'ಖಾದಿ' ರಂಗು ಪಡೆದುಕೊಳ್ಳಲಿರುವ ಮಂಗಳೂರು ವಿಶ್ವವಿದ್ಯಾಲಯದ ಘಟಿಕೋತ್ಸವ

ವಿಶ್ವವಿದ್ಯಾಲಯ ಹಾಗೂ ಕಾಲೇಜುಗಳ ಘಟಿಕೋತ್ಸವ, ಇನ್ನಿತರ ಸಮಾರಂಭಗಳಲ್ಲಿ ಖಾದಿ ಧಿರಿಸು ಬಳಸಬೇಕೆಂದು ವಿಶ್ವ ವಿದ್ಯಾಲಯಗಳ ಧನ ಸಹಾಯ ಆಯೋಗ( ಯುಜಿಸಿ) ಸೂಚನೆ ನೀಡಿರುವ ಹಿನ್ನಲೆಯಲ್ಲಿ  ಮಂಗಳೂರು ವಿಶ್ವವಿದ್ಯಾಲಯ ತನ್ನ ವಿಧ್ಯುಕ್ತ ಸಮಾರಂಭಗಳಲ್ಲಿ ಖಾದಿ - ಸಿಲ್ಕ್  ನಿಲುವಂಗಿ ಬಳಸಲು ನಿರ್ಧರಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮಂಗಳೂರು: ವಿಶ್ವವಿದ್ಯಾಲಯ ಹಾಗೂ ಕಾಲೇಜುಗಳ ಘಟಿಕೋತ್ಸವ, ಇನ್ನಿತರ ಸಮಾರಂಭಗಳಲ್ಲಿ ಖಾದಿ ಧಿರಿಸು ಬಳಸಬೇಕೆಂದು ವಿಶ್ವ ವಿದ್ಯಾಲಯಗಳ ಧನ ಸಹಾಯ ಆಯೋಗ( ಯುಜಿಸಿ) ಸೂಚನೆ ನೀಡಿರುವ ಹಿನ್ನಲೆಯಲ್ಲಿ  ಮಂಗಳೂರು ವಿಶ್ವವಿದ್ಯಾಲಯ ತನ್ನ ವಿಧ್ಯುಕ್ತ ಸಮಾರಂಭಗಳಲ್ಲಿ ಖಾದಿ - ಸಿಲ್ಕ್  ನಿಲುವಂಗಿ ಬಳಸಲು ನಿರ್ಧರಿಸಿದೆ. ಪದವಿ ಪ್ರದಾನ ಮಾಡುವ ಘಟಿಕೋತ್ಸವ ಕಾರ್ಯಕ್ರಮದ ನಿಯಮಾವಳಿ ತಿದ್ದುಪಡಿಗಳಿಗೆ ವಿವಿಯ ಅಕಾಡೆಮಿಕ್  ಕೌನ್ಸಿಲ್ ಸಭೆ  ಅನುಮೋದನೆ ನೀಡಿದೆ.

ಕುಲಪತಿಗಳು ಧರಿಸುವ ನಿಲವಂಗಿ ಕಡು ಕೆಂಪು ವರ್ಣದ್ದಾಗಿರಲಿದ್ದು, ಮೇಲು ಹೊದಿಕೆ ನೀಲಿ ಹಾಗೂ ಚಿನ್ನದ ಬಣ್ಣದ  ಅಂಚು ಹೊಂದಿರಲಿದೆ ಎಂದು ಮಂಗಳೂರು ವಿಶ್ವವಿದ್ಯಾಲಯದ  ರಿಜಿಸ್ಟಾರ್  ಪ್ರೋ. ಎ.ಎಂ ಖಾನ್ ಮಂಗಳವಾರ ಹೇಳಿದ್ದಾರೆ.

ಪ್ರೊ ಚಾನ್ಸಲರ್ ನಿಲುವಂಗಿ ನೀಲಿ ಬಣ್ಣದ್ದಾಗಿರಲಿದೆ, ಉಪ ಕುಲಪತಿ ನಿಲುವಂಗಿ ಅಕಾಶ ನೀಲಿ ಬಣ್ಣದ್ದಾಗಿರಲಿದೆ ಎಂದು ವಿವರಿಸಿದರು.  

