೋಹಕ್ಕೆ ಅವಕಾಶ ನೀಡಿಲ್ಲ.

ಬೆಂಗಳೂರು: ಕೊರೋನಾ ಹಿನ್ನೆಲೆಯಲ್ಲಿ ಲಾಕ್ ಡೌನ್ ಕಾರಣ ಬಂದ್ ಆಗಿದ್ದ ದೇವಾಲಯಗಳಲ್ಲಿ ಹೆಚ್ಚಿನ ವಿಶೇಷ ಪೂಜೆಗಳಿಗೆ ಸಮ್ಮತಿ ನೀಡಿರುವ ರಾಜ್ಯ ಸರ್ಕಾರ ಅನ್ನ ದಾಸೋಹಕ್ಕೆ ಅವಕಾಶ ನೀಡಿಲ್ಲ.

ಕೊರೋನಾ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಭಕ್ತಾದಿಗಳಿಗೆ ನೀಡುವ ಉಚಿತ ಊಟಕ್ಕೆ ಅನುಮತಿ ನೀಡುವ ಸಾಧ್ಯತೆಯಿಲ್ಲ. ಕುಕ್ಕೆ ಸುಬ್ರಮಣ್ಯ,ಹೊರನಾಡು ಅನ್ನಪೂರ್ಣೇಶ್ವರಿ, ಶೃಂಗೇರಿ ಶಾರದಾಂಬೆ, ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಾಲ, ಉಡುಪಿಯ ಶ್ರೀಕೃಷ್ಣ ದೇವಾಲ ಸೇರಿದಂತೆ ಹಲವು ರಾಜ್ಯದ ಹಲವು ದೇವಾಲಯಗಳಲ್ಲಿ ಭಕ್ತಾದಿಗಳಿಗೆ ಉಚಿತ ಊಟದ ವ್ಯವಸ್ಥೆ  ಮಾಡಲಾಗಿದೆ.

ಈ ವರ್ಷದ ಮೊದಲನೇ ನಾಲ್ಕು ತಿಂಗಳಲ್ಲಿ ಮುಜರಾಯಿ ಇಲಾಖೆಗೆ 18 ಕೋಟಿ ರು ಆದಾಯ ಬಂದಿದೆ. ಕಳೆದ ವರ್ಷ 300 ಕೋಟಿ ರೂ ಆದಾಯ ಬಂದಿತ್ತು. ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯದ ಕಾರಣ ದೇವಾಲಯಗಳ ಆದಾಯ ಕುಸಿತಕ್ಕೆ ಕಾರಣವಾಗಿದೆ. ದೇವಾಲಯಗಳಲ್ಲಿ ರಥೋತ್ಸವ, ಹೋಮಗಳು, ತುಲಾಭಾರ, ಅಭಿಷೇಕ, ಯಾವುದೇ ವಿಶೇಷ ಪೂಜೆಗಳು ನಡೆಯುತ್ತಿಲ್ಲ, ದರ್ಶನ ಹೊರತುಪಡಿಸಿ ಎಲ್ಲಾ ಸೇವೆಗಳನ್ನು ನಿಲ್ಲಿಸಲಾಗಿದೆ. ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ವಿಶೇಷ ಪೂಜೆಗಳನ್ನು ಬಂದ್
ಮಾಡಲಾಗಿದೆ. ವಿಶೇಷ ಪೂಜೆ ಗಳಿಗೆ ಅವಕಾಶ ಕಲ್ಪಿಸಿಕೊಡುವಂತೆ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಜರಾಯಿ ಇಲಾಖೆ ಆಯುಕ್ತೆ ರೋಹಿಣಿ ಸಿಂಧೂರಿ ತಿಳಿಸಿದ್ದಾಗಿ ಹೇಳಿದ್ದಾರೆ.

ಸದ್ಯ ಹೋಟೆಲ್ ಗಳು ಮತ್ತು ಜಿಮ್ ಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ಹೀಗಾಗಿ ವಿಶೇಷ ಪೂಜೆಗಳಿಗೆ ಅವಕಾಶ ಕಲ್ಪಿಸಲು ನಿರ್ಧರಿಸಲಾಗಿದೆ. ಕುಕ್ಕೆಯಲ್ಲಿ ಸರ್ಪ ಸಂಸ್ಕಾರಕ್ಕೆ ಈ ಸಮಯದಲ್ಲಿ ನಾವು ಅದನ್ನು ಅನುಮತಿಸಬಹುದೇ ಎಂದು ನಮಗೆ ತಿಳಿದಿಲ್ಲ ರೋಹಿಣಿ ಸಿಂಧೂರಿ ತಿಳಿಸಿದ್ದಾರೆ.

ಅನೇಕ ಸಾಲುಗಳಲ್ಲಿ ಉಚಿತ ಆಹಾರದ ಆಸನ ಜನರಿಗೆ ಸೇವೆ ಸಲ್ಲಿಸುವ ಹೆಚ್ಚಿನ ದೇವಾಲಯಗಳು ಎಂದು ಅವರು ಹೇಳಿದರು. “ಸಾಮಾಜಿಕ ದೂರವನ್ನು ಕಾಪಾಡಿಕೊಳ್ಳದೆ ಒಟ್ಟಿಗೆ ಕುಳಿತುಕೊಳ್ಳುವುದು ಸೂಕ್ತವಲ್ಲ ಎಂದು ತಿಳಿಸಿದ್ದಾರೆ,
ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿ  34 ಸಾವಿರ ದೇವಾಲಯಗಳಿದ್ದು, ಎ ಕೆಟಗರಿಯಲ್ಲಿ 175 ದೇವಾಲಗಳಿದ್ದು ಇವುಗಳ ವಾರ್ಷಿಕ ಆದಾಯ 25ಲಕ್ಷಕ್ಕೂ ಅಧಿಕವಾಗಿರುತ್ತದೆ, ಬಿ ಕೆಟಗರಿಯಲ್ಲಿ 158 ದೇವಾಲಯಗಳಿದ್ದು ಇವುಳ ವಾರ್ಷಿಕ ಆದಾಯ 5ರಿಂದ 25 ಲಕ್ಷ ರು ಇರುತ್ತದೆ. ಇವುಗಳನ್ನು ಹೊರತುಪಡಿಸಿದರೇ ಉಳಿದ ದೇವಾಲಯಗಳನ್ನು ಖಾಸಗಿ ಸಂಸ್ಥೆಗಳು ನಿರ್ವಹಿಸುತ್ತವೆ.

Related Stories

No stories found.

Advertisement

X
Kannada Prabha
www.kannadaprabha.com