ಬೆಂಗಳೂರು: ಸಾರ್ವಜನಿಕರು ಮಾಸ್ಕ್ ಹಾಕಿಲ್ಲ ಎಂದು ಪೋಲೀಸರು ದಂಡ ವಿಧಿಸುವುದು, ಅದಕ್ಕೆ ಜನರು ಬೇಸರ ವ್ಯಕ್ತಪಡಿಸುವುದು ಮಾಮೂಲಿ. ಆದರೆ ಮಾಸ್ಕ್ ಹಾಕಿಲ್ಲವೆಂಬ ಕಾರಣ ಆಡಳಿತ ಪಕ್ಷದ ಶಾಸಕರೊಬ್ಬರಿಗೆ ದಂಡ ಹಾಕಿರುವ ಘಟನೆ ಬೆಂಗಳೂರಿಬಲ್ಲಿ ಇಂದು ನಡೆದಿದೆ.
ಮೂಡಿಗೆರೆ ಶಾಸಕ ಎಂಪಿ ಕುಮಾರಸ್ವಾಮಿ ಅವರಿಗೆ ಮಾಸ್ಕ್ ಹಾಕಿಲ್ಲದ ಕಾರಣ ದಂಡ ವಿಧಿಸಲಾಗಿದೆ.
ಶಾಸಕರು ಶೇಷಾದ್ರಿಪುರಂ ಕಡೆಯಿಂದ ಶಾಸಕರ ಭವನಕ್ಕೆ ತೆರಳುವ ವೇಳೆ ಕಾರಿನಲ್ಲಿದ್ದಾಗ ಮಾಸ್ಕ್ ಹಾಕಿಲ್ಲ ಎಂದು ಟ್ರಾಫಿಕ್ ಪೋಲೀಸರು 250 ರೂ. ದಂಡ ವಿಧಿಸಿದ್ದಾರೆ.
ಗೃಹ ಸಚಿವರಿಗೆ ದೂರು
ಮಾಸ್ಕ್ ದಂಡ ಕಟ್ಟಿದ ಶಾಸಕ ಎಂಪಿ ಕುಮಾರಸ್ವಾಮಿ ತಮಗೆ ವ್ಯಥಾ ದಂಡ ವಿಧಿಸಿದ ಪೋಲೀಸರ ಕ್ರಮಕ್ಕೆ ಬೇಸರಗೊಂಡು ಗೃಹ ಸಚಿವ ಬಸವರಾಜ ಬೊಮ್ಮಾಯಿಗೆ ಪತ್ರದ ಮುಖೇನ ದೂರಿದ್ದಾರೆ.
ಪೋಲೀಸರು ನನಗೆ ವಿನಾಕಾರಣ ಕಾರಿನ ಟೆಂಪರ್ ಗ್ಲಾಸ್ ಇಳಿಸುವಂತೆ ಒತ್ತಡ ಹೇರಿ 250 ರೂ, ದಂಡ ಕಟ್ಟಿಸಿಕೊಂಡಿದ್ದಾರೆ. "ಇಂದು ಮಧ್ಯಾಹ್ನ ಸುಮಾರು 12.30ರ ವೇಳೆಗೆ ಶಾಸಕರ ಭವನದತ್ತ ಸಾಗುತ್ತಿದ್ದಾಗ ನನ್ನ ಕಾರನ್ನು ಅಡ್ಡಗಟ್ಟಿ ಟೆಂಪರ್ ಗ್ಲಾಸ್ ಇಳಿಸಿ ನಾನು ಮಾಸ್ಕ್ ಹಾಕಿದ್ದರೂ ಸಹ ಮಾಕ್ಸ್ ದಂಡ ಕಟ್ಟಿಸಿಕೊಂಡಿದ್ದಾರೆ. ನಾನೊಬ್ಬ ಜವಾಬ್ದಾರಿಯುತ ವ್ಯಕ್ತಿಯಾಗಿ ಮರು ಮಾತಾಡದೆ ದಂಡ ಕಟ್ಟಿದ್ದೇನೆ. ಆದರೆ ಇದು ಆಕ್ಷೇಪಾರ್ಹ ನಡೆಯಾಗಿದ್ದು ಪೋಲೀಸರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು" ಎಂದು ಪತ್ರದಲ್ಲಿ ಶಾಸಕರು ವಿನಂತಿಸಿದ್ದಾರೆ.
Advertisement