ದೇವರನ್ನೂ ಬಿಟ್ಟಿಲ್ಲ ಕೊರೋನಾ! ಈ ವರ್ಷ ಪ್ರಸಿದ್ಧ ದೇವಾಲಯಗಳ ಆದಾಯದಲ್ಲಿ ಭಾರೀ ಇಳಿಕೆ

ಕೋವಿಡ್-19 ಈ ವರ್ಷ ಅಧಿಕ ಆದಾಯ ತರುವ ದೇವಸ್ಥಾನಗಳನ್ನು ಕೂಡ ಬಿಟ್ಟಿಲ್ಲ. ರಾಜ್ಯ ಸರ್ಕಾರದ ಅಧೀನದಲ್ಲಿರುವ ಸಂಪದ್ಭರಿತ ದೇವಸ್ಥಾನಗಳಾದ ಕುಕ್ಕೆ ಸುಬ್ರಹ್ಮಣ್ಯದಂತಹ ದೇವಸ್ಥಾನಗಳ ಆದಾಯ ಕೂಡ ಕುಸಿದಿದೆ.
ಕುಕ್ಕೆ ಸುಬ್ರಹ್ಮಣ್ಯ
ಕುಕ್ಕೆ ಸುಬ್ರಹ್ಮಣ್ಯ

ಬೆಂಗಳೂರು: ಕೋವಿಡ್-19 ಈ ವರ್ಷ ಅಧಿಕ ಆದಾಯ ತರುವ ದೇವಸ್ಥಾನಗಳನ್ನು ಕೂಡ ಬಿಟ್ಟಿಲ್ಲ. ರಾಜ್ಯ ಸರ್ಕಾರದ ಅಧೀನದಲ್ಲಿರುವ ಸಂಪದ್ಭರಿತ ದೇವಸ್ಥಾನಗಳಾದ ಕುಕ್ಕೆ ಸುಬ್ರಹ್ಮಣ್ಯದಂತಹ ದೇವಸ್ಥಾನಗಳ ಆದಾಯ ಕೂಡ ಕುಸಿದಿದೆ.

ಕರ್ನಾಟಕದಲ್ಲಿರುವ ಪ್ರಮುಖ 12 ದೇವಾಲಯಗಳು ಕಳೆದ ವರ್ಷ ಒಟ್ಟಾರೆ 317 ಕೋಟಿ ರೂಪಾಯಿ ಆದಾಯ ಸಂಗ್ರಹಿಸಿದ್ದರೆ ಈ ವರ್ಷ ಗಳಿಸಿದ ಆದಾಯ ಕೇವಲ 18.6 ಕೋಟಿ ಮಾತ್ರ. ದಕ್ಷಿಣ ಕನ್ನಡ ಜಿಲ್ಲೆಯ ಖ್ಯಾತ ಕುಕ್ಕೆ ಸುಬ್ರಹ್ಮಣ್ಯ ಪ್ರತಿವರ್ಷ ಸರಾಸರಿ 90 ಕೋಟಿ ರೂಪಾಯಿ ಆದಾಯ ಗಳಿಸುತ್ತದೆ, ಆದರೆ ಈ ವರ್ಷ ಗಳಿಸಿದ್ದು ಕೇವಲ 4.2 ಕೋಟಿ ರೂಪಾಯಿ. ಕೊಲ್ಲೂರು ಮೂಕಾಂಬಿಕೆ ದೇವಸ್ಥಾನಕ್ಕೆ ಪ್ರತಿವರ್ಷ 45ರಿಂದ 50 ಕೋಟಿ ರೂಪಾಯಿ ಆದಾಯವಾಗುತ್ತದೆ, ಆದರೆ ಈ ವರ್ಷ ಆಗಿದ್ದು ಕೇವಲ 4.5 ಕೋಟಿ ರೂಪಾಯಿ. ಇದೇ ವರ್ಷ ಈ ದೇವಾಲಯಗಳು ಇಷ್ಟು ಕಡಿಮೆ ಆದಾಯ ಗಳಿಸಿದ್ದು.

ಮೈಸೂರು ಜಿಲ್ಲೆಯ ಚಾಮುಂಡಿ ಬೆಟ್ಟದ ಕಳೆದ ವರ್ಷದ ಆದಾಯ 35.23 ಕೋಟಿ ರೂಪಾಯಿಗಳಾದರೆ ಈ ವರ್ಷ ಕೇವಲ 74 ಲಕ್ಷ ರೂಪಾಯಿ ಗಳಿಸಿದೆ. ದಕ್ಷಿಣದ ಕಾಶಿ ಎಂದು ಕರೆಯಲ್ಪಡುವ ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನ ಕಳೆದ ವರ್ಷ 20.8 ಕೋಟಿ ರೂ ಆದಾಯ ಗಳಿಸಿದ್ದರೆ ಈ ವರ್ಷ ಕೇವಲ 12.6 ಕೋಟಿ ರೂಪಾಯಿ ಗಳಿಸಿದೆ. ರಾಜ್ಯದಲ್ಲಿ ಮುಜರಾಯಿ ಇಲಾಖೆಯಡಿ 34,559 ದೇವಾಲಯಗಳಿವೆ.

