ಅರಣ್ಯ ಇಲಾಖೆಯಿಂದ ಮೈಸೂರಿನಲ್ಲಿ ಶ್ರೀಗಂಧದ ಮ್ಯೂಸಿಯಂ ಸ್ಥಾಪನೆ

ದೇಶದಲ್ಲಿಯೇ ಮೊದಲ ಬಾರಿಗೆ ರಾಜ್ಯ ಅರಣ್ಯ ಇಲಾಖೆ ಮೈಸೂರಿನಲ್ಲಿ ಶ್ರೀಗಂಧ ಮ್ಯೂಸಿಯಂನ್ನು ಆರಂಭಿಸಿದೆ.  ಮೈಸೂರು ಅರಣ್ಯ ವಿಭಾಗದ ಕಚೇರಿಯ ಪಕ್ಕದ ಸ್ಯಾಂಡಲ್ ವುಡ್ ಡಿಪೊ ಪ್ರದೇಶದಲ್ಲಿ ಮ್ಯೂಸಿಯಂ ಇರಲಿದ್ದು ದೇಶದ ವಿವಿಧ 20 ವಿಧದ ಶ್ರೀಗಂಧವನ್ನು ಕಾಣಬಹುದಾಗಿದೆ. 
ಶ್ರೀಗಂಧದ ಕೆಲವು ಪ್ರಬೇಧಗಳು
ಶ್ರೀಗಂಧದ ಕೆಲವು ಪ್ರಬೇಧಗಳು

ಬೆಂಗಳೂರು: ದೇಶದಲ್ಲಿಯೇ ಮೊದಲ ಬಾರಿಗೆ ರಾಜ್ಯ ಅರಣ್ಯ ಇಲಾಖೆ ಮೈಸೂರಿನಲ್ಲಿ ಶ್ರೀಗಂಧ ಮ್ಯೂಸಿಯಂ ಆರಂಭಿಸಿದೆ. 

ಮೈಸೂರು ಅರಣ್ಯ ವಿಭಾಗದ ಕಚೇರಿಯ ಪಕ್ಕದ ಸ್ಯಾಂಡಲ್ ವುಡ್ ಡಿಪೊ ಪ್ರದೇಶದಲ್ಲಿ ಮ್ಯೂಸಿಯಂ ಇರಲಿದ್ದು ದೇಶದ ವಿವಿಧ 20 ವಿಧದ ಶ್ರೀಗಂಧವನ್ನು ಕಾಣಬಹುದಾಗಿದೆ. ಅದರ ಜೊತೆಗೆ ಕರ್ನಾಟಕ ಸೋಪು ಮತ್ತು ಡಿಟರ್ಜೆಂಟ್ ಲಿಮಿಟೆಡ್, ಕರ್ನಾಟಕ ರಾಜ್ಯ ಕಲಾ ಆರ್ಟ್ ಅಂಡ್ ಕ್ರಾಫ್ಟ್ ಎಂಪೋರಿಯಂ ಮತ್ತು ಇತರ ಖಾಸಗಿ ಸಂಸ್ಥೆಗಳ ವಸ್ತುಗಳನ್ನು ಪ್ರದರ್ಶಿಸಲಿವೆ.

ಈ ಮ್ಯೂಸಿಯಂ ಪ್ರಮುಖ ಆಕರ್ಷಣೆಯೆಂದರೆ 3-ಡಿ ಮಾದರಿಯ ಮರದ ಟ್ರಂಕ್. ಕರ್ನಾಟಕ ಅರಣ್ಯ ಇಲಾಖೆ ವಶಪಡಿಸಿಕೊಂಡಿರುವ ಮತ್ತು ಸಂಗ್ರಹಿಸಿರುವ ಶ್ರೀಗಂಧಗಳ ವಸ್ತುಗಳು ಇಲ್ಲಿ ಪ್ರದರ್ಶನಗೊಳ್ಳಲಿವೆ. ಇವುಗಳ ಭದ್ರತೆಗೆ ದಿನಪೂರ್ತಿ ಸೆಕ್ಯುರಿಟಿಯನ್ನು ಒದಗಿಸಲಾಗಿದೆ. ಮೊನ್ನೆ ಡಿಸೆಂಬರ್ 1ರಂದು ಇದು ತೆರೆದರೂ ಕೂಡ ಅಧಿಕೃತವಾಗಿ ಇನ್ನೂ ಉದ್ಘಾಟನೆಗೊಂಡಿಲ್ಲ. ಕರ್ನಾಟಕವನ್ನು ಸ್ಯಾಂಡಲ್ ವುಡ್ ನ ರಾಜ್ಯ ಎಂದು ಕರೆಯುವುದರಿಂದ ಈ ಮ್ಯೂಸಿಯಂನ ಸ್ಥಳ ಮುಖ್ಯವಾಗಿದೆ ಎನ್ನುತ್ತಾರೆ ಅರಣ್ಯ ಇಲಾಖೆ ಸಿಬ್ಬಂದಿ.

ಅರಣ್ಯ ಇಲಾಖೆಯ ಉಪ ಸಂರಕ್ಷಣಾಧಿಕಾರಿ ಡಾ ಕೆ ಸಿ ಪ್ರಶಾಂತ್ ಕುಮಾರ್, ಶ್ರೀಗಂಧದ ಮರ ಮತ್ತು ಪ್ರಬೇಧಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲು, ಶ್ರೀಗಂಧವನ್ನು ಉಳಿಸಿ ಬೆಳೆಸಲು ಈ ಮ್ಯೂಸಿಯಂನ್ನು ಸ್ಥಾಪಿಸಲಾಗಿದೆ. ಶ್ರೀಗಂಧದ ಬಗ್ಗೆ ಮಾಹಿತಿ ಮತ್ತು ಸಂಶೋಧನೆ ಸಹ ಈ ಮ್ಯೂಸಿಯಂನಲ್ಲಿ ನಡೆಯಲಿದೆ. ಅರಣ್ಯ ಇಲಾಖೆ ಶ್ರೀಗಂಧದ ಮಾದರಿಗಳನ್ನು ಹಲವು ನರ್ಸರಿಗಳಿಂದ ಸಂಗ್ರಹಿಸಲು ಸಹಾಯ ಮಾಡಿದೆ. ಮ್ಯೂಸಿಯಂ ಸ್ಥಾಪನೆಗೆ ಎರಡು ವರ್ಷ ಹಿಡಿಯಿತು ಎನ್ನುತ್ತಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com