ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಯೂಟದಲ್ಲಿ ಮಶ್ರೂಮ್ ರಸಂ!

ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದಲ್ಲಿ ಮಶ್ರೂಮ್ ರಸಂ ಸೇರಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು:  ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದಲ್ಲಿ ಮಶ್ರೂಮ್ ರಸಂ ಸೇರಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. 

ಮಕ್ಕಳಿಗೆ ಸುಲಭವಾಗಿ ತಲುಪಿಸಲು ಸಿದ್ಧಗೊಳಿಸಿದ ಮಶ್ರೂಮ್ ರಸಂ ಪೌಡರ್ ಅನ್ನು ತಯಾರಿಸಿದ್ದು ಅದನ್ನು ಮಕ್ಕಳ ಮಧ್ಯಾಹ್ನದ ಬಿಸಿಯೂಟಕ್ಕೆ ಬಳಸಲು ಯೋಜಿಸುತ್ತಿರುವುದಾಗಿ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ಅಧ್ಯಕ್ಷ ಮಿ. ದಿನೇಶ್  ಹೇಳಿದ್ದಾರೆ.

ಈ ಸಂಬಂಧ 2 ತಿಂಗಳ ಹಿಂದೆಯೇ ಪ್ರಸ್ತಾವನೆ ಸಲ್ಲಿಸಿದ್ದು, ಹೆಸರಘಟ್ಟದಲ್ಲಿರುವ ಶಾಲೆಗಳಿಗೆ ಸ್ಯಾಂಪಲ್ ಪೌಡರ್ ಗಳನ್ನು ವಿತರಿಸಲಾಗಿದೆ,  ಮಕ್ಕಳಿಗೆ ಇದು ತುಂಬಾ ಇಷ್ಟವವಾಗಿದೆ, ಪ್ರತಿ ಶಾಲೆಗೆ 10 ಎಂಎಲ್ ನೀಸಡಲಾಗುತ್ತದೆ, ಇದನ್ನು ಬಿಸಿ ನೀರಿಗೆ ಬೆರೆಸಿ ಕೊಡಬಹುದಾಗಿದೆ.

ಮಕ್ಕಳಿಗೆ ಅಗತ್ಯವಿರುವ ವಿಟಮಿನ್ ಮತ್ತು ಪ್ರೊಟೀನ್ ಇದರಿಂದ ಸಿಗಲಿದೆ,  ಈ ಮೊದಲು ಈ ಪ್ರಸ್ತಾವನೆ ಸಲ್ಲಿಸಲಾಗಿತ್ತು, ಆದರೆ ಶಿಕ್ಷಣ ಇಲಾಖೆ ಇದನ್ನು ರದ್ದುಗಳಿಸಿತ್ತು, ಮಶ್ರೂಮ್ ಬಗ್ಗೆ ಇದ್ದ ತಪ್ಪು ತಿಳುವಳಿಕೆ ಇದಕ್ಕೆ ಕಾರಣವಾಗಿದೆ,

ಮೊಟ್ಟೆಗಿಂತ ಇದರಲ್ಲಿ ಕಡಿಮೆ ಪೋಷಕಾಂಶಗಳಿವೆ, ಮೊಟ್ಟೆಯನ್ನು ತಿನ್ನದ ಮಕ್ಕಳಿಗೆ ಇದನ್ನು ನೀಡುವುದರ ಮೂಲಕ ಸಮತೋಲಿತ ಆಹಾರ ನೀಡಲು ಸಹಕಾರಿಯಾಗುತ್ತದೆ ಎಂದು ಡಾ.ಮೀರಾ  ಪಾಂಡೆ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com