13 ಕೌಟುಂಬಿಕ, 31 ವಿಶೇಷ ಹಾಗೂ ತ್ವರಿತಗತಿ ನ್ಯಾಯಾಲಯ ಸ್ಥಾಪನೆಗೆ ಶೀಘ್ರದಲ್ಲೇ ಅನುಮೋದನೆ: ಯಡಿಯೂರಪ್ಪ

ನ್ಯಾಯದಾನ ವ್ಯವಸ್ಥೆಯಲ್ಲಿ ವಕೀಲ ವೃತ್ತಿಯು ಅತ್ಯಂತ ಪ್ರಮುಖವಾದದ್ದು ಎಂದೇ ವಿಶ್ವದೆಲ್ಲೆಡೆ ಪರಿಗಣಿಸಲ್ಪಟ್ಟಿದೆ. ದೇಶದ ಸಂವಿಧಾನದಲ್ಲಿನ ಅಂಶಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವ ಜವಾಬ್ದಾರಿ ವಕೀಲರ ಮೇಲಿದೆ. ನಮ್ಮ ದೇಶದ ಪ್ರಜಾಪ್ರಭುತ್ವದ ಹಿರಿಮೆಯನ್ನು ಉಳಿಸಿ, ಬೆಳಿಸಿ, ಮುಂದಿನ ಪೀಳಿಗೆಗೆ ಪ್ರಜಾಪ್ರಭುತ್ವದ ಸಾರವನ್ನು ತಿಳಿಹೇಳುವಲ್ಲಿ ವಕೀಲರು ಪ್ರಮುಖ ಪಾತ್ರವಹಿ
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ
Updated on

ಬೆಂಗಳೂರು: ನ್ಯಾಯದಾನ ವ್ಯವಸ್ಥೆಯಲ್ಲಿ ವಕೀಲ ವೃತ್ತಿಯು ಅತ್ಯಂತ ಪ್ರಮುಖವಾದದ್ದು ಎಂದೇ ವಿಶ್ವದೆಲ್ಲೆಡೆ ಪರಿಗಣಿಸಲ್ಪಟ್ಟಿದೆ. ದೇಶದ ಸಂವಿಧಾನದಲ್ಲಿನ ಅಂಶಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವ ಜವಾಬ್ದಾರಿ ವಕೀಲರ ಮೇಲಿದೆ. ನಮ್ಮ ದೇಶದ ಪ್ರಜಾಪ್ರಭುತ್ವದ ಹಿರಿಮೆಯನ್ನು ಉಳಿಸಿ, ಬೆಳಿಸಿ, ಮುಂದಿನ ಪೀಳಿಗೆಗೆ ಪ್ರಜಾಪ್ರಭುತ್ವದ ಸಾರವನ್ನು ತಿಳಿಹೇಳುವಲ್ಲಿ ವಕೀಲರು ಪ್ರಮುಖ ಪಾತ್ರವಹಿಸುತ್ತಾರೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ.

ರಾಜ್ಯ ವಕೀಲರ ಪರಿಷತ್ತು ಆಯೋಜಿಸಿದ್ದ ವಕೀಲರ ದಿನಾಚರಣೆಯನ್ನು ಆನ್ ಲೈನ್ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಪ್ರತಿಭಾವಂತ ಯುವಕ ಯುವತಿಯರು ವಕೀಲ ವೃತ್ತಿಯ ಕಡೆಗೆ ವಾಲುತ್ತಿರುವುದು ಅತ್ಯಂತ ಆಶಾದಾಯಕ ಬೆಳವಣಿಗೆಯಾಗಿದೆ.ಕರ್ನಾಟಕದಲ್ಲಿ ಒಟ್ಟು ಒಂದು ಲಕ್ಷದ ಹತ್ತು ಸಾವಿರ ವಕೀಲರು ಕಾರ್ಯ ನಿರ್ವಹಿಸುತ್ತಿದ್ದಾರೆ ಎನ್ನುವುದು ಇದಕ್ಕೆ ನಿದರ್ಶನ. ವಕೀಲರಾಗಿ ಜನ ಸಾಮಾನ್ಯರ ಕಷ್ಟ ಕಾರ್ಪಣ್ಯಗಳ ನ್ನು ನಿವಾರಿಸಲು ನಿಮ್ಮ ಸಹಕಾರ ಹಾಗೂ ಜನರ ಆಶೋತ್ತರ ಸ್ಪಂದಿಸುವುದು ಅತ್ಯಂತ್ಯ ಅವಶ್ಯಕವಾಗಿದೆ. ಅನ್ಯಾಯಕ್ಕೊಳಗಾದ ಪ್ರತಿಯೊಬ್ಬರಿಗೂ ತಾರತಮ್ಯವಿಲ್ಲದೆ ನ್ಯಾಯ ಒದಗಿಸುವ ಅವಕಾಶ ಭಾರತದ ಸಂವಿಧಾನ ನೀಡುತ್ತದೆ.ಜನಸಾಮಾನ್ಯರಿಗೂ ಕಾನೂನಿನಡಿಯಲ್ಲಿ ದೊರಕುವ ಅವರ ಹಕ್ಕುಗಳ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ. ಆರ್ಥಿಕವಾಗಿ ಹಿಂದು ಳಿದವರಿಗೆ ಕಾನೂನಿನ ನೆರವು ದೊರಕುವಂತಾಗಬೇಕು ಎಂದು ಅವರು ತಿಳಿಸಿದರು. 

