ರಾಜ್ಯ
ಬನ್ನೇರುಘಟ್ಟ ಉದ್ಯಾನವನವನ್ನು ಸೂಕ್ಷ್ಮ ವಲಯವಾಗಿ ಕೂಡಲೇ ಘೋಷಿಸಿ: ಬಿ ಎಸ್ ಯಡಿಯೂರಪ್ಪ ಕೇಂದ್ರಕ್ಕೆ ಪತ್ರ
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನವನ್ನು ಕೂಡಲೇ ಪರಿಸರ ಸೂಕ್ಷ್ಮ ವಲಯವನ್ನಾಗಿ(ಇಎಸ್ ಝಡ್) ಘೋಷಿಸಿ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಬೆಂಗಳೂರು: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನವನ್ನು ಕೂಡಲೇ ಪರಿಸರ ಸೂಕ್ಷ್ಮ ವಲಯವನ್ನಾಗಿ(ಇಎಸ್ ಝಡ್) ಘೋಷಿಸಿ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಈ ಕುರಿತು ಕೇಂದ್ರ ಪರಿಸರ ಮತ್ತು ಅರಣ್ಯ ಖಾತೆ ಸಚಿವ ಪ್ರಕಾಶ್ ಜಾವದೇಕರ್ ಅವರಿಗೆ ಪತ್ರ ಬರೆದಿರುವ ಅವರು, ರಾಜ್ಯ ಸರ್ಕಾರದ ಶಿಫಾರಸಿನಂತೆ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನವನ್ನು ಪರಿಸರ ಸೂಕ್ಷ್ಮ ವಲಯವನ್ನಾಗಿ ಘೋಷಿಸಿ ಅಧಿಸೂಚನೆ ಹೊರಡಿಸಿ. ಅಂತಿಮ ಅಧಿಸೂಚನೆ ಹೊರಬರದ ಕಾರಣ ಅಲ್ಲಿ ಅನೇಕ ಅಭಿವೃದ್ಧಿ ಯೋಜನೆಗಳು ನಿಂತುಹೋಗಿವೆ ಎಂದಿದ್ದಾರೆ.
ಬೆಂಗಳೂರು ನಗರಕ್ಕೆ ಹತ್ತಿರದಲ್ಲಿ ಈ ಉದ್ಯಾನವನ ಇರುವುದರಿಂದ ರಾಜ್ಯ ಸರ್ಕಾರ ಪರಿಸರ ಸೂಕ್ಷ್ಮ ವಲಯ ಪ್ರದೇಶವನ್ನು 100 ಮೀಟರ್ ನಿಂದ 1 ಕಿಲೋ ಮೀಟರ್ ಅಂತರದಲ್ಲಿ 268.96 ಚದರ ಕಿಲೋ ಮೀಟರ್ ನಿಂದ 168.84 ಚದರ ಕಿಲೋ ಮೀಟರ್ ಗೆ ತಗ್ಗಿಸಬೇಕೆಂದು ಪತ್ರದಲ್ಲಿ ಸಿಎಂ ಒತ್ತಾಯಿಸಿದ್ದಾರೆ.

