ತಾನೇ ಅಪಾಯದಲ್ಲಿದ್ದೂ ಸೋದರನಿಗೆ ಕಿಡ್ನಾಪರ್‌ಗಳ ಲೈವ್ ಲೊಕೇಷನ್ ಕಳುಹಿಸಿದ ಬಿಟೆಕ್ ವಿದ್ಯಾರ್ಥಿನಿ!

 21 ವರ್ಷದ ಬಿಟೆಕ್ ವಿದ್ಯಾರ್ಥಿನಿ ಹಾಗೂ ಆಕೆಯ ಸ್ನೇಹಿತನನ್ನು ಅಪಹರಿಸಿದ ಆರೋಪದಡಿ ರಾಮನಗರ ಜಿಲ್ಲಾ ಪೋಲೀಸರು ಇಬ್ಬರನ್ನು ಬಂಧಿಸಿದ್ದಾರೆ.ವಿಚಿತ್ರವೆಂದರೆ ಯುವತಿಯ ಬಿಡುಗಡೆಗಾಗಿ ಅಪಹರಣಕಾರರು  5,000 ರೂ.ಗಳ ಬೇಡಿಕೆ ಇಟ್ಟಿದ್ದರು ಅಲ್ಲದೆ ಆಕೆಯ ಮೊಬೈಲ್ ಬಳಕೆಗೆ ಸಹ ಅವಕಾಶ ಕಲ್ಪಿಸಿದ್ದರು.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: 21 ವರ್ಷದ ಬಿಟೆಕ್ ವಿದ್ಯಾರ್ಥಿನಿ ಹಾಗೂ ಆಕೆಯ ಸ್ನೇಹಿತನನ್ನು ಅಪಹರಿಸಿದ ಆರೋಪದಡಿ ರಾಮನಗರ ಜಿಲ್ಲಾ ಪೋಲೀಸರು ಇಬ್ಬರನ್ನು ಬಂಧಿಸಿದ್ದಾರೆ. ವಿಚಿತ್ರವೆಂದರೆ ಯುವತಿಯ ಬಿಡುಗಡೆಗಾಗಿ ಅಪಹರಣಕಾರರು  5,000 ರೂ.ಗಳ ಬೇಡಿಕೆ ಇಟ್ಟಿದ್ದರು ಅಲ್ಲದೆ ಆಕೆಯ ಮೊಬೈಲ್ ಬಳಕೆಗೆ ಸಹ ಅವಕಾಶ ಕಲ್ಪಿಸಿದ್ದರು.

ಆರೋಪಿಗಳಾದ ಮಾಥೀನ್ (29) ಮತ್ತು ಸುಹೇಲ್ (30 ಬಂಧಿತರಾಗಿದ್ದು ಇಬ್ಬರೂ ರಾಮನಗರ ನಿವಾಸಿಗಳು ಎಂದು ತಿಳಿದುಬಂದಿದೆ. ಜನವರಿ 25.ರಂದು ಈ ಘಟನೆ ನಡೆದಿದೆ.

ಯುವತಿ ಹಾಗೂ ಆಕೆಯ ಸಹಪಾಠಿ, ಬೆಂಗಳೂರಿನ ಪ್ರಸಿದ್ಧ ಕಾಲೇಜಿನ ನಾಲ್ಕನೇ ವರ್ಷದ ಬಿಟೆಕ್ ವಿದ್ಯಾರ್ಥಿಗಳು ಪ್ರಾಜಕ್ಟ್ ಕೆಲಸದ ನಿಮಿತ್ತ ಮೈಸೂರಿಗೆ ಬೈಕಿನಲ್ಲಿ ತೆರಳಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಅವರು ಮಧ್ಯಾಹ್ನ 3 ರ ಸುಮಾರಿಗೆ ಮೈಸೂರಿನಿಂದ ಹೊರಟು ಸಂಜೆ 6.20 ರ ಸುಮಾರಿಗೆ ರಾಮನಗರ ತಲುಪಿದರು ಆಗ ಯುವತಿಗೆ ಆಕೆಯ ಸ್ನೇಹಿತರಿಂದ ಕರೆ ಬಂದಿದೆ. ಆ ವೇಳೆ ಬೈಕನ್ನು ಬ್ಯಾಂಕಿನ ಸಮೀಪ ನಿಲ್ಲಿಸಿ ಮಾತನಾಡುತ್ತಿದ್ದಳು. ಆದರೆ ಆ ವೇಳೆ ಇದ್ದಕ್ಕಿದ್ದಂತೆ ಮೂವರು ಆಗಮಿಸಿ ಅವರಿಬ್ಬರ ದಾರಿ ತಪ್ಪಿಸಿ ಅಪಹರಿಸಿದ್ದಾರೆ. ಅವರು "ನೀನು ಮುಸ್ಲಿಂ ಹಾಗಾಗಿ ಬೇರೆ ಧರ್ಮದ ಯುವಕನೊಡನೆ ತಿರುಗುವುದು ಸರಿಯಲ್ಲ" ಎಂದು ಯುವತಿಗೆ ಎಚ್ಚರಿಕೆ ನೀಡಿದ್ದಾರೆ. ಬಳಿಕ ಆ ಮೂವರೂ ಅವರಿಬ್ಬರನ್ನು ತಮ್ಮ ಕಚೇರಿಗೆ ಕರೆದೊಯ್ದು ಸಮಸ್ಯೆ ಬಗೆಹರಿಸುತ್ತೇವೆ ಎಂದಿದ್ದಾರೆ. ಅವರಲ್ಲಿ ಒಬ್ಬ ಯುವಕನಿಂದ ಬೈಕಿನ ಕೀಲಿಯನ್ನು ಕಸಿದುಕೊಂಡಿದ್ದಾರೆ ಮತ್ತು ಯುವತಿಯನ್ನು ತನ್ನೊಡನೆ ಬರುವಂತೆ ಹೇಳಿದ್ದಾನೆ ಇನ್ನಿಬ್ಬರು ಆರೋಪಿಗಳು ಯುವಕನನ್ನು ಕರೆದೊಯ್ದಿದ್ದಾರೆ ಎಂದು ಪೋಲೀಸರು ಮಾಹಿತಿ ವಿವರಿಸಿದರು.

