

ಬೆಂಗಳೂರು: ನಮ್ಮ ಮೆಟ್ರೋದ ಮತ್ತೊಂದು ಹಂತದ ಮಾರ್ಗ ಇದೇ ವರ್ಷ ಕಾರ್ಯಾರಂಭ ಮಾಡಲಿದೆ.
ಪರೀಕ್ಷಾರ್ಥ ಸಂಚಾರ ಅಂದುಕೊಂಡಂತೆಯೇ ನಡೆದರೆ ಅಂಜನಾಪುರ ಟೌನ್ಶಿಪ್ ವರಗೆ ಮತ್ತು ಕೆಂಗೇರಿ ವರಗಿನ 72.1 ಕಿ.ಮೀ ವ್ಯಾಪ್ತಿಯ 2ನೇ ಹಂತದ ಮಾರ್ಗ ಇದಾಗಿದ್ದು ಎರಡು ವಿಸ್ತೃತ ಮಾರ್ಗಗಳಿಗೆ ಮೆಟ್ರೋ ಸಂಪರ್ಕ ಲಭ್ಯವಾಗಲಿದೆ.
ಹೊಸ ಮಾರ್ಗ ಯೆಲಚೇನಹಳ್ಳಿ ರಸ್ತೆಯಿಂದ ಅಂಜನಾಪುರ ಟೌನ್ ಶಿಪ್ ಹಾಗೂ ಮೈಸೂರು ರಸ್ತೆಯಿಂದ ಕೆಂಗೇರಿ ವರೆಗೂ ಇರಲಿದೆ. ಬಿಎಂಆರ್‌ಸಿಎಲ್ ಎಂಡಿ ಅಜಯ್ ಸೇಠ್ ಈ ಬಗ್ಗೆ ಮಾಹಿತಿ ನೀಡಿದ್ದು, ಆಗಸ್ಟ್ 15 ರಿಂದ ಕನಕಪುರ ರಸ್ತೆಯ ಮೂಲಕ ಹಾದು ಹೋಗುವ ಅಂಜನಾಪುರ ಲೈನ್ ಕಾರ್ಯಾರಂಭ ಮಾಡಲಿದೆ. ಮೈಸೂರು ರಸ್ತೆ ಲೈನ್ ನ.1 ರಿಂದ ಕಾರ್ಯಾರಂಭವಾಗಲಿದೆ. ಕನಕಪುರ ರಸ್ತೆಯ ಪರೀಕ್ಷಾರ್ಥ ಸಂಚಾರ ಏಪ್ರಿಲ್ ನಿಂದ ಪ್ರಾರಂಭವಾಗಲಿದೆ ಎಂದು ಹೇಳಿದ್ದಾರೆ.