ನ್ಯೂ ಇಯರ್ ಗಿಫ್ಟ್: ಜನವರಿ 1ರಿಂದ ಆನ್ ಲೈನ್ ನಲ್ಲಿ ಬಿಡಿಎ ಫ್ಲಾಟ್ ಬುಕ್ಕಿಂಗ್ ಗೆ ಅವಕಾಶ 

ಬಿಡಿಎ ಫ್ಲಾಟ್ ಗಳ ಬುಕ್ಕಿಂಗ್ ಮತ್ತು ಖರೀದಿ ಪಾರದರ್ಶಕವಾಗಿರಲು ಸಂಪೂರ್ಣ ಪ್ರಕ್ರಿಯೆಯನ್ನು ಸದ್ಯದಲ್ಲಿಯೇ ಆನ್ ಲೈನ್ ಮಾಡಲಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಬಿಡಿಎ ಫ್ಲಾಟ್ ಗಳ ಬುಕ್ಕಿಂಗ್ ಮತ್ತು ಖರೀದಿ ಪಾರದರ್ಶಕವಾಗಿರಲು ಸಂಪೂರ್ಣ ಪ್ರಕ್ರಿಯೆಯನ್ನು ಸದ್ಯದಲ್ಲಿಯೇ ಆನ್ ಲೈನ್ ಮಾಡಲಿದೆ. ಗ್ರಾಹಕರು ಬಿಡಿಎಯಲ್ಲಿ ಲಭ್ಯವಿರುವ ಎಲ್ಲಾ ಫ್ಲಾಟ್ ಗಳನ್ನು ಪರಿಶೀಲಿಸಿ ದಾಖಲೆಗಳನ್ನು ಪರಿಶೀಲಿಸಿ, ಆರಂಭಿಕ ಮೊತ್ತ, ಅಂತಿಮ ಮೊತ್ತ, ದಾಖಲೆಗಳ ಸಂಗ್ರಹ ಮತ್ತು ಸಲ್ಲಿಕೆ ಇತ್ಯಾದಿ ಎಲ್ಲವನ್ನೂ ಇನ್ನು ಮುಂದೆ ಆನ್ ಲೈನ್ ನಲ್ಲಿ ವೇಗವಾಗಿ ಮಾಡಬಹುದು. 

ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಮಾಹಿತಿ ನೀಡಿದ ಬಿಡಿಎ ಕಾರ್ಯದರ್ಶಿ ವಸಂತಿ ಅಮರ್, ಬಿಡಿಎ ಫ್ಲಾಟ್ ಗಳ ಮಾರಾಟದ ಇಡೀ ಪ್ರಕ್ರಿಯೆಯನ್ನು ಆನ್ ಲೈನ್ ನಲ್ಲಿ ಮಾಡುತ್ತಿರುವುದು ಇದೇ ಮೊದಲು. ಜನವರಿ 1, 2021ರಿಂದ ಯಾವುದೇ ವ್ಯವಹಾರ ನಡೆಸಲು ಜನರು ಬಿಡಿಎ ಕಚೇರಿಗೆ ಹೋಗಬೇಕಾಗಿಲ್ಲ, ಕುಳಿತಲ್ಲಿಂದಲೇ ಆನ್ ಲೈನ್ ನಲ್ಲಿ ಮಾಡಬಹುದು ಎಂದರು.

ಈ ಬಗ್ಗೆ ಮಾಹಿತಿ ನೀಡಿದ ಸಾರ್ವಜನಿಕ ಸಂಪರ್ಕ ಅಧಿಕಾರಿ ಎಲ್ ಪಿ ಗಿರೀಶ್, ಆನ್ ಲೈನ್ ನಲ್ಲಿ ಮಾಡುವ ಪ್ರಕ್ರಿಯೆ ಕೆಲಸಗಳ ಶೇಕಡಾ 99ರಷ್ಟು ಭಾಗ ಮುಕ್ತಾಯವಾಗಿದೆ. ಡಿಸೆಂಬರ್ 15ರ ಹೊತ್ತಿಗೆ ಸಿದ್ದವಾಗಲಿದೆ. ಆನ್ ಲೈನ್ ನಲ್ಲಿ ಜನವರಿ 1ರಿಂದ ಲಭ್ಯವಾಗಲಿದೆ. ಪ್ರತ್ಯೇಕ ಪೋರ್ಟಲ್ www.bdahousing.org ಯನ್ನು ಇದೇ ಉದ್ದೇಶಕ್ಕೆ ಸೃಷ್ಟಿಸಲಾಗಿದೆ. ಅದನ್ನು ನಮ್ಮ ಅಧಿಕೃತ ವೆಬ್ ಸೈಟ್ ಗೆ ಲಿಂಕ್ ಮಾಡಲಾಗುವುದು ಎಂದರು.

ಕನ್ಮಿನೈಕ್‌ನ ಮೂರು ಹಂತಗಳಲ್ಲಿನ ಫ್ಲ್ಯಾಟ್‌ಗಳು, ಕೋಮಘಟ್ಟ ಮತ್ತು ದೊಡ್ಡಬನಹಳ್ಳಿಯಲ್ಲಿ ತಲಾ ಎರಡು ಹಂತಗಳು, ಇನ್ನೂ ಮಾರಾಟವಾಗದವುಗಳಲ್ಲಿ ಪ್ರಾಬಲ್ಯ ಹೊಂದಿವೆ, ನಗರದಿಂದ ದೂರವಿರುವುದು ಒಂದು ಪ್ರಮುಖ ಅಂಶವೆಂದು ಹೇಳಲಾಗಿದೆ. ಪಾವತಿಯನ್ನು ಆರಂಭದಲ್ಲಿ ಆರ್‌ಟಿಜಿಎಸ್ ಮತ್ತು ನೆಫ್ಟ್‌ ಮೂಲಕ ಮಾತ್ರ ಸ್ವೀಕರಿಸಲಾಗುತ್ತದೆ. ಆನ್‌ಲೈನ್ ಪ್ರಕ್ರಿಯೆಯು ಪ್ರಾರಂಭವಾಗುತ್ತದೆ, ವಿವಿಧ ಅವಶ್ಯಕತೆಗಳಿಗೆ ಸಂಬಂಧಿಸಿದಂತೆ ಬಿಡಿಎ ಮತ್ತು ಬ್ಯಾಂಕುಗಳ ನಡುವೆ ಓಡಾಟವನ್ನು ದೂರವಿಡಬಹುದು ಎಂದು ಗಿರೀಶ್ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com