"ಯುವತಿ ಮತ್ತು ಅವಳ ಅಪಹರಣಕಾರನು ಮೂರು ಗಂಟೆಗಳಿಗಿಂತ ಹೆಚ್ಚು ಕಾಲ ರಾಮನಗರದಲ್ಲಿ ಸುತ್ತಾಡಿದರು. ಅವನು ಅವಳನ್ನು ಮುಕ್ತಗೊಳಿಸಲು 5,000 ರೂ. ಬೇಡಿಕೆ ಇಟ್ಟಿದ್ದ, ಅವನ ಸಹಚರರು ಹುಡುಗನನ್ನು ಬೇರೆ ಸ್ಥಳಕ್ಕೆ ಕರೆದೊಯ್ದರು. ಏತನ್ಮಧ್ಯೆ, ತನ್ನ ಬಳಿ ಹಣವಿಲ್ಲ ಎಂದು ಹೇಳಿದ ನಂತರ ಯುವತಿಗೆ ತನ್ನ ಸಹೋದರನೊಂದಿಗೆ ಮಾತನಾಡಲು ಆರೋಪಿ ಅವಕಾಶ ಕಲ್ಪಿಸಿದ್ದಾನೆ. ಅಲ್ಲದೆ ಆತನ ಮೂಲಕ ಹಣ ಒದಗಿಸುವಂತೆ ಕೇಳಿದ್ದಾನೆ. ಅವಳು ತನ್ನ ಸಹೋದರನೊಂದಿಗೆ ಫೋನ್‌ನಲ್ಲಿ ಮಾತನಾಡಿ ತನ್ನ ಕಷ್ಟವನ್ನು ಹೇಳಿಕೊಂಡಿದ್ದಾಳೆ. ಆಕೆಯ ಸಹೋದರ ಹಣವನ್ನು ಯುವತಿಯ ಖಾತೆಗೆ ವರ್ಗಾಯಿಸಿ ರಾಮನಗರ ಪೊಲೀಸರೊಂದಿಗೆ ಮಾತನಾಡಿ ಅವಳ ಫೋನ್ ಬಳಸಿ ಅವಳನ್ನು ಪತ್ತೆಹಚ್ಚಿ ಎಂದು ಬೇಡಿಕೊಂಡಿದ್ದಾನೆ. ದೂರಿನ ಬಳಿಕ ಕಾರ್ಯಪ್ರವೃತ್ತರಾದ ಪೋಲೀಸರು ಆಕೆಯ ಮೊಬೈಲ್ ಕರೆ ಟ್ರ್ಯಾಕ್ ಮಾಡಿ ಕೈಲಂಚ್ ಗ್ರಾಮದ ಸಮೀಪ ಬಂದಿದ್ದಾರೆ. ಅಲ್ಲಿ ಯುವತಿ ಎಟಿಎಂಗೆ ಹೋಗುತ್ತಿದ್ದಾಗ ಪೋಲೀಸರು ಅವಳನ್ನು ರಕ್ಷಿಸಿದರು ಆದರೆ ಆರೋಪಿ ಪರಾರಿಯಾಗಿದ್ದ. ಆ ನಂತರ ಯುವತಿಯ ಸ್ನೇಹಿತನ ಬಗೆಗೆ ವಿಚಾರಿಸಿದಾಗ ಆತನನ್ನು ಸಹ ಬಿಡುಗಡೆಗೊಳಿಸಿರುವುದು ತಿಳಿದುಬಂದಿದೆ. "ಪೊಲೀಸರು ಹೇಳಿದರು.

ಘಟನೆ ನಂತರ ಪೊಲೀಸರು ಆರೋಪಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಇಬ್ಬರನ್ನು ಬಂಧಿಸಿ ಯುವಕನ ಬೈಕ್ ಅನ್ನು ವಶಕ್ಕೆ ಪಡೆದು ಹಿಂತಿರುಗಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com