ಹಾವೇರಿ ಜಿಲ್ಲೆಯಲ್ಲಿ ಐತಿಹಾಸಿಕ ಸ್ಮಾರಕಗಳ ನಿರ್ಲಕ್ಷ್ಯ: ತಜ್ಞರ ವಿಷಾದ

ಹಾವೇರಿ ಜಿಲ್ಲೆಯ ಐತಿಹಾಸಿಕ ಸ್ಮಾರಕಗಳು ನಿರ್ಲಕ್ಷ್ಯಕ್ಕೊಳಪಟ್ಟಿವೆ ಎಂದು ಇತಿಹಾಸಕಾರರು ಹಾಗೂ ತಜ್ಞರು ಹೇಳಿದ್ದು, ಸಂಬಂಧಟ್ಟ ಇಲಾಖೆ ಅವುಗಳನ್ನು ಸಂರಕ್ಷಿಸಬೇಕಾಗಿದೆ ಎಂದು ಒತ್ತಾಯಿಸಿದ್ದಾರೆ.
ನಿರ್ಲಕ್ಷ್ಯಕ್ಕೊಳಪಟ್ಟ ಸ್ಮಾರಕಗಳ ಚಿತ್ರ
ನಿರ್ಲಕ್ಷ್ಯಕ್ಕೊಳಪಟ್ಟ ಸ್ಮಾರಕಗಳ ಚಿತ್ರ
Updated on

ಹುಬ್ಬಳ್ಳಿ:  ಹಾವೇರಿ ಜಿಲ್ಲೆಯ ಐತಿಹಾಸಿಕ ಸ್ಮಾರಕಗಳು ನಿರ್ಲಕ್ಷ್ಯಕ್ಕೊಳಪಟ್ಟಿವೆ ಎಂದು ಇತಿಹಾಸಕಾರರು ಹಾಗೂ ತಜ್ಞರು ಹೇಳಿದ್ದು, ಸಂಬಂಧಟ್ಟ ಇಲಾಖೆ ಅವುಗಳನ್ನು ಸಂರಕ್ಷಿಸಬೇಕಾಗಿದೆ ಎಂದು ಒತ್ತಾಯಿಸಿದ್ದಾರೆ.

12ನೇ ಶತಮಾನಕ್ಕೂ ಹಿಂದಿನ ಅನೇಕ ಸ್ಮಾರಕಗಳು ಜಿಲ್ಲೆಯಲ್ಲಿದ್ದು, ಅವುಗಳಲ್ಲಿ ಕೆಲವನ್ನು ಪುರಾತತ್ವ ಇಲಾಖೆ ಸಂರಕ್ಷಿಸಲ್ಪಟ್ಟಿದ್ದರೆ ಇನ್ನೂ ಅನೇಕ ಸ್ಮಾರಕಗಳು ಸಂರಕ್ಷಿಸದೆ ನಿರ್ಲಕ್ಷ್ಯ ವಹಿಸಲಾಗಿದೆ.ಇದರಲ್ಲಿ ಚಾಲುಕ್ಯ ಯುಗಕ್ಕೆ ಸೇರಿದ ಕರಡಗಿ ಮತ್ತು ಹಂಗಲ್, ಕಲಾಕೇರಿ ಗ್ರಾಮಗಳಲ್ಲಿನ ಸ್ಮಾರಕಗಳು ಸೇರಿವೆ.

ಜಿಲ್ಲೆಯ ಅನೇಕ ಹಳ್ಳಿಗಳಲ್ಲಿ ಹೊಯ್ಸಳ, ಚಾಲುಕ್ಯ ಮತ್ತು ಕದಂಬ ಯುಗಗಳ ದೇವಾಲಯಗಳು ಮತ್ತು ಸುಂದರವಾದ ಕೆತ್ತನೆಗಳು ಇವೆ. ಗ್ರಾಮಸ್ಥರಿಗೂ ಅವರ ಪ್ರಾಮುಖ್ಯತೆ ತಿಳಿದಿಲ್ಲ ಮತ್ತು ಸರ್ಕಾರದಿಂದ ಯಾವುದೇ ರಕ್ಷಣಾ ಯೋಜನೆಯನ್ನು ಸಹ ಮಾಡುತ್ತಿಲ್ಲ.

ಹಾವೇರಿ ಜಿಲ್ಲೆಯಲ್ಲಿ ನೂರಾರು ಸ್ಮಾರಕಗಳಿವೆ ಆದರೆ ಅವುಗಳು ಹೊರಗಿನ ಪ್ರಪಂಚಕ್ಕೆ ತಿಳಿದಿಲ್ಲ. ಹಾವೇರಿಯಲ್ಲಿನ ಪುರಾಸಿದ್ದೇಶ್ವರ ದೇವಸ್ಥಾನ, ಹಂಗಲ್‌ನ ತಾರಕೇಶ್ವರ, ಕಾಗಿನೆಲೆ ದೇವಾಲಯಗಳು, ರಟ್ಟಿಹಳ್ಳಿಯ ಕದಂಬೇಶ್ವರ ದೇವಾಲಯ, ಚೌದದನಪುರದ ಮುಕ್ತೇಶ್ವರ ದೇವಸ್ಥಾನ, ಬಂಕಾಪುರದ ನಾಗರೇಶ್ವರ ಮತ್ತು ಇನ್ನೂ ಕೆಲವು ದೇವಾಲಯಗಳನ್ನು ರಕ್ಷಿಸಲಾಗಿದೆ. ಆದರೆ ಹಳ್ಳಿಗಳಲ್ಲಿನ ಸಣ್ಣ ದೇವಾಲಯಗಳು ಇಲಾಖೆಯ ಪಟ್ಟಿಯಲ್ಲಿ ಇಲ್ಲ ಎಂದು ಪ್ರವಾಸಿ ತಾಣಗಳ ಬರಹಗಾರ ಅಮೃತ್ ಜೋಷಿ ತಿಳಿಸಿದ್ದಾರೆ.

ಕೆಲವು ಗ್ರಾಮಗಳಲ್ಲಿ ಕೆಲ ಸ್ಮಾರಕಗಳು ಹಾಳಾಗಿದ್ದರೆ ಮತ್ತೆ ಕೆಲವು ಕಡೆಗಳಲ್ಲಿ ಸ್ಮಾರಕಗಳನ್ನು ದುಷ್ಕರ್ಮಿಗಳು ಹಾಳು ಮಾಡಿದ್ದಾರೆ. ಇಂತಹ ಸ್ಮಾರಕಗಳ ರಕ್ಷಣೆ  ಬಗ್ಗೆ ಗ್ರಾಮ ಮತ್ತು ಸ್ಥಳೀಯ ಸಂಸ್ಥೆಗಳು ಅರಿವನ್ನು ಮೂಡಿಸಬೇಕಾಗಿದೆ. ಈ ಸ್ಮಾರಕಗಳನ್ನು ಸಂರಕ್ಷಿಸಿ, ಪ್ರವಾಸೋದ್ಯಮವನ್ನು ಪ್ರೋತ್ಸಾಹಿಸುವ ಮೂಲಕ ಆದಾಯ ಗಳಿಸಬಹುದಾಗಿದೆ. ಇದನ್ನೇ ಸ್ಮಾರಕಗಳ ರಕ್ಷಣೆಗೆ ಸದ್ಬಳಕೆ ಮಾಡಿಕೊಳ್ಳಬಹುದಾಗಿದೆ ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com