ಕೊಬ್ರಿ ಹೋರಿ ಕ್ರೀಡಾಕೂಟದಲ್ಲಿ ದುರಂತ: ಕೆರೆಗೆ ಹಾರಿದ ಎತ್ತು ನೀರಲ್ಲಿ ಮುಳುಗಿ ಸಾವು

ಹಾವೇರಿ ಜಿಲ್ಲೆಯಲ್ಲಿ ನಡೆದ ದುರಂತ ಘಟನೆಯೊಂದರಲ್ಲಿ ಗ್ರಾಮೀಣ ಕ್ರೀಡೆಯಾದ ಕೋಬ್ರಿ ಹೋರಿ ಭಾಗವಾದ ಎತ್ತೊಂದು ಕೆರೆಯಲ್ಲಿ ಮುಳುಗಿ ಮೃತಪಟ್ಟಿದೆ. ಹಾವೇರಿಯ ಸುತಗಟ್ಟಿ ಗ್ರಾಮದ ಕೆರೆಯಲ್ಲಿ ಎತ್ತು ಮುಳುಗಿ ಸಾವನ್ನಪ್ಪಿದೆ.
ಕೋಬ್ರಿ ಹೋರಿ ಸಾಂಪ್ರದಾಯಿಕ ಕ್ರೀಡೆ
ಕೋಬ್ರಿ ಹೋರಿ ಸಾಂಪ್ರದಾಯಿಕ ಕ್ರೀಡೆ
Updated on

ಹುಬ್ಬಳ್ಳಿ: ಹಾವೇರಿ ಜಿಲ್ಲೆಯಲ್ಲಿ ನಡೆದ ದುರಂತ ಘಟನೆಯೊಂದರಲ್ಲಿ ಗ್ರಾಮೀಣ ಕ್ರೀಡೆಯಾದ ಕೋಬ್ರಿ ಹೋರಿ ಭಾಗವಾದ ಎತ್ತೊಂದು ಕೆರೆಯಲ್ಲಿ ಮುಳುಗಿ ಮೃತಪಟ್ಟಿದೆ. ಹಾವೇರಿಯ ಸುತಗಟ್ಟಿ ಗ್ರಾಮದ ಕೆರೆಯಲ್ಲಿ ಎತ್ತು ಮುಳುಗಿ ಸಾವನ್ನಪ್ಪಿದೆ. ಕ್ರೀಡೆಯ ನಡುವೆ ತನ್ನನ್ನು ಬೆನ್ನಟ್ಟುತ್ತಿದ್ದವರಿಂದ ತಪ್ಪಿಸಿಕೊಳ್ಳುವ ಯತ್ನದಲ್ಲಿದ್ದ ಎತ್ತು ಪ್ರೇಕ್ಷಕರ ಗುಂಪಿನ ಮೂಲಕ ನುಗ್ಗಿ ಕೆರೆಗೆ ಹಾರಿದೆ.

ಎತ್ತು ಕೆರೆಯಲ್ಲಿ ದೂರಕ್ಕೆ ಈಜಲು ಯತ್ನಿಸಿದರೂ ವಿಫಲವಾಯಿತು ಮತ್ತು ಪ್ರಾಣ ಕಳೆದುಕೊಂಡಿತು. ಕೊಬ್ರಿ ಹೋರಿ ಕ್ರೀಡೆಯಲ್ಲಿ ಮೃತಪಟ್ಟ ಎತ್ತನ್ನು ಬಲರಾಮ ಎನ್ನಲಾಗಿದ್ದು ಇದು ಎಲ್ಲರ ಆಕರ್ಷಣೆಯ ಕೇಂದ್ರವಾಗಿತ್ತು.

