'ನಮಗೆ ವಿಕಾಸ ಸೌಧ ಬೇಡ, ವಿಧಾನ ಸೌಧವೇ ಬೇಕು': ನೂತನ ಸಚಿವರ ವಿಚಿತ್ರ ಬೇಡಿಕೆ! 

ಹಿಂದಿನ ಮೈತ್ರಿ ಸರ್ಕಾರಕ್ಕೆ 10 ಮಂದಿ ಕಾಂಗ್ರೆಸ್  ಮತ್ತು ಜೆಡಿಎಸ್ ಶಾಸಕರು ರಾಜೀನಾಮೆ ನೀಡಿ ಮತ್ತೆ ಉಪ ಚುನಾವಣೆಯಲ್ಲಿ ನಿಂತು ಗೆದ್ದುಬಂದು ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದಾಗಿದೆ. ಆದರೆ ಈ ಸಚಿವರಲ್ಲಿ ಕೆಲವರಿಗೆ ತಮಗೆ ಹಂಚಿಕೆ ಮಾಡಲಾದ ಕೊಠಡಿಗಳ ಬಗ್ಗೆ ಸಮಾಧಾನವಿಲ್ಲ.
'ನಮಗೆ ವಿಕಾಸ ಸೌಧ ಬೇಡ, ವಿಧಾನ ಸೌಧವೇ ಬೇಕು': ನೂತನ ಸಚಿವರ ವಿಚಿತ್ರ ಬೇಡಿಕೆ! 

ಬೆಂಗಳೂರು: ಹಿಂದಿನ ಮೈತ್ರಿ ಸರ್ಕಾರಕ್ಕೆ 10 ಮಂದಿ ಕಾಂಗ್ರೆಸ್  ಮತ್ತು ಜೆಡಿಎಸ್ ಶಾಸಕರು ರಾಜೀನಾಮೆ ನೀಡಿ ಮತ್ತೆ ಉಪ ಚುನಾವಣೆಯಲ್ಲಿ ನಿಂತು ಗೆದ್ದುಬಂದು ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದಾಗಿದೆ. ಆದರೆ ಈ ಸಚಿವರಲ್ಲಿ ಕೆಲವರಿಗೆ ತಮಗೆ ಹಂಚಿಕೆ ಮಾಡಲಾದ ಕೊಠಡಿಗಳ ಬಗ್ಗೆ ಸಮಾಧಾನವಿಲ್ಲ. ಅದಕ್ಕೆ ಸಿಎಂ ಯಡಿಯೂರಪ್ಪ ಅವರ ಬಳಿ ವಿಕಾಸ ಸೌಧದ ಬದಲಾಗಿ ವಿಧಾನ ಸೌಧದಲ್ಲಿಯೇ ತಮಗೆ ಕೊಠಡಿ ಕೊಡಿ ಎಂದು ಕೇಳುತ್ತಿದ್ದಾರೆ.


ಕಳೆದ ವಾರ ರಾಜಭವನದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ನೂತನ ಸಚಿವರಿಗೆ ಕೊಠಡಿ ಹಂಚಿಕೆ ಮಾಡಲಾಯಿತು. 10 ಮಂದಿಯಲ್ಲಿ 6 ಮಂದಿಗೆ ವಿಧಾನ ಸೌಧದಲ್ಲಿ ನಾಲ್ವರಿಗೆ ವಿಕಾಸ ಸೌಧದಲ್ಲಿ ನೀಡಲಾಯಿತು. ನೀರಾವರಿ ಸಚಿವ ರಮೇಶ್ ಜಾರಕಿಹೊಳಿಗೆ ವಿಕಾಸ ಸೌಧದಲ್ಲಿ ಹಂಚಿಕೆ ಮಾಡಲಾಗಿದೆ. ಅದಕ್ಕೆ ಅವರು ತಮಗೆ ವಿಧಾನ ಸೌಧದಲ್ಲಿಯೇ ಕೊಠಡಿ ಕೊಡಿ ಎಂದು ಕೇಳುತ್ತಿದ್ದಾರಂತೆ. ಹಿಂದಿನ ಸರ್ಕಾರದಲ್ಲಿ ನೀರಾವರಿ ಸಚಿವರಾಗಿದ್ದ ಡಿ ಕೆ ಶಿವಕುಮಾರ್ ಅವರಿದ್ದ ಕೊಠಡಿಯೇ ಬೇಕಂತೆ. ಕೃಷಿ ಸಚಿವ ಬಿ ಸಿ ಪಾಟೀಲ್ ಅವರು ಇತ್ತೀಚೆಗೆ ವಿಧಾನ ಸೌಧಕ್ಕೆ ಹೋಗಿ ತಮ್ಮ ಕೊಠಡಿ ಇದೆಯೇ ಎಂದು ತಪಾಸಣೆ ಮಾಡಿದ್ದರು. ಅವರಿಕೆ ವಿಕಾಸ ಸೌಧದಲ್ಲಿ ಕೊಠಡಿ ಹಂಚಿಕೆಯಾಗಿದೆ.


2005ರಲ್ಲಿ, ಎಸ್ ಎಂ ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ವಿಕಾಸ ಸೌಧ ಉದ್ಘಾಟನೆಯಾಗಿದ್ದು. ವಿಧಾನ ಸೌಧದ ತದ್ರೂಪಿ ಕಟ್ಟಡವಿದು. ಹೆಚ್ಚಿನ ಸಚಿವರು ಮತ್ತು ಅಧಿಕಾರಿಗಳಿಗೆ ಜಾಗದ ಸಮಸ್ಯೆ ವಿಧಾನ ಸೌಧದಲ್ಲಿ ಉಂಟಾದಾಗ ವಿಕಾಸ ಸೌಧವನ್ನು ಕಟ್ಟಲಾಯಿತು. ವಿಕಾಸ ಸೌಧ ಬಳಕೆಗೆ ಮುಕ್ತವಾಗಿ 15 ವರ್ಷವಾಗಿದೆ, ಆದರೂ ಸಚಿವರು ಅಲ್ಲಿಗೆ ಹೋಗಲು ನಿರಾಕರಿಸುತ್ತಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com