ಮಂಗಳೂರು ಹಳೆ ಬಂದರಿನಿಂದ ಮಾಲ್ಡೀವ್ಸ್ ಗೆ ಮೊದಲ ಸರಕು ಹಡಗು ಇಂದು ಪ್ರಯಾಣ, ಹಣ್ಣು-ತರಕಾರಿ ರವಾನೆ

ಕಡಲ ನಗರಿ ಮಂಗಳೂರಿನ ಹಳೆ ಬಂದರಿನಿಂದ ಮಾಲ್ಡೀವ್ಸ್ ಗೆ ಮೊದಲ ಸರಕು ಹಡಗು ಸೋಮವಾರ ಪ್ರಯಾಣ ಬೆಳೆಸಲಿದೆ.
ಮಾಲ್ಡೀವ್ಸ್ ಗೆ ಪ್ರಯಾಣ ಬೆಳೆಸಲಿರುವ ಸರಕು ಹಡಗು
ಮಾಲ್ಡೀವ್ಸ್ ಗೆ ಪ್ರಯಾಣ ಬೆಳೆಸಲಿರುವ ಸರಕು ಹಡಗು
Updated on

ಮಂಗಳೂರು: ಕಡಲ ನಗರಿ ಮಂಗಳೂರಿನ ಹಳೆ ಬಂದರಿನಿಂದ ದ್ವೀಪ ರಾಷ್ಟ್ರ ಮಾಲ್ಡೀವ್ಸ್ ಗೆ ಮೊದಲ ಸರಕು ಹಡಗು ಸೋಮವಾರ ಪ್ರಯಾಣ ಬೆಳೆಸಲಿದೆ.

ಹಡಗಿನಲ್ಲಿ ಹಣ್ಣು, ತರಕಾರಿಗಳು ಮತ್ತು ಜೈವಿಕ ಗೊಬ್ಬರಗಳನ್ನು ಹೊತ್ತೊಯ್ಯಲಾಗುವುದು ಎಂದು ಗುತ್ತಿಗೆದಾರ ಚರಣ್ ದಾಸ್ ಕರ್ಕೇರ ತಿಳಿಸಿದ್ದಾರೆ.

ಕೃಷಿ, ತೋಟಕ್ಕೆ ಗೊಬ್ಬರವಾಗಿ ಬಳಸಲು ತೆಂಗಿನ ಗೆರಟೆ ಹುಡಿ, ತರಕಾರಿ ಮತ್ತು ಹಣ್ಣು ಹಂಪಲು ಸಾಗಾಟ ಮಾಡಲಿದ್ದು, ನಿನ್ನೆ ಕ್ರೇನ್‌ಗಳ ಮೂಲಕ ಹಡಗಿಗೆ ತುಂಬಿಸಲಾಯಿತು. 

ಕ್ಯಾಪ್ಟನ್‌ ಕಣ್ಣನ್‌ ನೇತೃತ್ವದಲ್ಲಿ ಸಿಬ್ಬಂದಿಗಳಾದ ಕಾತೋರಾಯನ್‌, ಹರಿದಾಸ್‌, ಸಗಾಯಂ, ಶ್ರೀನಿವಾಸನ್‌, ವಿಘ್ನೇಶ್‌ ಇಂದು ಪ್ರಥಮ ಬಾರಿಗೆ ಹಡಗು ಯಾನದಲ್ಲಿ ತೆರಳುತ್ತಿದ್ದಾರೆ. ಲಕ್ಷದ್ವೀಪದ ಕಡಂಬತ್ತ್ ಕಾರ್‌ಗೆ ಸೇರಿದ ಎಂಎಸ್‌ವಿ ನೂರ್‌ ಎ ಅಲ್‌ ಕದರಿ ಹೆಸರಿನ ನೌಕೆಯನ್ನು ಚರಣ್‌ದಾಸ್‌ ವಿ. ಕರ್ಕೇರ ಬಾಡಿಗೆಗೆ ಪಡೆದುಕೊಂಡು, ಸಾಮಾನು, ಸರಂಜಾಮು ಸಾಗಾಟ ಮಾಡುತ್ತಿದ್ದಾರೆ.

Karnataka: The first cargo ship to the Maldives from Mangaluru Old Port to sail on Monday. "The ship is loaded with fruits, vegetables, and organic manure," said contractor Charandas Karkera. (13.12.2020) pic.twitter.com/2Lrv23Yph3

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com