ಶಾಹೀನ್ ಶಾಲಾ ಪ್ರಕರಣ ಹಿಂಪಡೆದು ಬಂಧಿತರನ್ನು ರಿಲೀಸ್ ಮಾಡಿ- ಯಡಿಯೂರಪ್ಪಗೆ ಈಶ್ವರ್ ಖಂಡ್ರೆ ಪತ್ರ

ಬೀದರ್ ಶಾಹೀನ್    ಶಾಲಾ ಪ್ರಕರಣ ಹಿಂಪಡೆದು ಬಂಧಿತರನ್ನು ಬಿಡುಗಡೆಗೊಳಿಸುವಂತೆ ಹಾಗೂ 2019-20ರ ಬಜೆಟ್‌ನಲ್ಲಿ ಬೀದರ್‌ ಅಭಿವೃದ್ಧಿಗೆ ಘೋಷಿಸಲಾಗಿದ್ದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವಂತೆ  ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಪ್ರತ್ಯೇಕ ಪತ್ರ ಬರೆದಿದ್ದಾರೆ. 
ಈಶ್ವರ ಖಂಡ್ರೆ
ಈಶ್ವರ ಖಂಡ್ರೆ

ಬೆಂಗಳೂರು: ಬೀದರ್ ಶಾಹೀನ್    ಶಾಲಾ ಪ್ರಕರಣ ಹಿಂಪಡೆದು ಬಂಧಿತರನ್ನು ಬಿಡುಗಡೆಗೊಳಿಸುವಂತೆ ಹಾಗೂ 2019-20ರ ಬಜೆಟ್‌ನಲ್ಲಿ ಬೀದರ್‌ ಅಭಿವೃದ್ಧಿಗೆ ಘೋಷಿಸಲಾಗಿದ್ದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವಂತೆ  ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಪ್ರತ್ಯೇಕ ಪತ್ರ ಬರೆದಿದ್ದಾರೆ.

ಹಿಂದುಳಿದ ಬೀದರ್ ಜಿಲ್ಲೆಯಲ್ಲಿ ಶಾಹೀನ್ ಶಿಕ್ಷಣ ಸಂಸ್ಥೆ ಕಳೆದ ಹತ್ತಾರು ವರ್ಷದಿಂದ ಜಿಲ್ಲೆಯಲ್ಲಿ ಉತ್ತಮಗುಣಮಟ್ಟದ ಶಿಕ್ಷಣ ನೀಡುತ್ತಾ ಬಂದಿದೆ. ಜ.21 ರಂದು ನಾಟಕದಲ್ಲಿ ಮೋದಿ ಅವರನ್ನು ವಿದ್ಯಾರ್ಥಿಗಳು ನಿಂದಿಸಿದ್ದನ್ನೂ ಸಮರ್ಥಿಸುತ್ತಿಲ್ಲವಾದರೂ ಗುಬ್ಬಿಯ ಮೇಲೆ ಬ್ರಾಹ್ಮಾಸ್ತ್ರ ಎನ್ನುವಂತೆ ಶಾಲೆಯ ಮುಖ್ಯಶಿಕ್ಷಕಿ ಹಾಗೂ ವಿದ್ಯಾರ್ಥಿನಿ ತಾಯಿಯನ್ನು ಬಂಧಿಸಿರುವುದು ಸರಿಯಲ್ಲ ಎಂಧರು.

ಅವರ ಮೇಲೆ ದುರುದ್ದೇಶಪೂರಕ ದಾಖಲಿಸಿರುವ ದೇಶದ್ರೋಹ ಕೇಸ್ ವಾಪಸ್ ಪಡೆಯಬೇಕು.ತನಿಖಾಧಿಕಾರಿಗಳು ಸ್ಕೂಲ್ ಗೆ ಹೋಗಿ ತನಿಖೆ ನಡೆಸುತ್ತಿರುವುದರಿಂದ ವಿದ್ಯಾರ್ಥಿಗಳು ಭಯ ಭೀತಿಗೊಂಡಿದ್ದಾರೆ.ಪ್ರಕರಣ ಹಿಂಪಡೆದು ಶಿಕ್ಷಕಿ ಮತ್ತು ವಿದ್ಯಾರ್ಥಿನಿ ತಾಯಿಯನ್ನು ಬಿಡುಗಡೆ ಮಾಡುವಂತೆ ಪತ್ರದಲ್ಲಿ ಖಂಡ್ರೆ ಒತ್ತಾಯಿಸಿದ್ದಾರೆ.

2019-20ನೇ ಸಾಲಿನ ಬಜೆಟ್ ವಿಶೇಷ ಪ್ಯಾಕೆಜ್ ಅಡಿ ಬೀದರ್ ಅಭಿವೃದ್ಧಿಗೆ 300ಕೋಟಿ ರೂ.ಮಂಜೂರಾಗಿತ್ತು.ಬರಗಾಲದಿಂದ ಜಿಲ್ಲೆಯಲ್ಲಿ ನೀರಿನ ತೊಂದರೆ ತಲೆದೋರಿದ್ದು ತಕ್ಷಣವೇ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಈಶ್ವರ್ ಖಂಡ್ರೆ ಮನವಿ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com