ಬೆಂಗಳೂರು: ಬ್ರಿಟನ್‌ನಿಂದ ರಾಜ್ಯಕ್ಕೆ ಬಂದ 1,614 ಜನರನ್ನು ಈವರೆಗೆ ತಪಾಸಣೆಗೆ ಒಳಪಡಿಸಲಾಗಿದ್ದು, ಈ ಪೈಕಿ 26 ಮಂದಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಸಚಿವ ಕೆ.ಸುಧಾಕರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬ್ರಿಟನ್ ನಿಂದ ಬಂದವರ ಆರೋಗ್ಯ ತಪಾಸಣೆ ನಿಮ್ಹಾನ್ಸ್‌ನಲ್ಲಿ ನಡೆದಿದ್ದು, ಈ ಮಾಹಿತಿಯನ್ನು ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ.
ಸೋಂಕು ಪತ್ತೆ ಆದ ಎಲ್ಲರಿಗೂ ಸರ್ಕಾರದ ಸುಪರ್ದಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರಲ್ಲಿ ಯಾವೇ ಥರದ ಗಂಭೀರ ಲಕ್ಷಣಗಳು ಕಂಡುಬಂದಿಲ್ಲ. ಯಾರೂ ಹೋಮ್ ಐಸೋಲೇಷನ್‌ನಲ್ಲಿ ಇಲ್ಲ’ ಎಂದೂ ಅವರು ಸ್ಪಷ್ಟಪಡಿಸಿದರು.
ವಿದೇಶದಿಂದ ಬಂದವರ ಪೈಕಿ ಅನೇಕರು ಇನ್ನೂ ಪತ್ತೆ ಆಗಿಲ್ಲ. ಅದರಲ್ಲೂ ಬ್ರಿಟನ್‌ನಿಂದ ಬಂದವರಿದ್ದಾರೆ. ಅನೇಕರು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಅವರನ್ನು ಪತ್ತೆ ಮಾಡುವ ಕೆಲಸ ಮುಂದುವರಿದೆ, AWW, ಪ್ರತಿಕ್ರಿಯಿಸಿದ ಸಚಿವರು, ‘ವರದಿ ಬರಲು ಕನಿಷ್ಠ 48 ಗಂಟೆ ಬೇಕಾಗಿದೆ. ನಿಮ್ಹಾನ್ಸ್ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿಲಾಗಿದೆ. ಇಡೀ ದೇಶದ ಎಲ್ಲ ರಾಜ್ಯಗಳಿಂದ ಬಂದ ವರದಿಯನ್ನು ಪರಿಶೀಲಿಸಿ, ಐಸಿಎಂಆರ್‌ನಿಂದ ವರದಿ. ದೆಹಲಿಯಿಂದ ಐಸಿಎಂಆರ್ ವರದಿ ಇಂದು ಪ್ರಕಟ ಆಗುವ ನಿರೀಕ್ಷೆ ಇದೆ. ನಾನು ಕೂಡಾ ಐಸಿಎಂಆರ್ ಜೊತೆ ಮಾತನಾಡುತ್ತೇನೆ’ ಎಂದರು.
Advertisement