ಶಿವರಾಮ ಕಾರಂತ ಲೇಔಟ್ ನಿವಾಸಿಗಳಿಗೆ ಸುಪ್ರೀಂ ರಿಲೀಫ್: ಈಗ ಬಿಡಿಎ ಎದುರು ಭಾರಿ ಸರತಿ ಸಾಲು!

ಶಿವರಾಮ ಕಾರಂತ ಲೇಔಟ್ ನಲ್ಲಿ ನಿವೇಶನ ಖರೀದಿಸಿರುವವರು ಹಾಗೂ ಮನೆ ನಿರ್ಮಿಸಿರುವವರಿಗೆ ಸುಪ್ರೀಂ ಕೋರ್ಟ್ ರಿಲೀಫ್ ನೀಡಿದ ಬೆನ್ನಲ್ಲೇ ಸಾರ್ವಜನಿಕರು ಬಿಡಿಎ ಕಚೇರಿ ಎದುರು ಸಾಲುಗಟ್ಟಿ ನಿಲ್ಲುತ್ತಿದ್ದಾರೆ! 
ಶಿವರಾಮ ಕಾರಂತ ಲೇಔಟ್ ನಿವಾಸಿಗಳಿಗೆ ಸುಪ್ರೀಂ ರಿಲೀಫ್ ಬಳಿಕ ಬಿಡಿಎ ಎದುರು ಭಾರಿ ಸರತಿ ಸಾಲು!
ಶಿವರಾಮ ಕಾರಂತ ಲೇಔಟ್ ನಿವಾಸಿಗಳಿಗೆ ಸುಪ್ರೀಂ ರಿಲೀಫ್ ಬಳಿಕ ಬಿಡಿಎ ಎದುರು ಭಾರಿ ಸರತಿ ಸಾಲು!

ಬೆಂಗಳೂರು: ಶಿವರಾಮ ಕಾರಂತ ಲೇಔಟ್ ನಲ್ಲಿ ನಿವೇಶನ ಖರೀದಿಸಿರುವವರು ಹಾಗೂ ಮನೆ ನಿರ್ಮಿಸಿರುವವರಿಗೆ ಸುಪ್ರೀಂ ಕೋರ್ಟ್ ರಿಲೀಫ್ ನೀಡಿದ ಬೆನ್ನಲ್ಲೇ ಸಾರ್ವಜನಿಕರು ಬಿಡಿಎ ಕಚೇರಿ ಎದುರು ಸಾಲುಗಟ್ಟಿ ನಿಲ್ಲುತ್ತಿದ್ದಾರೆ! 

ಡಾ.ಶಿವರಾಮ ಕಾರಂತ್ ಲೇಔಟ್ ನ ನಿರ್ದಿಷ್ಟ ಸರ್ವೇ ನಂಬರ್ ಗಳಿಗೆ ಸಂಬಂಧಿಸಿದಂತೆ, ಅಲ್ಲಿನ ಮನೆಗಳು ನಿವೇಶನಗಳನ್ನು ವಶಕ್ಕೆ ಪಡೆಯುವುದು ಅಥವಾ ತೆರವುಗೊಳಿಸುವುದರ ವಿರುದ್ಧ ಬಿಡಿಎ ಆಕ್ಷೇಪಣೆ ಸಲ್ಲಿಸುವುದಕ್ಕೆ ಅವಕಾಶ ಮಾಡಿಕೊಟ್ಟಿತ್ತು. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಈ ರೀತಿ ಸರತಿ ಸಾಲಿನಲ್ಲಿ ನಿಲ್ಲುವುದಕ್ಕೆ ಕಾರಣವಾಗಿದೆ.

ಆ ಸ್ವತ್ತುಗಳ ಮೇಲೆ ಹಕ್ಕು ಪ್ರತಿಪಾದನೆ ಮಾಡುವ ನಿಟ್ಟಿನಲ್ಲಿ ಸಾರ್ವಜನಿಕರು ಸರತಿ ಸಾಲಿನಲ್ಲಿ ನಿಂತು ಆಕ್ಷೇಪಣೆ ಸಲ್ಲಿಸಿ ತಮ್ಮ ನಿವೇಶನ, ಮನೆಗಳ ಮೇಲೆ ಹಕ್ಕು ಪ್ರತಿಪಾದನೆ ಮಾಡಲು ಮುಂದಾಗಿದ್ದಾರೆ.

ಆಸ್ತಿಯ ಮಾಲಿಕರಿಗೆ ಆಕ್ಷೇಪಣೆಗಳನ್ನು ಸಲ್ಲಿಸುವುದಕ್ಕೆ ಡಿಸೆಂಬರ್ ಅಂತ್ಯದವರೆಗೂ ಅವಕಾಶ ನೀಡಲಾಗಿದೆ. 

"ಲೇಔಟ್ ನಲ್ಲಿ ಕಾನೂನುಬದ್ಧವಾಗಿ ನಿರ್ಮಾಣ ಮಾಡಲಾಗಿರುವ ಮನೆಗಳನ್ನು ತೆರವುಗೊಳಿಸುವುದರ ವಿರುದ್ಧವಾಗಿ ಸುಪ್ರೀಂ ಕೋರ್ಟ್ ನ ನ್ಯಾ. ಅಬ್ದುಲ್ ನಜೀರ್ ಹಾಗೂ ನ್ಯಾ. ಸಂಜೀವ್ ಖನ್ನಾ ಅವರಿದ್ದ ಪೀಠ ಆದೇಶ ನೀಡಿದ್ದು, ವಾಸಯೋಗ್ಯ ಮನೆಗಳನ್ನು ಧ್ವಂಸಗೊಳಿಸುವುದರ ವಿರುದ್ಧದ ತನ್ನ ಆದೇಶ ಸಮರ್ಥನೀಯವಾದದ್ದು" ಎಂದು ಸುಪ್ರೀಂ ಕೋರ್ಟ್ ಡಿ.03 ರ ಆದೇಶದಲ್ಲಿ ತಿಳಿಸಿತ್ತು. ಅಷ್ಟೇ ಅಲ್ಲದೇ ಕಾನೂನುಬದ್ಧವಾಗಿ ನಿರ್ಮಾಣಗೊಂಡಿರುವ ಮನೆಗಳನ್ನು ಗುರುತಿಸುವುದಕ್ಕಾಗಿ ಕೋರ್ಟ್ ಸಮಿತಿಯನ್ನೂ ನೇಮಕ ಮಾಡಿದೆ. ಆರು ತಿಂಗಳಲ್ಲಿ ಸಮಿತಿಯ ವರದಿ ಕೋರ್ಟ್ ಗೆ ಸಲ್ಲಿಕೆಯಾಗಬೇಕಿದೆ.  ಬಿಡಿಎಗೆ 6 ಮಂದಿ ಹೆಚ್ಚುವರಿ ಭೂ ಸ್ವಾಧೀನ ಅಧಿಕಾರಿಗಳನ್ನು 2 ವಾರಗಳಲ್ಲಿ ನೇಮಕ ಮಾಡುವುದಕ್ಕೆ ಸೂಚನೆ ನೀಡಲಾಗಿದ್ದು, ಜ.11 ರ ವೇಳೆಗೆ ಸ್ಥಿತಿ ವರದಿಯನ್ನು ಸಲ್ಲಿಸುವುದಕ್ಕೆ ಬಿಡಿಎಗೆ ಕೋರ್ಟ್ ಸೂಚನೆ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com