ಚಿತ್ರದುರ್ಗಕ್ಕೆ ಮತ್ತೊಂದು ಗರಿ: ಚಳ್ಳಕೆರೆಯಲ್ಲಿ ಸೈನ್ಸ್ ಸಿಟಿ
ಚಿತ್ರದುರ್ಗ: ಚಳ್ಳಕೆರೆ ತಾಲೂಕಿನ ಕುದಾಪುರ ಭಾರತೀಯ ವಿಜ್ಞಾನ ಸಂಸ್ಥೆ ಆವರಣದಲ್ಲಿ ದೇಶದ ಗಮನ ಸೆಳೆಯುವ ಕೌಶಲಾಭಿವೃದ್ಧಿ ಕೇಂದ್ರ ತಲೆ ಎತ್ತಲಿದೆ. ರಾಜ್ಯದಲ್ಲಿ ಇದೇ ಮೊದಲ ಜಿಲ್ಲೆಯಾಗಿದೆ.
ಇದಕ್ಕಾಗಿ ರಾಜ್ಯ ಸರ್ಕಾರ ಸುಮಾರು 8 ಸಾವಿರ ಎಕರೆ ಭೂಮಿಯನ್ನು ನೀಡಿದೆ, ಇದರಲ್ಲಿ ಐಐಎಸ್ ಸಿ, ಇಸ್ರೋ, ಡಿಆರ್ ಡಿಓ ಮತ್ತು ಬಿಎಆರ್ ಸಿ ಗಾಗಿ ಸಂಕೀರ್ಣಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ.
ಬೆಂಗಳೂರು ಮೂಲದ ಐ ಡೆಕ್ ಸಂಸ್ಥೆ ಸೈನ್ಸ್ ಸಿಟಿಗಾಗಿ ಮಾಸ್ಟರ್ ಪ್ಲಾನ್ ವಿನ್ಯಾಸಗೊಳಿಸಿದ್ದು ರಾಜ್ಯ ಸರ್ಕಾರಕ್ಕೆ ರವಾನಿಸಿದೆ, ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಚಿತ್ರದುರ್ಗ ಜಿಲ್ಲಾಧಿಕಾರಿಗಳೆಲ್ಲರೂ ಇದಕ್ಕೆ ಅಗತ್ಯವಾಗಿರುವ ಎಲ್ಲಾ ರೀತಿಯ ಮೂಲಭೂತ ಸೌಕರ್ಯ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳುತ್ತಿದೆ.
ಐಟಿಐ, ಡಿಪ್ಲೊಮಾ, ಇಂಜಿನಿಯರ್ ಪ್ರಾಧ್ಯಾಪಕರಿಗೂ ಇಲ್ಲಿ ತರಬೇತಿ ಸಿಗಲಿದೆ. ಆರು ಸ್ಮಾರ್ಟ್ ಕ್ಲಾಸ್ ರೂಂ, ಕೆಮಿಸ್ಟ್ರಿ, ಬಯಾಲಜಿ, ಫಿಸಿಕ್ಸ್ ಪ್ರಯೋಗಾಲಯಗಳು ಇಲ್ಲಿರಲಿವೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