ಬಳ್ಳಾರಿ ವಿಭಜಿಸಿ, ಹರಪನಹಳ್ಳಿಯನ್ನು ಪ್ರತ್ಯೇಕ ಜಿಲ್ಲೆಯಾಗಿಸಿ: ಕರುಣಾಕರ ರೆಡ್ಡಿ

ಅಖಂಡ ಬಳ್ಳಾರಿ ಜಿಲ್ಲೆಯನ್ನು ಮೂರು ಭಾಗ ಮಾಡಿ ಹರಪನಹಳ್ಳಿ ತಾಲೂಕನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ಮಾಡಬೇಕು ಎಂದು ಮುಖ್ಯಮಂತ್ರಿಗೆ ಶಾಸಕ ಕರುಣಾಕರ್ ರೆಡ್ಡಿ ನೇತೃತ್ವದ ನಿಯೋಗ ಮನವಿ ಮಾಡಿದೆ
ಕರುಣಾಕರ ರೆಡ್ಡಿ
ಕರುಣಾಕರ ರೆಡ್ಡಿ

ಬೆಂಗಳೂರು: ಅಖಂಡ ಬಳ್ಳಾರಿ ಜಿಲ್ಲೆಯನ್ನು ಮೂರು ಭಾಗ ಮಾಡಿ ಹರಪನಹಳ್ಳಿ ತಾಲೂಕನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ಮಾಡಬೇಕು ಎಂದು ಮುಖ್ಯಮಂತ್ರಿಗೆ ಶಾಸಕ ಕರುಣಾಕರ್ ರೆಡ್ಡಿ ನೇತೃತ್ವದ ನಿಯೋಗ ಮನವಿ ಮಾಡಿದೆ.

ಆಮೂಲಕ ವಿಜಯನಗರ ಜಿಲ್ಲೆಯ ಪ್ರಸ್ತಾವನೆ ಮುಂದಿಟ್ಟಿರುವ ಆನಂದ್ ಸಿಂಗ್ ಹೋರಾಟಕ್ಕೆ ಹಿನ್ನಡೆಯನ್ನುಂಟು ಮಾಡಲು ರೆಡ್ಡಿ ಬ್ರದರ್ಸ್ ಮುಂದಾಗಿದ್ದಾರೆ.

ಹರಪನಹಳ್ಳಿಯನ್ನು ಜಿಲ್ಲೆಯನ್ನಾಗಿ ಮಾಡಬೇಕು ಎಂದು ಅದೇ ಕ್ಷೇತ್ರದ ಬಿಜೆಪಿ ಶಾಸಕ ಕರುಣಾಕರ್ ರೆಡ್ಡಿ ನೇತೃತ್ವದಲ್ಲಿ 30ಕ್ಕೂ ಅಧಿಕ ಮಂದಿಯ ನಿಯೋಗ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ವಿಧಾನಸೌಧದಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿದೆ.

ಈಗಾಗಲೇ ಸಚಿವ ಆನಂದ್ ಸಿಂಗ್ ಅವರು ಬಳ್ಳಾರಿಯ ಜಿಲ್ಲೆಯ ವಿಜಯನಗರವನ್ನು ಜಿಲ್ಲೆಯನ್ನಾಗಿ ಮಾಡಬೇಕು ಎಂದು ಬಲವಾಗಿ ಪಟ್ಟುಹಿಡಿದಿದ್ದಾರೆ. ಆದರೆ, ಆನಂದ್ ಸಿಂಗ್ ಅವರ ಬೇಡಿಗೆಗೆ ಬಳ್ಳಾರಿಯ ಬಿಜೆಪಿ ಮುಖಂಡರು ವಿರೋಧ ವ್ಯಕ್ತಪಡಿಸಿದ್ದಾರೆ. 

ಪ್ರಮುಖವಾಗಿ ಇದೇ ಕರಣಾಕರ್ ರೆಡ್ಡಿ ಬಳ್ಳಾರಿಯಿಂದ ವಿಜಯನಗರವನ್ನು ಪ್ರತ್ಯೇಕಗೊಳಿಸಿ ಜಿಲ್ಲೆ ಮಾಡುವುದಕ್ಕೆ ಬಲವಾಗಿ ವಿರೋಧಿಸಿದ್ದರು. ಇದೀಗ ಆನಂದ್​ ಸಿಂಗ್​ ಅವರಿಗೆ ಸೆಡ್ಡು ಹೊಡೆಯಲು ಕರುಣಾಕರ್ ರೆಡ್ಡಿ ಪ್ರತ್ಯೇಕ ಜಿಲ್ಲೆಯ ತಂತ್ರ ಹೆಣೆದಿದ್ದಾರೆ ಎನ್ನಲಾಗುತ್ತಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com