ಇಸ್ರೋ ಅಧ್ಯಕ್ಷ ಕೆ.ಶಿವನ್ ನನಗೆ ಸ್ಫೂರ್ತಿ: ಚಿನ್ನದ ಪದಕ ಪಡೆದ ತರಕಾರಿ ಮಾರುವ ದಂಪತಿ ಪುತ್ರಿ ಲಲಿತಾ 

ವ್ಯಾಸಂಗಕ್ಕೆ ಅಡ್ಡಿಯಾದ ಎಲ್ಲಾ ತೊಡಕುಗಳನ್ನು ನಿವಾರಿಸಿಕೊಂಡು ತನ್ನ ಗುರಿ ಸಾಧಿಸಿರುವ ಚಿತ್ರದುರ್ಗದ ಆರ್ ಲಲಿತಾ  ಏರೋನಾಟಿಕಲ್ ಎಂಜಿನಿಯರಿಂಗ್ ವಿಭಾಗದಲ್ಲಿ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ
ಪೋಷಕರ ಜೊತೆ ಲಲಿತಾ
ಪೋಷಕರ ಜೊತೆ ಲಲಿತಾ
Updated on

ಚಿತ್ರದುರ್ಗ:  ವ್ಯಾಸಂಗಕ್ಕೆ ಅಡ್ಡಿಯಾದ ಎಲ್ಲಾ ತೊಡಕುಗಳನ್ನು ನಿವಾರಿಸಿಕೊಂಡು ತನ್ನ ಗುರಿ ಸಾಧಿಸಿರುವ ಚಿತ್ರದುರ್ಗದ ಆರ್ ಲಲಿತಾ  ಏರೋನಾಟಿಕಲ್ ಎಂಜಿನಿಯರಿಂಗ್ ವಿಭಾಗದಲ್ಲಿ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಈ ಮೂಲಕ ತಂದೆ ತಾಯಿಯಲ್ಲಿ ಹೆಮ್ಮೆ ಮೂಡಿಸಿದ್ದಾರೆ.

2020ರ ಫೆಬ್ರವರಿ 8ರಂದು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯುವ 19ನೇ ಘಟಿಕೋತ್ಸವದಲ್ಲಿ ಏರೋಸ್ಪೇಸ್ ಎಂಜಿನಿಯರಿಂಗ್ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿರುವ ಲಲಿತಾ ಆರ್ ಅವಳಿ ಚಿನ್ನದ ಪದಕ ಪಡೆದಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದ ಕೆ.ರಾಜೇಂದ್ರ ಮತ್ತು ಆರ್. ಚಿತ್ರಾ ದಂಪತಿಯ ಮಗಳು ಆರ್.ಲಲಿತಾ ಏರೋನಾಟಿಕ್ಸ್ ಎಂಜಿನಿಯರಿಂಗ್ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದವರು. ಈ ದಂಪತಿಗೆ ಮೂವರು ಹೆಣ್ಣು ಮಕ್ಕಳು. 

ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಬೇಕು ಎಂಬುದು ಈ ದಂಪತಿ ಬಯಕೆ. ಮೊದಲನೇ ಮಗಳು ಲಲಿತಾ ಏರೋನಾಟಿಕಲ್ ಎಂಜಿನಿಯರಿಂಗ್, ಎರಡನೇ ಮಗಳು ಭುವನ ಫ್ಯಾಷನ್ ಡಿಸೈನಿಂಗ್ ಓದುತ್ತಿದ್ದಾರೆ. ಕೊನೆಯ ಮಗಳು ತುಳಸಿ ಹಿರಿಯೂರಿನಲ್ಲಿ ಸಿವಿಲ್ ಡಿಪ್ಲೊಮಾ ಓದುತ್ತಿದ್ದಾರೆ.

ಲಲಿತಾ ಅವರು ಪ್ರಾಥಮಿಕ ಶಿಕ್ಷಣವನ್ನು ನಗರದ ವಾಗ್ದೇವಿ ಶಾಲೆಯಲ್ಲಿ ಮುಗಿಸಿ, ಚಿತ್ರದುರ್ಗದ ಎಸ್.ಆರ್.ಎಸ್ ಕಾಲೇಜಿನಲ್ಲಿ ಪಿಯುಸಿ ಓದಿದರು. ಬಳಿಕ ಬೆಂಗಳೂರಿನ ಯಲಹಂಕದ ಈಸ್ಟ್ ವೆಸ್ಟ್ ಏರೋನಾಟಿಕಲ್ ಎಂಜನಿಯರಿಂಗ್ ವಿಭಾಗದಲ್ಲಿ ಪ್ರವೇಶ ಪಡೆದು, ಸತತ ಮೂರು ವರ್ಷಗಳ ಕಾಲ ಪ್ರಥಮ ಸ್ಥಾನ ಪಡೆದರು. ಇದಕ್ಕೆ ಪ್ರತಿಫಲವಾಗಿ ಕೊನೆಯ ವರ್ಷ ಉಚಿತ ಹಾಸ್ಟೆಲ್ ವ್ಯವಸ್ಥೆ ಲಭಿಸಿತು. ಈಗ ವಿಟಿಯುಗೆ ಮೊದಲ ಸ್ಥಾನ ಗಳಿಸಿದ್ದಾರೆ.

