ಮಹಾಶಿವರಾತ್ರಿ ಹಿನ್ನೆಲೆ: ಮಹಾದೇಶ್ವರ ಬೆಟ್ಟದಲ್ಲಿ ಜನವೋ ಜನ, ಅರಣ್ಯಾಧಿಕಾರಿಗಳು ಕಂಗಾಲು

ಮಹಾ ಶಿವರಾತ್ರಿ ಹಿನ್ನೆಲೆಯಲ್ಲಿ ಮಲೆ ಮಹಾದೇಶ್ವರ ದೇವಾಲಯದಲ್ಲಿ ಹೆಚ್ಚುತ್ತಿರುವ ಭಕ್ತಾದಿಗಳ ಸಂಖ್ಯೆಯಿಂದಾಗಿ ಅರಣ್ಯಾಧಿಕಾರಿಗಳಿಗೆ ಆತಂಕ ಹೆಚ್ಚಾಗಿದೆ.
ಮಹದೇಶ್ವರ ಬೆಟ್ಟ ದೇವಾಲಯ
ಮಹದೇಶ್ವರ ಬೆಟ್ಟ ದೇವಾಲಯ

ಬೆಂಗಳೂರು: ಮಲೆ ಮಹಾದೇಶ್ವರ ದೇವಾಲಯದಲ್ಲಿ ಹೆಚ್ಚುತ್ತಿರುವ ಭಕ್ತಾದಿಗಳ ಸಂಖ್ಯೆಯಿಂದಾಗಿ ಅರಣ್ಯಾಧಿಕಾರಿಗಳಿಗೆ ಆತಂಕ ಹೆಚ್ಚಾಗಿದೆ.

ಮಹದೇಶ್ವರ ಬೆಟ್ಟದ ತಪ್ಪಲಿನಲ್ಲಿ ಜನಸಂದಣಿ ಹೆಚ್ಚುತ್ತಿದೆ, ಕಾವೇರಿ ನದಿ ದಂಡೆ ಹಾಗೂ ಕಾವೇರಿ ವನ್ಯಜೀವಿ ಧಾಮಗಳಲ್ಲಿ ಭಕ್ತಾದಿಗಳ ಸಂಖ್ಯೆ ಹೆಚ್ಚುತ್ತಿದೆ.

ಮಹಾ ಶಿವರಾತ್ರಿ ಹಿನ್ನೆಲೆಯಲ್ಲಿ ಜನರ ಸಖ್ಯೆ ಹೆಚ್ಚಾಗುತ್ತಿದೆ. ಜನರನ್ನು ನಿಯಂತ್ರಿಸಲು ಮತ್ತು ಪ್ರವಾಸಿಗರಿಂದ ಅರಣ್ಯಕ್ಕೆ ಬೆಂಕಿ ಹಚ್ಚದಂತೆ ನೋಡಿಕೊಳ್ಳಲು  ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಚಿಂತೆಗೀಡು ಮಾಡಿದೆ.

ಕಾಡು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜನರು ಸೇರುವ ಬಗ್ಗೆ ನಿಖರವಾದ ಮಾಹಿತಿಯಿಲ್ಲ,  ವಾಣಿಜ್ಯ ಮಳಿಗೆಗಳನ್ನು ಸ್ಥಾಪಿಸದಂತೆ ನಾವು ನಿಷೇಧ ಹೇರಿದ್ದರೂ, ಜನರನ್ನು ನಿಯಂತ್ರಿಸಲು ನಮಗೆ ಸಾಧ್ಯವಾಗುತ್ತಿಲ್ಲ ಎಂದು ಪೊಲೀಸರು ಆತಂಕಕ್ಕೊಳಗಾಗಿದ್ದಾರೆ.

ಕೆಲವು ಪ್ರವಾಸಿಗರು ಕಾಡಿನೊಳಗೆ ಟ್ರೆಕ್ಕಿಂಗ್ ಮಾಡುತ್ತಾರೆ ಜೊತೆಗೆ ಕಾಡಿನೊಳಗೆ ಬೀಡು ಬಿಡುತ್ತಿದ್ದಾರೆ. ಅಲ್ಲಿಗೆ ಬರುತ್ತಿರುವ ಜನ ನದಿಯ ನೀರಿನಲ್ಲಿ ಸ್ನಾನ ಮಾಡುವುದರ ಜೊತೆಗೆ ಬಟ್ಟೆ ಹಾಗೂ ಪಾತ್ರೆ ತೊಳೆಯುತ್ತಾರೆ, ಹಾಗೂ ಅರಣ್ಯದಲ್ಲಿ ವಾಸ ಮಾಡುತ್ತಿದ್ದಾರೆ. ಪಾದಚಾರಿ ರಸ್ತೆ ಮಾರ್ಗದಲ್ಲಿ ಜನರ ಗುಂಪು ಸುಧಾರಿಸಲು ಹರ ಸಾಹಸ ಪಡೆಯಬೇಕಾಗುತ್ತದೆ.

ಜನರು ಕರ್ಪೂರ, ಒಣ ತೆಂಗಿನ ಚಿಪ್ಪುಗಳು ಮತ್ತು ಒಣ ಹುಲ್ಲುಗಳನ್ನು ಸುಡುತ್ತಿದ್ದಾರೆ. ಬೇಸಿಗೆ ಆರಂಭವಾಗಿರುವುದರಿಂದ ಈ ಬೆಂಕಿ ಕಿಡಿ ಕಾಡ್ಗಿಚ್ಚಿಗೆ ಕಾರಣವಾಗಬಹುದೆಂಬ ಆತಂಕ ಮನೆ ಮಾಡಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.  ತಾಳು ಬೆಟ್ಟದಲ್ಲಿ ಸ್ವಯಂಸೇವಕರು ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ ಎಂದು ಅರಣ್ಯ ಅಧಿಕಾರಿಯೊಬ್ಬರು ಒಪ್ಪಿಕೊಂಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com