ಧಕ್ಕೆಯಾಗದ ಸಿಬ್ಬಂದಿ ವೇತನ: ಮುಜರಾಯಿ ಇಲಾಖೆಯಡಿ ಬರುವ ಎ ದರ್ಜೆಯ 175 ದೇವಾಲಯಗಳು(ವರ್ಷಕ್ಕೆ 25 ಲಕ್ಷಕ್ಕೆ ಹೆಚ್ಚು ಆದಾಯ ಹೊಂದಿರುವ ದೇವಸ್ಥಾನಗಳು), 163 ಬಿ ದರ್ಜೆಯ (ವರ್ಷಕ್ಕೆ 5ರಿಂದ 25 ಲಕ್ಷ ಆದಾಯ) ಮತ್ತು ಸಿ ದರ್ಜೆಯ(ವರ್ಷಕ್ಕೆ 5 ಲಕ್ಷಕ್ಕಿಂತ ಕಡಿಮೆ ಆದಾಯ) ಹೊಂದಿರುವ ದೇವಸ್ಥಾನಗಳು ಈ ವರ್ಷ ಕೋವಿಡ್ ಲಾಕ್ ಡೌನ್ ಆದ ಕಾರಣ ಹಾಕಿದ್ದ ಬಾಗಿಲು ಮತ್ತೆ ತೆರೆದದ್ದು ಸೆಪ್ಟೆಂಬರ್ ನಲ್ಲಿಯ

ಬೇಸಿಗೆ ಕಾಲದಲ್ಲಿ ದೇವಸ್ಥಾನಗಳಿಗೆ ಬರುವ ಯಾತ್ರಿಕರ ಸಂಖ್ಯೆ ಹೆಚ್ಚಾಗಿರುತ್ತದೆ, ಆ ಸಮಯದಲ್ಲಿಯೇ ಅಧಿಕ ಆದಾಯವಿರುತ್ತದೆ.ಹಬ್ಬಹರಿದಿನಗಳು ಮತ್ತು ವಿಶೇಷ ಸಮಯಗಳಲ್ಲಿಯೂ ಇರುತ್ತದೆ. ಕೊರೋನಾ ಹಿನ್ನೆಲೆಯಲ್ಲಿ ಆನ್ ಲೈನ್ ದರ್ಶನ ವ್ಯವಸ್ಥೆ ಕಲ್ಪಿಸಿದ್ದರೂ ಕೂಡ ಅನೇಕ ಭಕ್ತರು ಖುದ್ದಾಗಿ ದೇವಸ್ಥಾನಕ್ಕೆ ಬಂದು ದೇವರ ದರ್ಶನ ಪಡೆಯುವ ಆಸೆ ಹೊಂದಿರುತ್ತಾರೆ. ಈ ಹಿನ್ನೆಲೆಯಲ್ಲಿ ಈ ವರ್ಷ ಆದಾಯ ಕಡಿಮೆಯಾಗಿದೆ ಎಂದು ಮುಜರಾಯಿ ಇಲಾಖೆಯ ಹಿರಿಯ ಅಧಿಕಾರಿ ಹೇಳುತ್ತಾರೆ.

ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಮುಜರಾಯಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಈ ವರ್ಷ ದೇವಾಲಯಗಳ ಆದಾಯ ಕಡಿಮೆಯಾಗಿರುವುದು ಹೌದು. ಆದರೆ ಮುಜರಾಯಿ ಇಲಾಖೆಯ ದೇವಾಲಯಗಳ ಸಿಬ್ಬಂದಿಯ ವೇತನಕ್ಕೆ ಧಕ್ಕೆಯಾಗಿಲ್ಲ. ನಮ್ಮ ದೇವಸ್ಥಾನಗಳಲ್ಲಿ ಸಿಬ್ಬಂದಿಗೆ ವೇತನ ನೀಡಲು ಹಣ ಸಾಕಷ್ಟಿದ್ದು, ನಿಗದಿತ ಸಮಯಕ್ಕೆ ವೇತನ ನೀಡಲಾಗಿದೆ. ಬ್ಯಾಂಕುಗಳಿಟ್ಟ ಹಣದಿಂದ ಬಂದ ಬಡ್ಡಿಯಿಂದ ವೇತನ ನೀಡಲಾಗಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com