ಅದರಲ್ಲೂ ಪ್ರಮುಖವಾಗಿ ಭೂಸ್ವಾಧೀನ ಪ್ರಕ್ರಿಯೆ, ವಾಹನ ಅಪಘಾತ ವಿಮೆ,ಕಾರ್ಮಿಕ ಪರಿಹಾರ ಅಂತಹ ಪ್ರಕರಣಗಳಲ್ಲಿ ತಾವು ಅತ್ಯಂತ ವೃತ್ತಿಪರತೆಯಿಂದ ಕಾರ್ಯನಿರ್ವಹಿಸಬೇಕು. ಭಾರತ ಸಂವಿಧಾನದಿಂದ ದತ್ತ ವಾದ ಸಾಮಾಜಿಕ ಸಮಾನತೆ,ಮೂಲಭೂತ ಹಕ್ಕು ಮತ್ತು ಕರ್ತವ್ಯಗಳ ಅಂಶಗಳನ್ನು ಜನ ಸಾಮಾನ್ಯರಿಗೆ ಮನ ಮುಟ್ಟುವಂತೆ ತಿಳಿ ಹೇಳಬೇಕು.ಬಲಿಷ್ಠ,ನಿರ್ಭೀತ,ಜಾತಿರಹಿತ ಮತ್ತು ವರ್ಣರಹಿತ ಸಮಾಜವನ್ನು ನಿರ್ಮಿಸಿ ವೈ ವಿಧ್ಯತೆಯಲ್ಲಿ ಏಕತೆಯೆಂಬ ಮಂತ್ರವನ್ನು ಸಾಕಾರಗೊಳಿಸುವಲ್ಲಿ ತಮ್ಮೆಲ್ಲರ ಪಾತ್ರ ಮಹತ್ವವಾದದ್ದು. ವಕೀಲರ ಶ್ರೇಯೋಭಿವೃದ್ದಿಗಾಗಿ ಸರ್ಕಾರ ನಿರಂತರ ಪ್ರಯತ್ನ ಮಾಡುತ್ತಿದೆ.ಹೊಸದಾಗಿ ವಕೀಲರಾಗಿ ನೊಂದಾಯಿಸಿ ಕೊಂಡಿರುವ ಕಾನೂನು ಪದವೀಧರರಿಗೆ ನೀಡುತ್ತಿರುವ ಪ್ರೋತ್ಸಾಹಧನವನ್ನು ರೂ.1,000/ದಿಂದ ರೂ. 2,000/- ದವರೆಗೆ ಹೆಚ್ಚಿಸಲಾಗಿದೆ ಎಂದು ಅವರು ಭರವಸೆ ನೀಡಿದರು.

ವಕೀಲರ ಅಧಿನಿಯಮ ಜಾರಿಗೆ ಬಂದ ನಂತರ ಸಾಕಷ್ಟು ಸುಧಾರಣೆಗಳನ್ನು ಮತ್ತು ಬದಲಾವಣೆಗಳನ್ನು ಸರಕಾರ,ಅಖಿಲ ಭಾರತೀಯ ವಕೀಲರ ಪರಿಷತ್ತು ಹಾಗೂ ಕರ್ನಾಟಕ ರಾಜ್ಯ ವಕೀಲರ ಪರಿಷತ್ತುಗಳು ಜಂಟಿಯಾಗಿ ನಿರೂಪಿಸಿವೆ.ವಕೀಲರ ಶ್ರೇಯೋಭಿವೃದ್ಧಿಗಾಗಿ ನಮ್ಮ ಸರ್ಕಾರ ಅಗತ್ಯವಿರುವ ಎಲ್ಲ ನೆರವನ್ನು ಒದಗಿಸಲು ಬದ್ಧವಾಗಿದೆ. ನ್ಯಾಯಾಂಗ ವ್ಯವಸ್ಥೆಯನ್ನು ಬಲಪಡಿಸಲು ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಸರ್ಕಾರ ಒದಗಿಸಲು ಬದ್ಧವಾಗಿದೆ. 13 ಕುಟುಂಬ ನ್ಯಾಯಾಲಯಗಳು, 31ವಿಶೇಷ ನ್ಯಾಯಾಲಯಗಳು ಹಾಗೂ ಶೀಘ್ರಗತಿ ನ್ಯಾಯಾಲಯಗಳನ್ನು ಸ್ಥಾಪಿಸಲು ಈಗಾಗಲೇ ಮಂಜೂರಾತಿಯನ್ನು ನೀಡಲಾಗಿದೆ. ಸಾರ್ವಜನಿಕರಿಗೆ ಕಾನೂನು ಸೇವೆಯನ್ನು ಮುಕ್ತವಾಗಿ ಮತ್ತು ಸುಲಭವಾಗಿ ದೊರಕಿಸಿ, ನ್ಯಾಯಂಗ ವ್ಯವಸ್ಥೆಯಲ್ಲಿ ಅವರ ನಂಬಿಕೆ ಯನ್ನು ಗಟ್ಟಿಗೊಳಿಸಲು ವಕೀಲರು ಪ್ರಯತ್ನಿಸುತ್ತಾರೆ ಎಂದು ಅವರು ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com