ಪ್ರಸಿದ್ದ ಕವಿ ಸಿದ್ದಲಿಂಗಯ್ಯಗೆ ಪಂಪ ಪ್ರಶಸ್ತಿ

ಪ್ರಸಿದ್ದ ಕವಿ ಡಾ. ಸಿದ್ದಲಿಂಗಯ್ಯ್ ಅವರಿಗೆ ಈ ಸಾಲಿನ ಪಂಪ ಪ್ರಶಸ್ತಿ ಒಲಿದು ಬಂದಿದೆ. ಕರ್ನಾಟಕ ರಾಜ್ಯ ಸರ್ಕಾರ ಕೊಡಮಾಡುವ ಈ ಪ್ರಶಸ್ತಿ ಪ್ರಧಾನ ಸಮಾರಂಭ ಫೆ.೮ಕ್ಕೆ ಬನವಾಸಿಯಲ್ಲಿ ನಡೆಯಲಿದೆ. 
ಸಿದ್ದಲಿಂಗಯ್ಯ
ಸಿದ್ದಲಿಂಗಯ್ಯ

ಬೆಂಗಳೂರು: ಪ್ರಸಿದ್ದ ಕವಿ ಡಾ. ಸಿದ್ದಲಿಂಗಯ್ಯ್ ಅವರಿಗೆ ಈ ಸಾಲಿನ ಪಂಪ ಪ್ರಶಸ್ತಿ ಒಲಿದು ಬಂದಿದೆ. ಕರ್ನಾಟಕ ರಾಜ್ಯ ಸರ್ಕಾರ ಕೊಡಮಾಡುವ ಈ ಪ್ರಶಸ್ತಿ ಪ್ರಧಾನ ಸಮಾರಂಭ ಫೆ.೮ಕ್ಕೆ ಬನವಾಸಿಯಲ್ಲಿ ನಡೆಯಲಿದೆ.

ಪಂಪ ಪ್ರಶಸ್ತಿ ಐದು ಲಕ್ಷ ರು. ನಗದು ಹಾಗೂ ಪ್ರಶಸ್ತಿ ಫಲಕ ಹೊಂದಿದೆ. ಮಲ್ಲೇಪುರ ಜಿ. ವೆಂಕಟೇಶ್ ನೇತೃತ್ವದ ಆಯ್ಕೆ ಸಮಿತಿ ಸಿದ್ದಲಿಂಗಯ್ಯನವರ ಹೆಸರನ್ನು ಪ್ರಶಸ್ತಿಗಾಗಿ ಆಯ್ಕೆ ಮಾಡಿದೆ.

ದಲಿತ ಹಾಗೂ ಬಂಡಾಯ ಸಾಹಿತ್ಯದ ಕಾಲಘಟ್ಟದಲ್ಲಿ ಮುಂಚೂಣಿ ಕವಿ ಆಗಿದ್ದ ಸಿದ್ದಲಿಂಗಯ್ಯ ಹೊಲೆಮಾದಿಗರ ಹಾಡು, ಮೆರವಣಿಗೆ, ಸಾವಿರಾರು ನದಿಗಳು, ಕಪ್ಪು ಕಾಡಿನ ಹಾಡು ಸೇರಿ ಹಲವು ಕವನ ಸಂಕಲನ, ವಿಮರ್ಶಾ ಕೃತಿಗಳನ್ನು ರಚಿಸಿದ್ದಾರೆ. ಅಲ್ಲದೆ ಅವರ "ಊರು ಕೇರಿ" ಎಂಬ ಆತ್ಮಕಥನ ಸಹ ಬಹಳವೇ ಜನಪ್ರಿಯವಾಗಿದೆ.

ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ, ರಾಜ್ಯೋತ್ಸವ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿ ಪುರಸ್ಕಾರಕ್ಕೆ ಭಾಜನರಾಗಿರುವ ಸಿದ್ದಲಿಂಗಯ್ಯನವರಿಗೆ ಈ ಬಾರಿಯ ಪಂಪ ಪ್ರಶಸ್ತಿ ಸಿಕ್ಕಿರುವುದು ಸಾಹಿತ್ಯಾಭಿಮಾನಿಗಳಿಗೆ ಖುಷಿ ತಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com