ಸುಮಾರು 40 ವರ್ಷಗಳಿಂದ ತರಕಾರಿ ಮಾರಾಟ ಮಾಡಿಕೊಂಡು ಬಂದಿರುವ ಈ ಕುಟುಂಬ ಕಷ್ಟಪಟ್ಟು ದುಡಿಯುತ್ತಿದೆ. ಆದರೆ ಓದಲು ಸಾಧ್ಯವಾಗದೇ ಕಂಗಾಲಾಗಿದ್ದ ದಂಪತಿ.  ಎಷ್ಟೇ ಕಷ್ಟ ಬಂದರೂ ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಬೇಕೆಂದು ತೀರ್ಮಾನಿಸಿದ್ದಾರೆ. ಅವರ ಆಸೆ ಪೂರೈಸುತ್ತಿದ್ದುಕಷ್ಟಕ್ಕೆ ಈಗ ಫಲ ಸಿಕ್ಕಿದೆ ಎಂದು ಲಲಿತ ಅವರ ಪೋಷಕರು ಸಂತಸ ವ್ಯಕ್ತಪಡಿಸಿದ್ದಾರೆ.

ತಂದೆ ತಾಯಿಯ ಪ್ರೋತ್ಸಾಹದಿಂದ ನಾನು ಪ್ರಥಮ ಸ್ಥಾನ ಪಡೆಯಲು ಸಾಧ್ಯವಾಗಿದೆ. ಕಷ್ಟಪಟ್ಟು ಅಪ್ಪ ಅಮ್ಮ ನಮ್ಮನ್ನು ಓದಿಸುತ್ತಿದ್ದಾರೆ. ಹೀಗಾಗಿ ಪ್ರತಿನಿತ್ಯ ನಾನೂ ಕಷ್ಟಪಟ್ಟು ಓದುತ್ತಿದ್ದೆ. ಇದೀಗ ಪ್ರಥಮ ಸ್ಥಾನ ಬಂದಿರುವುದು ಖುಷಿ ನೀಡಿದೆ. ನನಗೆ ಇಸ್ರೋ ಅಧ್ಯಕ್ಷ ಕೆ, ಶಿವನ್ ಅವರ ಸ್ಫೂರ್ತಿಯಾಗಿದ್ದಾರೆ. ನಾನು Gate ಪರೀಕ್ಷೆ ಪಾಸು ಮಾಡಿದ್ದೇನೆ, ಎರೋ ಸ್ಪೇಸ್ ನಲ್ಲಿ ನಾನು ಎಂಎಸ್ ಮಾಡಬೇಕೆಂಬುದೇ ನನ್ನ ಆಸೆ,  ನಾನು ಸಣ್ಣ ಊರಿನಿಂದ ಬಂದಿದ್ದೇನೆ,  ನನ್ನ ಸಮರ್ಪಣೆ ನನ್ನ ಸಾಧನಗೆ ಕಾರಣ.

ಬಾಹ್ಯಾಕಾಶ ವಿಜ್ಞಾನಿಯಾಗುವುದು ನನ್ನ ಕನಸು, ಪ್ರಪಂಚದಾದ್ಯಂತ ಹಲವು ಬಾಹ್ಯಕಾಶ ಸಂಸ್ಥೆಗಳಿವೆ, ಆದರೆ ಇಸ್ರೋ ಅಥವಾ ಐಐಎಸ್ ಸಿಯಲ್ಲಿ ಕೆಲಸ ಮಾಡುವುದೇ ನನ್ನ ಕನಸು ಎಂದು ಲಲಿತಾ ತಿಳಿಸಿದ್ದಾರೆ.

ಸದ್ಯಕ್ಕ ಲಲಿತಾ ಖಾಸಗಿ ಬಾಹ್ಯಕಾಶ ಎಂಜಿನೀಯರಿಂಗ್ ಕಂಪನಿಯೊಂದರಲ್ಲಿ  ಇಂಟರ್ನಶಿಪ್ ಮಾಡುತ್ತಿದ್ದಾರೆ,  ಇದರ ಜೊತೆ ಐಐಎಸ್ ಸಿ ಮತ್ತು ಇಸ್ರೋ ಪರೀಕ್ಷೆಗಳಿಗೂ ಸಿದ್ದತೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com