ಟ್ವಿಟ್ಟರ್ ಇಂಡಿಯಾ ಪೇಜ್ ನಲ್ಲಿ ಇಂದು ಕನ್ನಡ ಗಾದೆ ಟ್ರೆಂಡಿಂಗ್!

ಕನ್ನಡ ಭಾಷೆಯಲ್ಲಿ ಗಾದೆ ಮಾತುಗಳಿಗೇನು ಕೊರತೆಯಿಲ್ಲ, ಕನ್ನಡದ ಗಾದೆ ಮಾತುಗಳಿಗೆ ಸಹಸ್ರ ವರ್ಷದ ಇತಿಹಾಸವಿದೆ. ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂಬ ಮಾತು ಜನಜನಿತ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಕನ್ನಡ ಭಾಷೆಯಲ್ಲಿ ಗಾದೆ ಮಾತುಗಳಿಗೇನು ಕೊರತೆಯಿಲ್ಲ, ಕನ್ನಡದ ಗಾದೆ ಮಾತುಗಳಿಗೆ ಸಹಸ್ರ ವರ್ಷದ ಇತಿಹಾಸವಿದೆ. ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂಬ ಮಾತು ಜನಜನಿತ.

ಜೀವನದ ಮೌಲ್ಯಗಳು, ಆದರ್ಶಗಳು, ಅನುಭವಗಳು, ಸಂಸ್ಕೃತಿ, ಮನುಷ್ಯನ ನಡೆ-ನುಡಿಗಳ ಬಗ್ಗೆ ಮಾತನಾಡುವಾಗ ಹಿರಿಯರು ಗಾದೆ ಮಾತುಗಳನ್ನು ಸೇರಿಸಿ ಮಾತನಾಡುವುದನ್ನು ನಾವು ನೋಡುತ್ತೇವೆ.

ಈ ಸೋಷಿಯಲ್ ಮೀಡಿಯಾ ಯುಗದಲ್ಲಿ, ಟ್ವಿಟ್ಟರ್, ಇನ್ಸ್ಟಾಗ್ರಾಮ್ ನಲ್ಲಿಯೇ ಜನರು ಅದರಲ್ಲೂ ಯುವಜನತೆ ಸಮಯ ಕಳೆಯುತ್ತಿರುವಾಗ ತಂತ್ರಜ್ಞಾನ ಇಷ್ಟು ಸುಧಾರಣೆ ಕಂಡ ಮೇಲೆ ಐಫೋನ್, ಗ್ಯಾಜೆಟ್, ಟ್ಯಾಬ್ಲೆಟ್ ಗಳಲ್ಲಿ ಜನರು ಮುಳುಗಿರುವಾಗ ಗಾದೆ ಮಾತು ಇಂದು ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ಆಗಿದೆ ಎಂದರೆ ನಂಬುತ್ತೀರಾ?

ಟ್ವಿಟ್ಟರ್ ಇಂಡಿಯಾ ಪೇಜ್ ನಲ್ಲಿ ನಿನ್ನೆ ಸಾಯಂಕಾಲದಲ್ಲಿ ಕನ್ನಡದ ಗಾದೆಮಾತುಗಳು ಕಾಣಿಸಿಕೊಳ್ಳಲಾರಂಭಿಸಿ ಇಂದು ಟ್ವಿಟ್ಟರ್ ಇಂಡಿಯಾ ಪೇಜ್ ನಲ್ಲಿ ಬೆಳಗ್ಗೆಯಿಂದ ಟ್ರೆಂಡಿಂಗ್ ನಲ್ಲಿದೆ. ಸಾವಿರಾರು ಮಂದಿ ಕಮೆಂಟ್ ಮಾಡುತ್ತಿದ್ದಾರೆ, ತಮಗಿಷ್ಟದ ಕನ್ನಡದ ಗಾದೆ ಮಾತುಗಳನ್ನು ಹಾಕುತ್ತಿದ್ದಾರೆ. ಕನ್ನಡ ಗಾದೆ ಎಂದು ಕನ್ನಡದಲ್ಲಿಯೇ ಹ್ಯಾಶ್ ಟಾಗ್ ಹಾಕಿ ಬರೆಯುತ್ತಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com