ರಾಜ್ಯ
ಶಿವರಾತ್ರಿ ಪ್ರಯುಕ್ತ ಸ್ಮಶಾನದಲ್ಲಿ ಇಷ್ಠಲಿಂಗ ಪೂಜೆ:ಪರಿವಾರ ಸಮೇತ ಊಟ ಮಾಡಿದ ಶಿವಭಕ್ತರು
ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಶಿವಭಕ್ತರು ಶಿವರಾತ್ರಿಯನ್ನು ವಿಶಿಷ್ಟವಾಗಿ ಆಚರಿಸಿ ಗಮನ ಸೆಳೆದಿದ್ದಾರೆ.
ಹೊಸಪೇಟೆ: ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಶಿವಭಕ್ತರು ಶಿವರಾತ್ರಿಯನ್ನು ವಿಶಿಷ್ಟವಾಗಿ ಆಚರಿಸಿ ಗಮನ ಸೆಳೆದಿದ್ದಾರೆ.
ಮೌಢ್ಯ ನಿವಾರಣೆ ಉದ್ದೇಶದಿಂದ ತಾಲ್ಲೂಕಿನ ಪ್ರಗತಿಪರ ಕುಟುಂಬ ಸದಸ್ಯರು ಆಜಾದ್ ನಗರದ ವೀರಶೈವ ರುದ್ರಭೂಮಿಯಲ್ಲಿ ಶಿವರಾತ್ರಿಯನ್ನು ಆಚರಿಸಿದರು.
ಮಹಾ ಶಿವರಾತ್ರಿ ಪ್ರಯುಕ್ತ ಸ್ಮಶಾನದಲ್ಲಿ ಇಷ್ಠಲಿಂಗ ಪೂಜೆ ಮಾಡಿ ತಮ್ಮ ಪರಿವಾರ ಸಮೇತ 20ಕ್ಕೂ ಹೆಚ್ಚು ಕುಟುಂಬದವರು ಊಟ ಮಾಡಿದರು. ಕಾರ್ಯಕ್ರಮದಲ್ಲಿ ಮಹಿಳೆಯರು ಮತ್ತು ಮಕ್ಕಳು ಕೂಡ ಭಾಗವಹಿಸಿದ್ದರು.