ಡಿಎಸ್ಟಿ ಗೌರವ ಪದವಿ ಸ್ವೀಕರಿಸುವವರು ಕೆಂಪು ಬಣ್ಣದ ‘ಅಂಗವಸ್ತ್ರಂ’ ಹೊಂದಿರುವ ಬಿಳಿ ನಿಲುವಂಗಿಯನ್ನು ಧರಿಸುತ್ತಾರೆ ಮತ್ತು ಡಿಲಿಟ್ ಸ್ವೀಕರಿಸುವವರು ಆಕಾಶ ನೀಲಿ ‘ಅಂಗವಸ್ತ್ರ’ ಹೊಂದಿರುವ ಬಿಳಿ ನಿಲುವಂಗಿಯನ್ನು ಧರಿಸಲಿದ್ದಾರೆ. ಆದೇ ರೀತಿ ರಿಜಿಸ್ಟಾರ್,  ರಿಜಿಸ್ಟಾರ್ (ಮೌಲ್ಯಮಾಪನ), ಡೀನ್,  ಅಕಾಡೆಮಿಕ್  ಕೌನ್ಸಿಲ್ ಹಾಗೂ ಸಿಂಡಿಕೇಟ್ ಸದಸ್ಯರ ನಿಲುವಂಗಿಗಳ ಬಣ್ಣಗಳು ಬದಲಾಗಿವೆ.

ಉಪ ಕುಲಪತಿ ಪ್ರೋ. ಪಿ.ಎಸ್. ಯಡಪಡಿತ್ತಾಯ, ವಿಶ್ವವಿದ್ಯಾಲಯದ ಆವರಣದಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ  ಬಯೋ ಮೆಟ್ರಿಕ್ ಹಾಜರಾತಿ  ವ್ಯವಸ್ಥೆ ಜಾರಿಗೆ ಯೋಜಿಸಲಾಗಿದೆ. ಪ್ರತಿಯೊಬ್ಬ ಶಿಕ್ಷಕ ಹಾಗೂ ವಿದ್ಯಾರ್ಥಿ  ತರಗತಿ ಪ್ರವೇಶಿಸುವಾಗ,  ತರಗತಿ ಮುಗಿದಾಗ ಪಂಚ್ ಮಾಡಲು ಸಾಧ್ಯವಾಗುವಂತೆ ಬಯೋಮೆಟ್ರಿಕ್  ಹಾಜರಾತಿ ವ್ಯವಸ್ಥೆಯನ್ನು ಪ್ರತಿ ಶಾಲಾ ಕೊಠಡಿಯ ಬಳಿ ಅಳವಡಿಸಲಾಗುವುದು. ಹಾಜರಾತಿ ಕೊರತೆ ಎದುರಿಸುವ ವಿದ್ಯಾರ್ಥಿಗಳು  ನ್ಯಾಯಾಲಯದ ಮೊರೆ ಹೋಗಬಹುದು. ಬಯೋಮೆಟ್ರಿಕ್  ಹಾಜರಾತಿ ಒಂದು ದಾಖಲೆಯಾಗಿದ್ದು, ಅದನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಬಹುದು ಎಂದರು

ವಿಶ್ವ ವಿದ್ಯಾಲಯದಲ್ಲಿ ಅಳವಡಿಸಿರುವ ಬಯೋಮೆಟ್ರಿಕ್ ವ್ಯವಸ್ಥೆ, ಸೋಲಾರ್ ಪ್ಯಾನಲ್ ಹಾಗೂ ಸಿಸಿಟಿವಿಗಳ  ಕಾರ್ಯಕ್ಷಮತೆಯನ್ನು ಪರಿಶೀಲಿಸಲು ಅಂತರಿಕ ತನಿಖೆಯನ್ನು ಆರಂಭಿಸಲಾಗುವುದು. ವಿಶ್ವವಿದ್ಯಾಲಯದ  ಆವರಣದಲ್ಲಿನ ಭದ್ರತೆಯನ್ನು ಬಲಪಡಿಸಲು ಹಾಲಿ ಇರುವ  ವ್ಯವಸ್ಥೆಯ ಕಾರ್ಯಕ್ಷಮತೆಯನ್ನು ಪರಿಗಣಿಸಬೇಕಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com