ಕೇಂದ್ರದ ಪ್ರೋತ್ಸಾಹಧನ ಸಕ್ಕರೆ ಕಾರ್ಖಾನೆಗಳಿಗೆ ಸಿಹಿ ಸುದ್ದಿ, ಕಬ್ಬು ಬೆಳೆಗಾರರಿಗಲ್ಲ: ಕುರುಬೂರು ಶಾಂತಕುಮಾರ್

ಕೇಂದ್ರ ಸರ್ಕಾರ ಕಬ್ಬು ವಲಯಕ್ಕೆ 3,500 ಕೋಟಿ ರೂ ಪ್ರೋತ್ಸಾಹಧನ ಬಿಡುಗಡೆ ಮಾಡಿರುವುದು ಸಕ್ಕರೆ ಕಾರ್ಖಾನೆಗಳಿಗೆ ಸಿಹಿ ಸುದ್ದಿಯಾಗಿದ್ದು, ಇದು ಕಬ್ಬು ಬೆಳೆಗಾರರಿಗಲ್ಲ
ಕುರುಬೂರು ಶಾಂತಕುಮಾರ್x
ಕುರುಬೂರು ಶಾಂತಕುಮಾರ್x

ಬೆಂಗಳೂರು: ಕೇಂದ್ರ ಸರ್ಕಾರ ಕಬ್ಬು ವಲಯಕ್ಕೆ 3,500 ಕೋಟಿ ರೂ ಪ್ರೋತ್ಸಾಹಧನ ಬಿಡುಗಡೆ ಮಾಡಿರುವುದು ಸಕ್ಕರೆ ಕಾರ್ಖಾನೆಗಳಿಗೆ ಸಿಹಿ ಸುದ್ದಿಯಾಗಿದ್ದು, ಇದು ಕಬ್ಬು ಬೆಳೆಗಾರರಿಗಲ್ಲ ಎಂದು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಅವರು ಹೇಳಿದ್ದಾರೆ.

ಕೇಂದ್ರ ಸಂಪುಟ ಸಮಿತಿ ಸಭೆಯಲ್ಲಿ ಸಕ್ಕರೆ ರಫ್ತು ಮಾಡುವ ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಪ್ರೋತ್ಸಾಹಧನ ನೀಡಲು 3500 ಕೋಟಿ ರೂ. ಬಿಡುಗಡೆ ಮಾಡಿರುವುದು ಸಕ್ಕರೆ ಕಾರ್ಖಾನೆಗಳಿಗೆ ಸಿಹಿ ಸುದ್ದಿಯಾಗಿದೆ, ಇದರಿಂದ ಸಕ್ಕರೆ ಕಾರ್ಖಾನೆಗಳು ಕಬ್ಬಿನ ರೈತರ ಬಾಕಿ ಹಣ ತೀರಿಸಲು ನೆರವಾಗುತ್ತದೆ, ಈ ಹಣದಲ್ಲಿ ಹೆಚ್ಚುಪಾಲು ಉತ್ತರ ಪ್ರದೇಶಕ್ಕೆ ಬಿಡುಗಡೆಯಾಗುತ್ತದೆ ಎಂದಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಕುರುಬೂರು ಶಾಂತಕುಮಾರ್ ಅವರು, ರಾಜ್ಯದಲ್ಲಿ ಸಕ್ಕರೆ ಕಾರ್ಖಾನೆಗಳು ರಪ್ತು ಮಾಡುವ ಸಕ್ಕರೆಗೆ ಪ್ರೋತ್ಸಾಹಧನ ಸಿಗುತ್ತದೆ. ಬೆಳಗಾರರಿಗೆ ಅಲ್ಲ ಎಂದು ತಿಳಿಸಿದ್ದಾರೆ.

ಕಬ್ಬು ಬೆಳೆಗಾರರಿಗೆ 3,500 ಕೋಟಿ ರೂ. ಸಹಾಯಧನ ನೀಡುವ ಪ್ರಸ್ತಾವನೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಕುರಿತ ಸಂಪುಟ ಸಮಿತಿ ಸಭೆ ಇಂದು ಅನುಮೋದನೆ ನೀಡಿದೆ. ಇದರಿಂದ ರೈತರು ತಮ್ಮ ಕಬ್ಬನ್ನು ನೇರವಾಗಿ ಸಕ್ಕರೆ ಕಾರ್ಖಾನೆಗಳಿಗೆ ಮಾರಾಟ ಮಾಡುತ್ತಾರೆ. ಆದರೆ ಸಕ್ಕರೆ ಕಾರ್ಖಾನೆಗಳ ಮಾಲೀಕರು ಸಕ್ಕರೆ ದಾಸ್ತಾನು ಹೆಚ್ಚಿರುವ ಕಾರಣ, ಹಣ ಪಾವತಿ ಮಾಡದೇ ಇರುವುದರಿಂದ ರೈತರಿಗೆ ಬಾಕಿ ಹಣ ಬರುತ್ತಿಲ್ಲ. ಈ ಸಮಸ್ಯೆಯನ್ನು ನಿವಾರಿಸಲು ಕೇಂದ್ರ ಸರ್ಕಾರ ಹೆಚ್ಚುವರಿ ಸಕ್ಕರೆ ದಾಸ್ತಾನನ್ನು ಖಾಲಿ ಮಾಡಲು ನೆರವು ನೀಡುತ್ತಿದೆ. ಇದರಿಂದಾಗಿ ಕಬ್ಬು ಬೆಳೆಗಾರರಿಗೆ ಬರಬೇಕಾದ ಬಾಕಿ ಪಡೆಯುವುದು ಸುಲಭವಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com