ಕೊರೋನಾ ಸಾಂಕ್ರಾಮಿಕದ ನಡುವೆ ಇಷ್ಟು ದೊಡ್ಡ ಕೂಟಕ್ಕೆ ಜಿಲ್ಲಾಡಳಿತ ಹೇಗೆ ಅವಕಾಶ ನೀಡಿತು ಎಂಬ ಬಗ್ಗೆಯೂ ಈ ಘಟನೆಯು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಸುತಗಟ್ಟಿ ಗ್ರಾಮದಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲು ನೂರಾರು ಜನರು ಸೇರಿದ್ದರು. ಕೋಬ್ರಿ ಹೋರಿ ಕ್ರೀಡೆ  ಅಲಂಕೃತ ಎತ್ತುಗಳನ್ನು ಜನಸಮೂಹದ ಮೂಲಕ ಓಡಿಸುವ ಆಟವಾಗಿದ್ದು ಜನರು ಎತ್ತನ್ನು ಹಿಡಿಯಲು ಪ್ರಯತ್ನಿಸುತ್ತಾರೆ. ಸಾಂಪ್ರದಾಯಿಕ ಕಾರ್ಯಕ್ರಮವನ್ನು ಹಾವೇರಿಜಿಲ್ಲೆಯ ಹೆಚ್ಚಿನ ಭಾಗಗಳಲ್ಲಿ ಆಡಲಾಗುತ್ತದೆ.

ಇಷ್ಟು ದೊಡ್ಡ ಕೂಟಕ್ಕೆ ಸಂಘಟಕರು ಅನುಮತಿ ಕೋರಿಲ್ಲ ಎಂದು ಜಿಲ್ಲಾ ಪೊಲೀಸರು ಸ್ಪಷ್ಟಪಡಿಸಿದ್ದಾರೆ. "ಇದಲ್ಲದೆ ಜನರು ಬೃಹತ್ ಉತ್ಸವ, ಕಾರ್ಯಕ್ರಮಗಳನ್ನು ನಡೆಸದಂತೆ ಜನರಿಗೆ ಮನವಿ ಮಾಡುವ ಮೂಲಕ ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಇಲ್ಲಿಯವರೆಗೆ ಯಾವುದೇ ಪ್ರಕರಣಗಳನ್ನು ದಾಖಲಿಸಲಾಗಿಲ್ಲ. ಯಾರಾದರೂ ದೂರು ನೀಡಲು ಮುಂದೆ ಬಂದರೆ ನಾವು ಈ ಬಗ್ಗೆ ಕ್ರಮ ಜರುಗಿಸುತ್ತೇವೆ" ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜಲ್ಲಿಕಟ್ಟು ಕ್ರೀಡೆಯಂತೆಯೇ ಕೋಬ್ರಿ ಹೋರಿ ಸಹ ಇಂತಹಾ ದುರಂತಗಳಿಂದ ಮುಕ್ತವಾಗಿಲ್ಲ.ಈ ಕ್ರೀಡೆಯ ವೇಳೆ ಹಿಂದೆ ಸಹ ಹಲವಾರು ಜನರುಣ ಕಳೆದುಕೊಂಡಿದ್ದಾರೆ. ಜನವರಿ 2018 ರಲ್ಲಿ ಸಹ ಇದೇ ಕೊಬ್ರಿ ಹೋರಿ ನಡೆಯುವಾಗ ಒಬ್ಬ ವ್ಯಕ್ತಿ ಗಾಯಗೊಂಡು ಪ್ರಾಣ ಬಿಟ್ಟಿದ್ದನು.ಅಲ್ಲದೆ ಇನ್ನೂ ಆರು ಜನರು ಗಾಯಗೊಂಡಿದ್ದರು. ಇನ್ನೂ, ಕೋಬ್ರಿ ಹೋರಿ ಕಾರ್ಯಕ್ರಮವನ್ನು ಜನದಟ್ಟಣೆಯ ಕಾರ್ಯಕ್ರಮ ಎನ್ನಲಾಗುತ್ತದೆ. ಇದಕ್ಕಾಗಿ ಸುತ್ತಮುತ್ತಲಿನ ಜಿಲ್ಲೆಗಳ ಜನರು ಕೂಡ ಈ ಗ್ರಾಮೀಣ ಸಾಂಪ್ರದಾಯಿಕ ಕ್ರೀಡೆಯನ್ನು ವೀಕ್ಷಿಸಲು ಬರುತ್ತಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com